ಕೆ.ಎಂ.ಸಿ ಆಸ್ಪತ್ರೆಯ ಒ.ಪಿ.ಡಿ ನಾಳೆಯಿಂದ ಆರಂಭ

(ನ್ಯೂಸ್ ಕಡಬ) newskadaba.com ಕಡಬ, ಜೂ 04 . ಮಂಗಳೂರು: ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಫಿಸಿಯೋಥೆರಪಿ ಸೇರಿದಂತೆ ಎಲ್ಲಾ ಒ.ಪಿ.ಡಿ. (ಹೊರ ರೋಗಿ) ವಿಭಾಗಗಳು ಜೂನ್ 5 ರಿಂದ ಬೆಳಿಗ್ಗೆ 9 ರಿಂದ 1 ಗಂಟೆಯವರೆಗೆ ಪುನರಾರಂಭಗೊಳ್ಳಲಿವೆ.

ಹೊರ ರೋಗಿ ಸೇವೆಯನ್ನು ಪಡೆದುಕೊಳ್ಳಬೇಕಾದವರು ದೂರವಾಣಿ ಮೂಲಕ ಮುಂಗಡವಾಗಿ ಸಂದರ್ಶನದ ವೇಳೆಯನ್ನು ನಿಗದಿಪಡಿಸಲಾಗುವುದು ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಜಾನ್ ರಾಮಪುರಮ್ ತಿಳಿಸಿದ್ದಾರೆ.

ಆಸ್ಪತ್ರೆಗೆ ಭೇಟಿ ನೀಡುವರರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಆಸ್ಪತ್ರೆಯ ಆಡಳಿತ ಮಂಡಳಿಯು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಆಸ್ಪತ್ರೆಗೆ ಭೇಟಿ ನೀಡುವ ಪ್ರತಿಯೊಬ್ಬರೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದ್ದು ಒಬ್ಬ ರೋಗಿಯೊಂದಿಗೆ ಒಬ್ಬ ಸಹಾಯಕರಿಗೆ ಮಾತ್ರ ಅವಕಾಶ ನೀಡಲಾಗಿದೆ. ಹೊರ ರೋಗಿ ಸೌಲಭ್ಯವನ್ನು ಪಡೆಯಲು ದೂರವಾಣಿ ಸಂಖ್ಯೆ: 8861586249 / 0824 – 2445858 ಕ್ಕೆ, ಕರೆ ಮಾಡಿ ಸಂದರ್ಶನದ ವೇಳೆಯನ್ನು ನಿಗದಿಪಡಿಸಿಕೊಳ್ಳಬಹುದಾಗಿದೆ.

Also Read  ಎಲ್ಲ ಸಾರಿಗೆ ವಾಹನಗಳಿಗೆ ಈ ನಿಯಮ ಕಡ್ಡಾಯ ಮಾಡಿ ಸರ್ಕಾರ ಆದೇಶ !

error: Content is protected !!
Scroll to Top