ಸಿಐಎಸ್‍ಎಫ್ ವತಿಯಿಂದ ಅಶಕ್ತರಿಗೆ ನೆರವು ನೀಡಿಕೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.29    ನಿರ್ಗತಿಕರ ಜೀವನಕ್ಕೆ ಕೊಡುಗೆ ನೀಡುವ ಉದ್ದೇಶದಿಂದ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‍ಎಫ್) ಎನ್‍ಎಂಪಿಟಿ ಘಟಕದ ವತಿಯಿಂದ ಬೈಕಂಪಾಡಿ ಮೀನಕಳಿಯದಲ್ಲಿ  ನೆರವು ವಿತರಣಾ ಶಿಬಿರವನ್ನು ಆಯೋಜಿಸಲಾಗಿತ್ತು.


ಏಕ್ ಭಾರತ್ ಶ್ರೇಷ್ಠ ಭಾರತ್ ಅಭಿಯಾನದಡಿಯಲ್ಲಿ  ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡೆಪ್ಯೂಟಿ ಕಮಾಂಡೆಂಟ್,  ಸುತ್ತಮುತ್ತಲಿನವರ ಜೀವನವನ್ನು ರಕ್ಷಿಸುವುದು ಮತ್ತು ಅಗತ್ಯವಿರುವವರಿಗೆ ಸಹಾಯ ಹಸ್ತ ಎತ್ತುವುದು ನಮ್ಮ ಜವಾಬ್ದಾರಿ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲಾ ಚೀಲಗಳು, ಸೀರೆ ಶರ್ಟ್, ಲುಂಗಿಸ್, ಟವೆಲ್ ಮತ್ತು ಪಾದರಕ್ಷೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಂರಕ್ಷಿಕಾ ಅಧ್ಯಕ್ಷೆ  ಆರತಿ ಪಾಠಕ್ ಗೌರ್, ಎನ್‍ಎಂಪಿಟಿ ಸಿಐಎಸ್‍ಎಫ್ ಘಟಕದ ಸದಸ್ಯರು ಉಪಸ್ಥಿತರಿದ್ದರು.

Also Read  ಕಡಬ: ಮನವಿ ಕೊಟ್ಟ ಕೂಡಲೇ ಕೆಲಸ ಆಗುವುದಿಲ್ಲ, ಸರಕಾರ ಹಣ ಕೊಡಬೇಕು ➤ ಸಚಿವ ಎಸ್.ಅಂಗಾರ…!!!                                        

error: Content is protected !!
Scroll to Top