(ನ್ಯೂಸ್ ಕಡಬ) newskadaba.com ಪುತ್ತೂರು ,ಜೂ.19: ವೃದ್ದ ದಂಪತಿಗೆ ಆಸರೆಯಾಗುವ ಮೂಲಕ ಕೆಯ್ಯೂರಿನ ಸಬ್ ಇನ್‍ಸ್ಪೆಕ್ಟರ್ ಪ್ರದೀಪ್ ಪೂಜಾರಿಯವರು, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಪುತ್ತೂರು ತಾಲೂಕಿನ ಕೆಯ್ಯೂರಿನ ಕಣಿಯಾರು ನಿವಾಸಿಯಾಗಿರುವ, ಪ್ರಸ್ತುತ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಠಾಣೆಯ ಸಬ್ ಇನ್‍ಸ್ಪೆಕ್ಟರ್ ಆಗಿರುವ ಪ್ರದೀಪ್ ಪೂಜಾರಿ ಅವರು ತನ್ನ ಕರ್ತವ್ಯ ವ್ಯಾಪ್ತಿಯಲ್ಲಿ ಯಾರೂ ಇಲ್ಲದ, ವಂಚನೆಗೆ ಒಳಗಾದ ವೃದ್ದ ದಂಪತಿಯ ಜೀವನ ಕಥೆ ಆಲಿಸಿ, ಅವರಿಗೆ ಜೀವನ ಪರ್ಯಾಂತ ಆಸರೆ ನೀಡಲು ನಿರ್ಧರಿಸಿರುವ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಬಸವನಪುರ ಗ್ರಾಮದ ನಿವಾಸಿ ಗಳಾದ ನರಸಿಂಹಪ್ಪ (85) ಮತ್ತು ಗಂಗಮ್ಮ (75) ಎಂಬ ಹಿರಿಜೀವಗಳಿಗೆ ಪ್ರದೀಪ್ ನೆರವಾಗಿದ್ದಾರೆ. ಕೆಯ್ಯೂರಿನ ಕಣಿಯಾರಿನ ಪ್ರದೀಪ್ ಪೂಜಾರಿ 10 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ
ಈ ದಂಪತಿಯ ಮನೆಗೆ ಬ್ಯಾಂಕ್ ಸಿಬಂದಿ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಯೋರ್ವ ಹಣ ನೀಡುವುದಾಗಿ ಹೇಳಿ ನಂಬಿಸಿ ಅವರ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು, ಆಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದ. ಬಗ್ಗೆ ದೂರು ನೀಡಲು ದಂಪತಿ ಠಾಣೆಗೆ ಬಂದಿದ್ದು, ಪ್ರದೀಪ್ ಅವರ ಕಷ್ಟವನ್ನು ಆಲಿಸಿ ವಂಚಕರನ್ನು ಪತ್ತೆಹಚ್ಚುವ ಭರವಸೆ ನೀಡಿದ್ದಾರೆ.