ಚಿಲ್ಲರೆ ಕಿರಿಕಿರಿಗೆ ಬ್ರೇಕ್ ಹಾಕಲು ಸನ್ನದ್ಧವಾದ ಸಿಟಿ ಬಸ್ ಗಳು

(ನ್ಯೂಸ್ ಕಡಬ) newskadaba.com ಕಡಬ, ಮೇ.28.ಮಂಗಳೂರು: ಮಂಗಳೂರು ನಗರದಲ್ಲಿ ಓಡಾಡುವ ಸಿಟಿ ಬಸ್ಗಳಲ್ಲಿ ಪ್ರಯಾಣಿಸಲು ಇನ್ನುಮುಂದೆ, ನೀವೂ ನಗದು ಹಣ ನೀಡಬೇಕಾಗಿಲ್ಲ. ಇದರ ಬದಲಾಗಿ, ವಿನೂತನ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಪರಿಚಯಿಸುವ ಸಿದ್ದತೆಯಲ್ಲಿದೆ ಸಿಟಿ ಬಸ್‍ಗಳು. ಆ ಕಾರ್ಡ್ಗೆ ಹಣ ವರ್ಗಾಯಿಸಿಕೊಂಡು ನಗದು ವ್ಯವಹಾರ ವಿಲ್ಲದೆ ಸಂಚರಿಸಬಹುದಾಗಿದೆ. ಚಿಲ್ಲರೆ ಕಿರಿಕಿರಿಯಿಲ್ಲದೆ ಎಲ್ಲೆಡೆ ಸಂಚರಿಸಬಹುದಾಗಿದೆ.

Nk Kukke

ನಗರದಲ್ಲಿ ಓಡಾಟ ನಡೆಸುವ ಎಲ್ಲಾ  ಸಿಟಿ ಬಸ್ ಗಳಲ್ಲಿ ಸ್ಮಾರ್ಟ್ ಕಾರ್ಡ್ ವ್ಯವಸ್ಥೆ ಜಾರಿಗೆ ತರಲು ಚಲೋ ಸಂಸ್ಥೆ ಸಹಯೋಗದೊಂದಿಗೆ ಸಿಟಿ ಬಸ್ ಮಾಲಕರ ಸಂಘ ನಿರ್ಧರಿಸಿದ್ದು, ಬಸ್ ಸಂಚಾರ ಆರಂಭಿಸಿದ ಬಳಿಕ ಕೆಲವೇ ದಿನಗಳಲ್ಲಿ ಈ ವಿನೂತನ ವ್ಯವಸ್ಥೆ ಜಾರಿಗೆ ಬರಲಿದೆ.

ಈ ಸ್ಮಾರ್ಟ್ಕಾರ್ಡ್ ಪಡೆಯಲು ಪ್ರಯಾಣಿಕರು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಿಲ್ಲ. ನಗರದಲ್ಲಿ ಸ್ಟೇಟ್ಬ್ಯಾಂಕ್ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಔಟ್ಲೆಟ್ ಮಾಡಲಾಗಿದ್ದು, ಅಲ್ಲಿ, ಪ್ರಯಾಣಿಕರು ಆಧಾರ್ಕಾರ್ಡ್ ಮಾಹಿತಿ ನೀಡಿ ಉಚಿತವಾಗಿ ಈ ಕಾರ್ಡ್ ಪಡೆಯಬಹುದು. ಜೂನ್ 1ರಿಂದ ಬಸ್ ಸಂಚಾರ ಆರಂಭವಾದ ಬಳಿಕ ನಗರದ ವಿವಿಧ ಕಡೆಗಳಲ್ಲಿ ಸ್ಮಾರ್ಟ್ ಕಾರ್ಡ್ ಸೆಂಟರ್ ಆರಂಭಿಸಲು ಸಿಟಿ ಬಸ್ ಮಾಲಕರ ಸಂಘ ತೀರ್ಮಾನಿಸಿದೆ.

Also Read  ಪಂಜ ಪಂಚಲಿಂಗೇಶ್ವರ ದೇವಸ್ಥಾನಕ್ಕೆ ಅರೆಭಾಷೆ ಅಧ್ಯಕ್ಷರ ಭೇಟಿ ➤ ದೇವಸ್ಥಾನದ ವತಿಯಿಂದ ಗೌರವ ಅರ್ಪಣೆ

ಪ್ರಯಾಣಿಕರು ಉಚಿತವಾಗಿ ಪಡೆದ ಕಾರ್ಡಿಗೆ ತಮ್ಮ ಮೊಬೈಲ್‍ಗಳಿಗೆ ಯಾವ ರೀತಿ ಟಾಪ್ಅಪ್ ರೀಚಾರ್ಜ್ ಮಾಡಿಸಿಕೊಂಡು ಬಳಸುತ್ತಿದ್ದಿರೊ ಅದೇ ರೀತಿ. ಅಲ್ಲಲ್ಲಿ ಸೆಂಟರ್ ತೆರಯಲು ತೀರ್ಮಾನಿಸಲಾಗಿದೆ. ಅಲ್ಲದೆ, ಮೊಬೈಲ್ ರೀಚಾರ್ಜ್ ಅಂಗಡಿಗಳಲ್ಲೂ ಈ ವ್ಯವಸ್ಥೆ ಒದಗಿಸಲು ಚಿಂತನೆ ನಡೆಸಲಾಗಿದೆ. ಇನ್ನೂ ಮುಂದೆ ಪ್ರಯಾಣಿಕರು ಬಸ್ನಲ್ಲಿ ಸಂಚರಿಸುವಾಗ ನಿರ್ವಾಹಕನಿಗೆ ಚಿಲ್ಲರೆ ಕೊಡುವ ಬದಲು ಈ ಕಾರ್ಡ್ ನೀಡಿದರಾಯಿತು. ಪ್ರಯಾಣಿಕ ಹತ್ತಿದ ಮತ್ತು ಇಳಿಯುವ ಸ್ಥಳವನ್ನು ನಿರ್ವಾಹಕ ಇಟಿಎಂನಲ್ಲಿ ನಮೂದು ಮಾಡಿ ಈ ಯಂತ್ರಕ್ಕೆ ಈ ಕಾರ್ಡ್ ಮುಟ್ಟಿಸಿದರೆ ಕಾರ್ಡ್ ಖಾತೆಯಿಂದ ಹಣ ಕಡಿತಗೊಳ್ಳುತ್ತದೆ. ಹೀಗೆ ಹೊಸ ತಂತ್ರಜ್ಞಾನವನ್ನು ಬಳಸುದರೊಂದಿಗೆ ಡಿಜಿಟಲ್ ವ್ಯವಸ್ಥೆಗೆ ಮುನ್ನುಡಿ ಇಡುತ್ತಿದೆ.

Also Read  ಮರ್ಧಾಳ: ಶುಭಾರಂಭದ ಪ್ರಯುಕ್ತ 'ಎಲೈಟ್ ಮಂದಿ ಹೋಟೆಲ್ & ಜ್ಯೂಸ್ ಪಾಯಿಂಟ್'ನಲ್ಲಿ 3 ದಿನಗಳ ವಿಶೇಷ ಆಫರ್

error: Content is protected !!
Scroll to Top