ಉಳ್ಳಾಲ :ನೇತ್ರಾವತಿ ನದಿಗೆ ಹಾರಿದ ವ್ಯಕ್ತಿಯ ಶವ ಪತ್ತೆ

(ನ್ಯೂಸ್ ಕಡಬ) newskadaba.com ಉಳ್ಳಾಲ,ಜೂ.20: ಶುಕ್ರವಾರ ದಂದು ಉಳ್ಳಾಲ ಸೇತುವೆಯಿಂದ ಹಾರಿದ ವ್ಯಕ್ತಿಯ ಶವವು ಶನಿವಾರ ಬೆಳಿಗ್ಗೆ ಪತ್ತೆಯಾಗಿದೆ.ಮೃತ ವ್ಯಕ್ತಿಯನ್ನ ತಲಪಾಡಿ ದೇವಿನಗರ ನಿವಾಸಿ ಸುರೇಂದ್ರ ರೈ(45) ಎಂದು ಗುರುತಿಸಲಾಗಿದೆ. ನದಿಯಲ್ಲಿ ತೇಲುತಿದ್ದ ಶವವನ್ನು ಕಿಂಗ್ಸ್ ಸ್ಟಾರ್ ಉಳಿಯ ಸದಸ್ಯರು ಮೇಲಕೆತ್ತಿದ್ದಾರೆ.ಸುರೇಂದ್ರ ಅವರು ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು, ಆತ್ಮಹತ್ಯೆಗೆ ನಿಖರ ಕಾರಣ ಏನೆಂದು ತಿಳಿದುಬಂದಿಲ್ಲ.

ಶುಕ್ರವಾರ ಅಪರಾಹ್ನ ಸುರೇಂದ್ರ ಅವರ ಫೋನ್ ಸೇತುವೆಯ ಮೇಲೆ ಪತ್ತೆಯಾಗಿತ್ತು ಇದರ ಹಿನ್ನೆಲೆಯಲ್ಲಿ ವ್ಯಕ್ತಿ ನದಿಗೆ ಹಾರಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದ ಸ್ಥಳೀಯರು. ಇಂದು ಬೆಳಿಗ್ಗೆ ಉಳಿಯದ ಕಿಂಗ್ಸ್ ಸ್ಟಾರ್ ಸದಸ್ಯರು ನದಿಯಲ್ಲಿ ತೇಲುತಿದ್ದ ಶವವನ್ನು ಮೇಲಕೆತ್ತಿ ಮಾನವೀಯತೆ ಮೆರೆದಿದ್ದಾರೆ. ಕಂಕನಾಡಿ ಪೊಲೀಸರು ಸ್ಥಳಕ್ಕೆ ತೆರಳಿದ್ದಾರೆ.

Also Read  ಬೆಳ್ತಂಗಡಿ: ಖಾಸಗಿ ಬಸ್ಸಿನ ಚಾಲಕ - ನಿರ್ವಾಹಕರ ಅಜಾಗರೂಕತೆಯ ಪರಿಣಾಮ ► ಬಸ್ಸಿನ ಚಕ್ರದಡಿಗೆ ಬಿದ್ದು ಬಾಲಕ ಮೃತ್ಯು

 

 

error: Content is protected !!
Scroll to Top