ಲಾಕ್‍ಡೌನ್ ಸಂಕಷ್ಠ ಎದುರಿಸುತ್ತಿರುವ 92 ಮಂದಿಗೆ ಈದ್ ಕಿಟ್ ವಿತರಣೆ

(ನ್ಯೂಸ್ ಕಡಬ) newskadaba.com ಕಡಬ, ಮೇ.25. ಹೆಲ್ಪ್‍ಲೈನ್ ಗ್ರೂಪ್ ಗಂಡಿಬಾಗಿಲು ವತಿಯಿಂದ ಕೊರೊನ ಜಾಗೃತಿ ಹಿನ್ನೆಲೆಯ ಲಾಕ್‍ಡೌನ್ ಸಲುವಾಗಿ ತೀರಾ ಸಂಕಷ್ಠ ಎದುರಿಸುತ್ತಿರುವ ಜಮಾಅತ್ ವ್ಯಾಪ್ತಿಯ 92 ಮಂದಿಗೆ ವಿದೇಶ ಮತ್ತು ಸ್ಥಳೀಯ ದಾನಿಗಳ ಸಹಕಾರದೊಂದಿಗೆ ಈದ್ ಕಿಟ್ ವಿತರಣೆ ಮಾಡಲಾಯಿತು.

 ಗಂಡಿಬಾಗಿಲು ಕುತುಬಿಯಾ ಜುಮಾ ಮಸೀದಿ ಖತೀಬ್ ಹಾದಿ ಅನಸ್ ತಂಙಳ್ ದುವಾಃ ನೆರವೇರಿಸಿ ಕಿಟ್ ವಿತರಣೆಗೆ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಹಿಮಾಯತುಲ್ ಇಸ್ಲಾಂ ಕಮಿಟಿ ಕಾರ್ಯದರ್ಶಿ ಮಹಮ್ಮದ್ ರಫೀಕ್, ಯಂಗ್‍ಮೆನ್ಸ್ ಅಧ್ಯಕ್ಷ ಅಬ್ದುಲ್ ಲತೀಫ್, ಕಾರ್ಯದರ್ಶಿ ಝಿಯಾದ್, ಎಸ್.ಕೆ.ಎಸ್.ಎಸ್.ಎಫ್. ಗಂಡಿಬಾಗಿಲು ಘಟಕದ ಅಧ್ಯಕ್ಷ ಆಶಿಫ್, ಪದಾಧಿಕಾರಿಗಳಾದ ಎಸ್.ಪಿ. ಖಲಂದರ್, ಹೈದರ್ ಮರ್ವೆಲ್, ನಿಸಾರ್ ಮತ್ತಿತರರು ಉಪಸ್ಥಿತರಿದ್ದರು

Also Read  ರಸ್ತೆ ಅಪಘಾತ- ವ್ಯಕ್ತಿ ಮೃತ್ಯು..!

error: Content is protected !!
Scroll to Top