ಕಡಬದಲ್ಲಿ ಬಗೆಹರಿಯದ ಬಿಎಸ್ಎನ್ಎಲ್ ನೆಟ್ ವರ್ಕ್ ಸಮಸ್ಯೆ ► ಗ್ರಾಹಕರಿಂದ ಪ್ರತಿಭಟನೆಯ ಕರೆಘಂಟೆ

(ನ್ಯೂಸ್ ಕಡಬ) newskadaba.com ಕಡಬ,ಸೆ.02, ತಾಲೂಕು ಕೇಂದ್ರವಾಗಿ ಘೋಷಿಸಲ್ಪಟ್ಟ ಕಡಬದಾದ್ಯಂತ ಬಿಎಸ್ಎನ್ಎಲ್ ದೂರವಾಣಿ ಹಾಗೂ ನೆಟ್ ವರ್ಕ್ ಸಮಸ್ಯೆಯಿಂದ ಗ್ರಾಹಕರು ಪರದಾಡುವಂತಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಪಂಧಿಸಿ ಸರಿಪಡಿಸದಿದ್ದಲ್ಲಿ ದೂರವಾಣಿ ಗ್ರಾಹಕರು ಒಟ್ಟು ಸೇರಿ ಪ್ರತಿಭಟಿಸುವುದಾಗಿ ಕಡಬ ಗ್ರಾ.ಪಂ.ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಹಾಜಿ.ಕೆ.ಎಂ ಹನೀಫ್ ಎಚ್ಚರಿಸಿದ್ದಾರೆ.


ಕಡಬ ತಾಲೂಕು ಕೇಂದ್ರದಲ್ಲಿ ಮೊಬೈಲ್ ದೂರವಾಣಿ ಸಂಪರ್ಕ ಹಾಗೂ ನೆಟ್ ವರ್ಕ್ ಸಮಸ್ಯೆ ದಿನೇ ದಿನೆ ವಿಪರೀತವಾಗಿದ್ದು ವಾಣಿಜ್ಯ ನಗರವಾಗಿರುವ ಕಡಬ ಪೇಟೆಯಲ್ಲಿ ಈ ಅವ್ಯವಸ್ಥೆಯನ್ನು ಕೇಳುವವರೇ ಇಲ್ಲವೆಂದು ದೂರಿದ ಅವರು ವಿವಿಧ ಹಣಕಾಸು ಸಂಸ್ಥೆಗಳು, ವಾಣಿಜ್ಯ ಕೇಂದ್ರಗಳು, ವ್ಯಾಪಾರ ಮಳಿಗೆಗಳು, ತಾಲೂಕು ಕಚೇರಿ ಸೇರಿದಂತೆ ವಿವಿಧ ಇಲಾಖಾ ಕಚೇರಿಗಳು ಸ್ಥಳಿಯಾಡಳಿತ ಕೇಂದ್ರಗಳು ಶಾಲಾ ಕಾಲೇಜುಗಳಲ್ಲಿ ನಿರಂತರ ಬಿಎಸ್ಎನ್ಎಲ್ ಮುಖಾಂತರ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದರೂ ಈಗ ಕೆಲವು ಸಮಯಗಳಿಂದ ನಿರಂತರ ನೆಟ್ ವರ್ಕ್ ಸಮಸ್ಯೆಯಿಂದಾಗಿ ಕಡಬ ಪೇಟೆಯ ಒಂದು ಕಿ.ಮೀ ವ್ಯಾಪ್ತಿಯಲ್ಲಿ ಕೂಡ ದೂರವಾಣಿ ಸಂಪರ್ಕ ಸಿಗದೆ ಸಮಸ್ಯೆಯಾಗುತ್ತಿದೆ.

Also Read  ಮುಖ್ಯಮಂತ್ರಿಗಳ “ರೈತ ವಿದ್ಯಾನಿಧಿ”- ಆದಾಯ ಪ್ರಮಾಣ ಪತ್ರ ಅಪ್ಲೋಡ್ ಮಾಡಲು ಫೆ. 29 ಕೊನೆಯ ದಿನ

ಕಡಬ ದೂರವಾಣಿ ಕೇಂದ್ರವನ್ನು ಸಂಪರ್ಕಿಸಿದ್ದಲ್ಲಿ ಅಧಿಕಾರಿಗಳು ಬೇರೆ ಬೇರೆ ಸಮಸ್ಯೆಗಳನ್ನು ತಿಳಿಸುತ್ತಿದ್ದು ಕೂಲಿಯಾಳುಗಳ ಸಮಸ್ಯೆಯನ್ನು ಮುಂದಿಡುವುದಲ್ಲದೆ ದಿನವೊಂದಕ್ಕೆ 135ರೂ. ಸಂಬಳ ನೀಡುತ್ತಿದ್ದು ಯಾರೂ ಕೂಲಿಯಾಳುಗಳು ಸಿಗದ ಪರಿಸ್ಥಿತಿ ಒಂದು ಕಡೆಯಾದರೆ ಇಲ್ಲಿಯ ಏರ್ಯಾಲಿಂಕ್ಸ್‌ ಕೇವಲ 600ಮೀ. ಮಾತ್ರ ಇದ್ದು ತಾಲೂಕು ಕೇಂದ್ರವಾಗಿರುವ ಕಡಬದಲ್ಲಿ ಬಿಎಸ್ಎನ್ಎಲ್ ಇದೆಯೋ, ಇಲ್ಲವೋ ಎಂದು ಪ್ರಶ್ನಿಸುವಂತಾಗಿದ್ದು ಹಲವಾರು ಜನಸಂಪರ್ಕ ಸಭೆಗಳಲ್ಲಿ ಗ್ರಾ.ಪಂ.ನ ಸಾಮಾನ್ಯ ಸಭೆ, ಗ್ರಾಮ ಸಭೆಗಳಲ್ಲಿ ಚರ್ಚಿಸಿದ್ದರೂ ವಿಚಾರದ ಬಗ್ಗೆ ಇಲಾಖಾಧಿಕಾರಿಗಳು ಗಮನ ಹರಿಸದೇ ನಿರ್ಲಕ್ಷಿಸಿರುವುದು ವಿಪರ್ಯಾಸವಾಗಿದೆ. ಈಗಾಗಲೆ ಕಡಬದ ದೂರವಾಣಿ ಸಂಪರ್ಕ ಕೇಂದ್ರವನ್ನು ಸಾರ್ವಜನಿಕ ಗ್ರಾಹಕರ ಗಮನಕ್ಕೆ ತಾರದೆ ಏಕಾಏಕಿ ಬದಲಾಯಿಸಿದ್ದು ಈ ಕಾಮಗಾರಿ ಸಮಪರ್ಕವಾಗಿಲ್ಲ. ಈ ಬಗ್ಗೆ ಪದೇ ಪದೇ ಅಧಿಕಾರಿಗಳನ್ನು ಎಚ್ಚರಿಸಿದರೂ ಸ್ಪಂದಿಸದೇ ಇರುವ ಅಧಿಕಾರಿಗಳು ಈ ಕೂಡಲೇ ಸಮಸ್ಯೆಯನ್ನು ಸರಿಪಡಿಸದಿದ್ದಲ್ಲಿ ಕಡಬದಾದ್ಯಂತ ದೂರವಾಣಿ ಗ್ರಾಹಕರನ್ನು ಒಟ್ಟಾಗಿಸಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದಲ್ಲದೆ ಹಿರಿಯ ಅಧಿಕಾರಿಗಳನ್ನು ಕೂಡ ಭೇಟಿಯಾಗಿ ಸಮಸ್ಯೆ ಪರಿಹಾರಕ್ಕಾಗಿ ಆಗ್ರಹಿಸಿದ್ದಾರೆ. ಈ ಸಂಬಂಧ ಸಂಸದ ನಳೀನ್ ಕುಮಾರ್ ಕಟೀಲು, ಜಿಲ್ಲಾ ಪಂಚಾಯಿತಿ ಸದಸ್ಯ ಪಿ ಪಿ ವರ್ಗಿಸ್ ಅವರಿಗೂ ಮನವಿ ಸಲ್ಲಿಸಲಾಗಿದೆ.

Also Read  ಮಡಿಕೇರಿ: ಕಾಲುಜಾರಿ ಬಿದ್ದು ಎನ್‍ಸಿಸಿ ಅಧಿಕಾರಿ ಮೃತ್ಯು

ಸರಕಾರ ಉಚಿತ ವೈಪೈ ಯೋಜನೆಯನ್ನು ಕಡಬದಲ್ಲೂ ಅನುಷ್ಠಾನ ಮಾಡಲಾಗಿದೆ. ಕಡಬ ಪೇಟೆಯ ಪಂಚಾಯಿತಿ ಕಟ್ಟಡದ ಕೋಣೆಯೊಂದರಲ್ಲಿ ವೈಪೈ ಉಪಕರಣ ಅಳವಡಿಸಲಾಗಿದೆ. ಇಲ್ಲಿಂದ ಕೇಂದ್ರವಾಗಿರಸಿಕೊಂಡು 200 ಮೀಟರ್ ವ್ಯಾಪ್ತಿಯಲ್ಲಿ ಉಚಿತ ವೈಪ್ಯೆ ಸೇವೆ ಲಭ್ಯವಾಗಬೇಕು ಆದರೆ ಈ ಕಟ್ಟಡದ ಪಕ್ಕದ ಕೋಣೆಯಲ್ಲೂ ವೈಪೈ ಲಭ್ಯವಾಗುತಿಲ್ಲ ಎನ್ನುವ ಆರೋಪ ವ್ಯಕ್ತವಾಗಿದೆ.

error: Content is protected !!
Scroll to Top