ಶಕ್ತಿ ರೆಸಿಡೆನ್ಶಿಯಲ್ ಶಾಲೆಯಲ್ಲಿ ಹೊಸ ಶಿಕ್ಷಣ ನೀತಿ – ವಿಚಾರ ಸಂಕಿರಣ

ಭಾರತದೇಶವು ಭಾಷೆಯ, ಬಹು ನಂಬಿಕೆಯ, ಆಹಾರ ಪದ್ಧತಿ, ಬಹು ಸಂಸ್ಕೃತಿಯ ವೈವಿದ್ಯತೆಯಲ್ಲಿ ಏಕತೆಯನ್ನು ಸಾರಿದ ದೇಶ. ಭಾರತೀಯ ಪರಂಪರೆಯ ಆಧಾರವೇ ವೈವಿದ್ಯತೆಯಲ್ಲಿ ಏಕತೆ. ಈ ಮೂಲಕ ಭಾರತವು ಪ್ರಪಂಚದಾದ್ಯಂತ ಗುರುತಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ನಮ್ಮದೇಶವು ರಾಜಕೀಯವಾಗಿ, ಸಾಮಾಜಿಕವಾಗಿ, ವೈಜ್ಞಾನಿಕವಾಗಿ, ತಾಂತ್ರಿಕವಾಗಿ, ಅಭಿವೃದ್ಧಿ ಹೊಂದಿದ ರಾಷ್ಟ್ರ, ಇದೆಲ್ಲದಕ್ಕೂಕಾರಣ ನಮ್ಮ ದೇಶದಲ್ಲಿ ನೀಡುವ ಶಿಕ್ಷಣವನ್ನು ಪಡೆದು ಎಷ್ಟೇ ಭಾರತೀಯರು ತಮ್ಮ ಜ್ಞಾನ ಹಾಗೂ ಸೇವೆಯನ್ನು ವಿದೇಶಗಳಿಗೆ ಧಾರೆಯೆರೆಯುತ್ತಿದ್ದಾರೆ ಎಂದು ಶಕ್ತಿನಗರದ ಶಕ್ತಿ ವಸತಿ ಶಾಲೆ ಹಾಗೂ ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆ ಮತ್ತು ಶಕ್ತಿ ಪಿ.ಯು. ಕಾಲೇಜು ಮತ್ತು ದಕ್ಷಿಣ ವಲಯ ಮಂಗಳೂರು ಇದರ ಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಪ್ರಶಾಂತ್‍ ಕುಮಾರ್‍ ಅವರ ಸಹಯೋಗದೊಂದಿಗೆ ನಡೆದ ‘ಹೊಸ ಶಿಕ್ಷಣ ನೀತಿ’- ವಿಚಾರ ಸಂಕಿರಣದಲ್ಲಿ ಭಾಗವಹಿಸಿದ ಡಾ. ಟಿ.ಎಂ.ಎ ಪೈ ಶಿಕ್ಷಣ ಮಹಾವಿದ್ಯಾಲಯ ಉಡುಪಿಯ ಸಂಯೋಜಕರಾದ ಡಾ. ಮಹಾಬಲೇಶ್ವರ ರಾವ್‍ ತಮ್ಮ ಉಪನ್ಯಾಸ ಭಾಷಣದಲ್ಲಿ ಹೇಳಿದರು.

ಒಂದು ಮಗುವಿನ ಮೆದುಳಿನ ವಿಕಾಸವು 0-6 ವರ್ಷದ ವರೆಗೆ ಆಗಿದ್ದು, ಶೇ.85% ರಷ್ಟು ಭಾಗವನ್ನು ಈ ಹಂತದಲ್ಲಿ ಕಲಿತು ಉಳಿದ ಶೇ.15% ಭಾಗವನ್ನು ಮುಂದಿನ ಹಂತದಲ್ಲಿ ಕಲಿಯುತ್ತದೆ. ಆದಕಾರಣ 6 ವರ್ಷದವರೆಗೆ ಮಗುವಿಗೆ ಸರಿಯಾದ ಮೌಲ್ಯಯುತ ಶಿಕ್ಷಣವನ್ನು ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ. ಮಗುವಿಗೆ ಮನೆಯೇ ಮೊದಲ ಪಾಠಶಾಲೆ ಆದ ಕಾರಣ, ಮನೆಯ ವಾತಾವರಣವೂ ಕಲಿಕೆಗೆ ಪೂರಕವಾಗಿರಬೇಕು, ಪೌಷ್ಠಿಕ ಆಹಾರವೂ ಮಗುವಿನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆಗೆ ಅಗತ್ಯವಾಗಿರುವುದರಿಂದ ಮಗುವಿನ ಶಾರೀರಿಕ ಚಟುವಟಿಕೆಯೂ ಅಗತ್ಯ. ಇಂತಹ ಗಟ್ಟಿ ತಳಪಾಯ ಮಗುವಿಗೆ ಸಿಕ್ಕಿದಾಗ ಆ ಮಗು ಯೋಗ್ಯ ವ್ಯಕ್ತಿಯಾಗಿ ಸಮಾಜಕ್ಕೆಉಪಯುಕ್ತ ವಾತಾವರಣವನ್ನು ಕಲ್ಪಿಸುವಲ್ಲಿ ಸಹಕಾರಿಯಾಗುವನು. ಇದು ಆಗಬೇಕಾರೆ ನಮ್ಮ ಶಿಕ್ಷಣ ನೀತಿಯಲ್ಲಿ ಹೊಸ ಬದಲಾವಣೆ ಆಗಲೇಬೇಕು. 1944ರಿಂದ 2019ರ ವರೆಗೆನಡೆದ ಹೊಸ ರೀತಿ, ಬದಲಾವಣೆಗಳ ಪ್ರಯೋಗದಿಂದ ಭಾರತವು ಇಷ್ಟು ಸಾಧನೆಯನ್ನು ಮಾಡಿದೆ. ಇದರಿಂದ ಹೊಸ ನೀತಿಯಾದ ಭಾರತ ಕೇಂದ್ರಿತ ಶಿಕ್ಷಣ (India Center Education) ಹಾಗೂ ECCE – ‘Early Childhood Care & Education’ ನೀತಿಯನ್ನುಜಾರಿಗೆತರಲಿದೆ.

Also Read  ಕಡಬ ಠಾಣಾ ಕಟ್ಟಡದ ಮೇಲ್ಚಾವಣಿಯಿಂದ ನೀರಿನ ಒರತೆ ► ಕಳಪೆ ಕಾಮಗಾರಿ

ಒಟ್ಟು ಹೊಸ ನೀತಿಯ ಪರಿಕಲ್ಪನೆಯು ಮಾತೃ ಭಾಷಾ ಹಾಗೂ ಬಹು ಭಾಷೀಯ, ಆಧುನಿಕ ತಂತ್ರಜ್ಞಾನ, ವಿದ್ಯುನ್ಮಾನ ಪ್ರಯೋಗಗಳಿಗೆ ಮಹತ್ವವನ್ನು ನೀಡುವುದರ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ಹಾಗೂ ಪಠ್ಯೇತರ ಚಟುವಟಿಕೆಗಳಿಗೂ ಮಹತ್ವವನ್ನು ನೀಡಲಿದೆ. ಜೊತೆಗೆ ಇದು ಭಾರತೀಯ ಸಂಸ್ಕೃತಿ, ಪ್ರಾದೇಶಿಕ ಇತಿಹಾಸಗಳ, ರಂಗಭೂಮಿ ಕಲೆಗಳ ಬಗ್ಗೆ ತಿಳಿವಳಿಕೆ ಹಾಗೂ ಪ್ರಚಲಿತ ವಿದ್ಯಾಮಾನಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಲಿದೆ. ಶಿಶು ವಿಹಾರ ಕೇಂದ್ರಗಳಲ್ಲಿ ಮಕ್ಕಳಿಗೆ ಮಾತೃಭಾಷೆಯ ಪರಿಚಯದೊಂದಿಗೆ ಪ್ರಾದೇಶಿಕ ಭಾಷೆಗಳನ್ನು ಕಲಿಯುವ ಅಭಿರುಚಿಯನ್ನು ಹುಟ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ಮಗುವಿನಲ್ಲಿ ಭಾಷಾ ಕಲಿಕಾ ಸಾಮರ್ಥ್ಯದ ಜೊತೆಗೆ ಸೂಕ್ಷ್ಮ ಗ್ರಹಿಕೆಯ ವಿಕಾಸವೂ ಆಗಬೇಕೆನ್ನುವ ಉದ್ದೇಶವನ್ನು ಹೊಂದಿದೆ. ಹಾಗಾಗಿ ಶಿಕ್ಷಕರು ಪೋಷಕರು ಈ ಹೊಸ ಶಿಕ್ಷಣ ನೀತಿಗೆ ಪ್ರೋತ್ಸಾಹಿಸಿ, ಹೊಸ ಶಿಕ್ಷಣ ನೀತಿಯನ್ನು ಮಕ್ಕಳಿಗೆ ನೀಡುವ ಮೂಲಕ ಪ್ರಜ್ಞಾವಂತ ದೇಶ ಸಮಾಜವನ್ನು ಕಟ್ಟಲು ಕೈ ಜೋಡಿಸೋಣ ಎಂದರು. ಹೊಸ ಶಿಕ್ಷಣ ನೀತಿಯ ಜೊತೆಗೆ ಪ್ರಸ್ತುತ್ತ ದಿನದಲ್ಲಿ ಸಮಾಜ ಎದುರಿಸುತ್ತಿರುವ ಸಮಸ್ಯೆ ಜನರ ಯಾಂತ್ರಿಕ ಬದುಕು ಶಾಲೆ-ವಿದ್ಯಾರ್ಥಿಗಳ ಮಾನಸಿಕ ದೈಹಿಕ ಒತ್ತಡಗಳು, ಶಿಕ್ಷಕರ ಸೇವಾ ಅಭದ್ರತೆಯಕುರಿತು ಮಾತನಾಡಿದರು. ಹಳೆಯ ಸಾಂಪ್ರದಾಯಿಕ ವಿಧಾನದಿಂದ ಹೊರಬಂದು ಹೊಸ ಸಮಾಜ ಸೃಷ್ಟಿಯಾಗಬೇಕದರೆ, ನಾವು ಹೊಸ ಶಿಕ್ಷಣ ನೀತಿಯನ್ನು ಒಪ್ಪಿಕೊಳ್ಳಲೇಬೇಕು ಎಂದರು. ಹಳೆಯ ಪರೀಕ್ಷಾ ನೀತಿ, ಪಠ್ಯಕ್ರಮವನ್ನು ಬದಲಾಯಿಸುವ ಪ್ರಯತ್ನ ಆಗಲೇ ಬೇಕು. ಇಂತಹ ಒಂದು ವೇದಿಕೆಯ ಮೂಲಕ ಹೊಸ ಶಿಕ್ಷಣ ನೀತಿಗೆ ಚಾಲನೆ ನೀಡಿದ ಶಕ್ತಿ ಎಜುಕೇಶನ್‍ ಟ್ರಸ್ಟ್ ಗೆ ಅಭಿನಂದನೆ ಎಂದು ದಕ್ಷಿಣ ವಲಯ ಮಂಗಳೂರು ಇದರಕ್ಷೇತ್ರ ಶಿಕ್ಷಣಾಧಿಕಾರಿ ಡಾ. ಪ್ರಶಾಂತ್‍ ಕುಮಾರ್ ಹೇಳಿದರು.

Also Read  ಕಡಬ: ಮಳೆಗೆ ಗುಡ್ಡ ಕುಸಿದು ಧರೆಗುರುಳಿದ ವಿದ್ಯುತ್ ಕಂಬ ► ಮೂರು ದಿನಗಳು‌ ಕಳೆದರೂ ಇನ್ನೂ ತೆರವುಗೊಳಿಸದ ಸ್ಥಳೀಯಾಡಳಿತ

ಮುಂದುವರಿದು ಹೊಸ ಶಿಕ್ಷಣ ನೀತಿಯು ಮುಂಬರುವ ಶೈಕ್ಷಣಿಕ ವರ್ಷಕ್ಕೆ ಹೊಸ ಆಯಾಮವನ್ನು ನೀಡುವುದಲ್ಲದೆ ಹೊಸ ಸಮಾಜದ ನಿರ್ಮಾಣ ಸಾಧ್ಯಎಂದರು. ವಿವಿಧ 84 ಶಾಲೆಗಳಿಂದ ಆಗಮಿಸಿದ 94 ಶಿಕ್ಷಕರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ವಿಗೆ ಕಾರಣರಾದರು. ವೇದಿಕೆಯಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತ ಮೊಕ್ತೇಸರಾದ ಕೆ.ಸಿ. ನೈಕ್, ಶಕ್ತಿ ವಸತಿ ಶಾಲೆಯ ಪ್ರಾಚಾರ್ಯೆ ವಿದ್ಯಾ ಕಾಮತ್ ಜಿ, ಶಕ್ತಿ ಪಿ.ಯು. ಕಾಲೇಜಿನ ಪ್ರಾಚಾರ್ಯರು ಪ್ರಭಾಕರ ಜಿ. ಎಸ್, ಶಕ್ತಿ ಎಜುಕೇಶನ್‍ ಟ್ರಸ್ಟ್ ನ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್, ಪ್ರಧಾನ ಸಲಹೆಗಾರರಾದ ರಮೇಶ್ ಕೆ, ಸಂಸ್ಥೆಯ ಅಭಿವೃಧ್ಧಿ ಅಧಿಕಾರಿಗಳಾದ ಪ್ರಖ್ಯಾತ್‍ ರೈ, ಶ್ರೀ ಗೋಪಾಲಕೃಷ್ಣ ಪೂರ್ವ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನೀಮಾ ಸಕ್ಸೇನಾ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕಿ ರೇಖಾ ನಿರೂಪಿಸಿದರು. ಪ್ರಾಂಶುಪಾಲರಾದ ವಿದ್ಯಾಕಾಮತ್ ಸ್ವಾಗತಿಸಿದರು. ಶಿಕ್ಷಕಿ ಪ್ರಿಯಾಂಕ ವಂದಿಸಿದರು.

Also Read  ಬೆಳ್ತಂಗಡಿ: ದ್ವಿಚಕ್ರ ವಾಹನ ಹಾಗೂ ಗೂಡ್ಸ್ ವಾಹನದ ನಡುವೆ ಢಿಕ್ಕಿ ➤ ಸವಾರ ಮೃತ್ಯು

error: Content is protected !!
Scroll to Top