(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್ 18: ಬುಧವಾರ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ.
ಅಕ್ಬರ್ ಟ್ರಾವೆಲ್ಸ್ ಕುವೈತ್ ಸಹಯೋಗದೊಂದಿಗೆ ಕುವೈತ್‌ನ ಕರ್ನಾಟಕ ಸಂಘಗಳು ಒಂದುಗೂಡಿ , ಕೋವಿಡ್-19 ಮಹಾಮಾರಿಗೆ ಸಿಲುಕಿ ಸಂಕಷ್ಟಕ್ಕೆ ಒಳಗೊಂಡ ಕುವೈಟ್ ಕನ್ನಡಿಗರನ್ನು ತಮ್ಮೂರಿಗೆ ತಲುಪಿಸುವಲ್ಲಿ ಯಶಸ್ವಿಯಾಯಿತು. ಹಿರಿಯ ನಾಗರಿಕರು ,ಗರ್ಭಿಣಿ ಸ್ತ್ರೀಯರು , ಅವಧಿ ಮುಗಿದ ಭೇಟಿ ವೀಸಾ ಹೊಂದಿದವರು, ಕೆಲಸ ಕಳೆದುಕೊಂಡವರು ಹೀಗೆ ತಾಯಿ ನಾಡಿಗೆ ಬರಲಾಗದೆ ಕೋವಿಡ್ 19 ನಿಂದ ಸಮಸ್ಯೆ ಅನುಭವಿಸುತ್ತಿದ್ದ ಒಟ್ಟಾರೆ 165 ಪ್ರಯಾಣಿಕರನ್ನು ಒಳಗೊಂಡ ಖಾಸಗಿ ವಿಮಾನವು ಸುರಕ್ಷಿತವಾಗಿ ಮಂಗಳೂರು ವಿಮಾನ ನಿಲ್ದಾಣವನ್ನು ತಲುಪಿತು.
ಜಜೀರಾ ಏರ್‌ವೇಸ್ ಚಾರ್ಟರ್ ವಿಮಾನವು ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಟರ್ಮಿನಲ್ ನಂ .5 ರಿಂದ ಬೆಳಿಗ್ಗೆ 10:40 ರ ಸುಮಾರಿಗೆ ಹೊರಟು ಸಂಜೆ 5:05 ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿತು.
ತಾಯಿ ನಾಡಿಗೆ ಹಿಂತಿರುಗುವ ಕಾಯುವಿಕೆಯಲ್ಲಿ ಕೆಲವರು ಪ್ರಾಣ ಕಳೆದುಕೊಂಡಿದ್ದರು ಮತ್ತು ಕೆಲವರು ಆಸ್ಪತ್ರೆಗೆ ದಾಖಲಾಗಿದ್ದರು. ಇವರೆಲ್ಲರನ್ನೂ ಕುವೈತ್‌ನ ಕರ್ನಾಟಕ ಸಂಘ ದಣಿವರಿಯಿಲ್ಲದೆ ಕೆಲಸ ಮಾಡಿ, ಸುರಕ್ಷಿತವಾಗಿ ಮನೆಗೆ ಹಿಂತಿರುಗಿಸುವಲ್ಲಿ ಯಶಸ್ವಿಯಾಗಿದ್ದಾರೆ .