ಕೊಣಾಜೆಯಲ್ಲಿ ಆನೆಗಳ ದಾಳಿ ► ಭತ್ತದ ಕೃಷಿ ನಾಶ

(ನ್ಯೂಸ್ ಕಡಬ) newskadaba.com ಕಡಬ,ಸೆ.02, ಕಳೆದ ನಾಲ್ಕು ದಿನಗಳಿಂದ ಕೊಣಾಜೆ ಗ್ರಾಮದ ನೆಕಾೖಜೆ ವ್ಯಾಪ್ತಿಯಲ್ಲಿ ನಿರಂತರ ಆನೆಗಳ ಹಾವಳಿಯಿಂದ ಅಪಾರ ಪ್ರಮಾಣದ ಭತ್ತದ ಕೃಷಿ ನಾಶವಾಗಿದ ಬಗ್ಗೆ ವರದಿಯಾಗಿದೆ.


ಕೊಣಾಜೆ ಗ್ರಾಮದ ನೆಕಾೖಜೆ ನಿವಾಸಿ, ಐತ್ತೂರು ಗ್ರಾ.ಪಂ.ಮಾಜಿ ಸದಸ್ಯ ಲೋಕಯ್ಯ ಗೌಡರ ಗದ್ದೆಗೆ ಕಳೆದ ನಾಲ್ಕು ದಿನಗಳಿಂದ ರಾತ್ರಿ ವೇಳೆಯಲ್ಲಿ ಆನೆಗಳು ದಾಳಿ ನಡೆಸುತ್ತಿದ್ದು ಅಪಾರ ಪ್ರಮಾಣದ ಭತ್ತದ ಕೃಷಿ ನಾಶಗೊಳಿಸಿವೆ ಎಂದು ವರದಿಯಾಗಿದೆ. ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಲೋಕಯ್ಯ ಗೌಡರು, ಕಳೆದ ನಾಲ್ಕು ದಿನಗಳಿಂದ ರಾತ್ರಿ ವೇಳೆಯಲ್ಲಿ ಆನೆಗಳು ಗದ್ದೆಗೆ ದಾಳಿ ಇಟ್ಟು ಕೃಷಿ ನಾಶಗೊಳಿಸುತ್ತಿವೆ.

ರೈತನೇ ದೇಶದ ಬೆನ್ನೆಲುಬು ಎಂದು ಹೇಳಿಕೊಳ್ಳುವ ಸರಕಾರಗಳು ಭತ್ತದ ಬೆಳೆ ಬೆಳೆಯುವ ರೈತನಿಗೆ ಕಾಡುಪ್ರಾಣಿಗಳಿಂದ ತೊಂದರೆಯಾದಾಗ 100, 200, 1 ಸಾವಿರ ಪರಿಹಾರ ನೀಡುತ್ತವೆ. ಈ ಪರಿಹಾರ ಪಡೆಯಬೇಕಾದಲ್ಲಿ ಪರಿಹಾರ ಮೊತ್ತಕ್ಕಿಂತಲೂ ಹೆಚ್ಚು ಖರ್ಚು ಮಾಡಬೇಕಾಗಿದೆ. ಇದಕ್ಕೆ ಸಂಬಂಧಿಸಿದ ದಾಖಲೆ ರೈತ ಸಿದ್ದಪಡಿಸುವ ವೇಳೆಗೆ ಎರಡನೇ ಬೆಳೆಗೆ ಉಳುಮೆಯಾಗುತ್ತದೆ. ಭತ್ತದ ಕೃಷಿ ಪರಿಹಾರದ ಪರಿಷ್ಕರಣೆಯಾಗಬೇಕು. ಈ ಬಗ್ಗೆ ಜನಪ್ರತಿನಿಧಿಗಳು ಮುಂದಾಗಬೇಕು. ಕಾಡಂಚನಿನಲ್ಲಿ ಕಂದಕ ನಿರ್ಮಾಣ ಮಾಡಿದಲ್ಲಿ ರೈತರಿಗೆ ಅನುಕೂಲವಾದಿತು ಎಂದು ಈ ಭಾಗದ ರೈತರಿಂದ ಅಭಿಪ್ರಾಯ ವ್ಯಕ್ತವಾಗಿದೆ.

error: Content is protected !!
Scroll to Top