ಕಡಬ ಸರಕಾರಿ ಪ.ಪೂ.ಕಾಲೇಜು ► ವಿವಿಧ ಕೊಠಡಿ ನಿರ್ಮಾಣಕ್ಕೆ ಗುದ್ದಲಿಪೂಜೆ

(ನ್ಯೂಸ್ ಕಡಬ) newskadaba.com ಕಡಬ, ಆ.29, ಸಾರ್ವಜನಿಕರು ಜಾಗೃತರಾಗಿದ್ದರೆ ಸರಕಾರಿ ಅನುದಾನದಿಂದ ನಡೆಯುವ ಅಭಿವೃದ್ಧಿ ಕಾಮಗಾರಿಗಳು ಸಮರ್ಪಕವಾಗಿ ನಡೆಯಲು ಸಾಧ್ಯ. ಕಾಮಗಾರಿಗಳು ನಡೆಯುವ ವೇಳೆ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ನಾಗರಿಕರು ಕಾಮಗಾರಿಯ ಗುಣಮಟ್ಟವನ್ನು ಗಮನಿಸುತ್ತಿರಬೇಕು ಎಂದು ಸುಳ್ಯ ಶಾಸಕ ಎಸ್.ಅಂಗಾರ ಹೇಳಿದರು.

ಕಡಬ ಸರಕಾರಿ ಪ.ಪೂ.ಕಾಲೇಜಿನ ನೂತನ ತರಗತಿ ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು 51 ಲಕ್ಷ ರೂ. ನಬಾರ್ಡ್ ಅನುದಾನದಲ್ಲಿ ಕಾಲೇಜಿಗೆ 2 ತರಗತಿ ಕೊಠಡಿ ಹಾಗೂ ಶೌಚಾಲಯ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದು ಅವರು ಹೇಳಿದರು.


ಜಿ.ಪಂ.ಸದಸ್ಯ ಪಿ.ಪಿ.ವರ್ಗೀಸ್, ತಾ.ಪಂ.ಸದಸ್ಯರಾದ ಫಝಲ್ ಕೋಡಿಂಬಾಳ, ಗಣೇಶ್ ಕೈಕುರೆ, ಕಾಲೇಜಿನ ಕಾರ್ಯಾಧ್ಯಕ್ಷ ಕೃಷ್ಣ ಶೆಟ್ಟಿ ಕಡಬ, ಎಪಿಎಂಸಿ ಸದಸ್ಯರಾದ ಪುಲಸ್ತ್ಯಾ ರೈ, ಮೇದಪ್ಪ ಗೌಡ ಡೆಪ್ಪುಣಿ, ಗ್ರಾ.ಪಂ.ಸದಸ್ಯ ಕೆ.ಎಂ.ಹನೀಫ್, ಕಡಬ ಸಿ.ಎ.ಬ್ಯಾಂಕ್ ಅಧ್ಯಕ್ಷ ಸುಂದರ ಗೌಡ ಮಂಡೆಕರ, ನಿರ್ದೇಶಕ ಸೀತಾರಾಮ ಗೌಡ ಪೊಸವಳಿಕೆ, ಕಾಲೇಜು ಅಭಿವೃದ್ಧಿ ಸಮಿತಿಯ ಎಸ್.ಅಬ್ದುಲ್ಖಾದರ್, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ದಯಾನಂದ ಉಂಡಿಲ, ಜತೆ ಕಾರ್ಯದರ್ಶಿ ಪ್ರದೀಪ್ ಕೋಲ್ಪೆ, ಉಪಾಧ್ಯಕ್ಷ ಸುಧೀರ್ ಪಣೆಮಜಲು, ಪದಾಧಿಕಾರಿ ಸಂತೋಷ್ ಪಟ್ನ, ಪ್ರಮುಖರಾದ ದೇವಯ್ಯ ಗೌಡ ಪನ್ಯಾಡಿ, ಕೃಷ್ಣಪ್ಪ ದೇವಾಡಿಗ ಸನಿಲ, ಪ್ರಕಾಶ್ ಎನ್.ಕೆ.,ಫಯಾಝ್ ಕೆನರಾ, ಶಿವರಾಮ ಶೆಟ್ಟಿ ಕೇಪು, ಉಪನ್ಯಾಸಕರಾದ ವಾಸುದೇವ ಗೌಡ ಕೋಲ್ಪೆ, ಸಲಿನ್ ಕೆ.ಪಿ., ಗುತ್ತಿಗೆದಾರ ಮೋಹನ್ದಾಸ್ ಉಪಸ್ಥಿತರಿದ್ದರು. ಉಪನ್ಯಾಸಕ ಹರಿಶಂಕರ ಕೆ.ಎಂ. ಸ್ವಾಗತಿಸಿ, ನಿರೂಪಿಸಿದರು. ಹಿರಿಯ ಉಪನ್ಯಾಸಕ ಇ.ಸಿ.ಚೆರಿಯನ್ ಬೇಬಿ ವಂದಿಸಿದರು.

error: Content is protected !!
Scroll to Top