ಬಚ್ಚಲು ಕೋಣೆಯಲ್ಲಿ ಚಿರತೆ ಪ್ರತ್ಯಕ್ಷ ► ಅರಣ್ಯ ಸಿಬ್ಬಂದಿಗಳಿಂದ ಸೆರೆ



(ನ್ಯೂಸ್ ಕಡಬ) newskadaba.com ತುಮಕೂರು, ಆ.28, ಇಲ್ಲಿಯ ಗುಬ್ಬಿ ತಾಲೂಕಿನ ನಾಗಸಂದ್ರ ಗ್ರಾಮದ ಅಶೋಕ್ ಎಂಬವರ  ಮನೆಯ ಸ್ನಾನದ ಕೋಣೆಯಲ್ಲಿ ಸೋಮವಾರ ಬೆಳ್ಳಂ ಬೆಳಗ್ಗೆ ಚಿರತೆಯೊಂದು ಕಾಣಿಸಿಕೊಂಡಿದೆ.





ಅಶೋಕ್ ಎಂಬವರ ಮನೆಯ ಹಿಂಭಾಗದ ಸ್ನಾನದ ಕೋಣೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಬೆಳಗಿನ ಜಾವ ಸುಮಾರು 5 ಗಂಟೆಗೆ ಮನೆಯವರು ಸ್ನಾನದ ಕೋಣೆಗೆ ಹೋಗಿದ್ದಾಗ ಚಿರತೆ ಕಾಣಿಸಿಕೊಂಡಿದೆ.






ತಕ್ಷಣ ಅಲ್ಲಿಯ ಗ್ರಾಮಸ್ಥರ ಸಹಾಯದಿಂದ ಆ ಚಿರತೆಯನ್ನು ಸ್ನಾನದ ಕೋಣೆಯಲ್ಲಿ ಕೂಡಿ ಹಾಕಿದ್ದಾರೆ. ಬಳಿಕ ಸ್ಥಳಕ್ಕೆ ಗುಬ್ಬಿ ಅರಣ್ಯಾಧಿಕಾರಿಗಳು ಭೇಟಿ ನೀಡಿದ್ದಾರೆ. ಸದ್ಯ ಅದಕ್ಕೆ ಅರವಳಿಕೆ ಚುಚ್ಚು ಮದ್ದು ನೀಡಿ ಸೆರೆ ಹಿಡಿಯುವಲ್ಲಿ ಅರಣ್ಯ ಸಿಬ್ಬಂದಿ ಕಾರ್ಯನಿರತರಾಗಿದ್ದಾರೆ.

 

error: Content is protected !!
Scroll to Top