(ನ್ಯೂಸ್ ಕಡಬ) newskadaba.com ಮಂಗಳೂರು,ಸೆ.01, ಸೂಸೈಡ್ ಗೇಮ್ ಎಂದೇ ಪ್ರಖ್ಯಾತಿ ಪಡೆದಿರುವ ಬ್ಲೂವೇಲ್ ಗೇಮ್ ಈಗಾಗಲೇ ಸಾಕಷ್ಟು ಮಕ್ಕಳು ಬಲಿಪಡೆದು ಕೊಂಡಿದ್ದು, ಇದೀಗ ಮಂಗಳೂರಿಗೂ ಕಾಲಿಟ್ಟಿದೆ. ಬ್ಲೂವೇಲ್ ಗೇಮ್ ಆಟವಾಡಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಕೈ ಕೊಯ್ದುಕೊಂಡಿದ್ದಾನೆ.
ತಿಮಿಂಗಿಲ ಆಕಾರದಲ್ಲಿ ಕೈ ಕೊಯ್ದುಕೊಂಡಿದ್ದನ್ನು ಗಮನಿಸಿದ ಹೆತ್ತವರು ಬಳಿಕ ವಿಚಾರಿಸಿದಾಗ ಬ್ಲೂವೇಲ್ ಗೇಮ್ ಆಟವಾಡಿದ್ದನ್ನು ಬಾಯ್ಬಿಟ್ಟಿದ್ದಾನೆ. ಬಾಲಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಇದುವರೆಗೂ ದೇಶ, ವಿದೇಶಗಳಲ್ಲಿ ನೂರಾರು ಜನ ಬ್ಲೂವೆಲ್ ಗೇಮ್‍ನಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ಬ್ಲೂ ವೇಲ್ ಗೇಮ್‍ನ ಎಲ್ಲಾ ಲಿಂಕ್‍ಗಳನ್ನು ತೆಗೆದುಹಾಕಲು ಸೂಚಿಸಿದೆ.