(ನ್ಯೂಸ್ ಕಡಬ) newskadaba.com, ಮಂಗಳೂರು, ಜ.23 ಕರ್ನಾಟಕ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಗಳೂರು ನಗರ ಉತ್ತರ ವಿಧಾನ ಸಭಾ ಕ್ಷೇತ್ರ ಸದಸ್ಯ ಡಾ.ಭರತ್ ಶೆಟ್ಟಿ ವೈ ಇವರ 2018-19ನೇ ಸಾಲಿನ ಅನುದಾನದಲ್ಲಿ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಳಂಬೆ ಗ್ರಾಮ ಪಡ್ಡಾಯಿ ಬೆಟ್ಟು ಕಜೆ ದಡ್ಡು ರಸ್ತೆ ಅಭಿವೃದ್ಧಿ ನಿರ್ಮಾಣ ಕಾಮಗಾರಿಗೆ ರೂ. 2 ಲಕ್ಷ, ಮಂಗಳೂರು ತಾಲೂಕು ಮೂಡುಪೆರಾರ ಕೊಳಪಿಲ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ.2 ಲಕ್ಷ. 2019-20 ನೇ ಸಾಲಿನ ಅನುದಾನದಲ್ಲಿ ಮಂಗಳೂರು ತಾಲೂಕು ಗಂಜಿಮಠ ಪಂಚಾಯತ್ ಬಡಗ ಉಳಿಪಾಡಿ ಪದ್ಮನಾಭ ಮೂಲ್ಯ ಮನೆ ಬಳಿ ತಡೆಗೋಡೆ ರಚನೆ ಕಾಮಗಾರಿಗೆ ರೂ. 2 ಲಕ್ಷ, ಅನುದಾನ ಮಂಜೂರು ಮಾಡಲಾಗಿದೆ.
ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಸದಸ್ಯ ಹರೀಶ್ ಪೂಂಜಾ ಇವರ 2018-19ನೇ ಸಾಲಿನ ಅನುದಾನದಲ್ಲಿ ಬೆಳ್ತಂಗಡಿ ತಾಲೂಕು ಮುಂಡಾಜೆ ಗ್ರಾಮದ ದೇವಿಗುಡಿ ಹಿಂದು ರುದ್ರ ಭೂಮಿ ಇಂಟರ್ ಲಾಕ್ ಅಳವಡಿಕೆ ಕಾಮಗಾರಿಗೆ ರೂ. 2 ಲಕ್ಷ, ಬೆಳ್ತಂಗಡಿ ತಾಲೂಕು ನೇಲ್ಯಡ್ಕ ಗ್ರಾಮದ ದ.ಕ.ಜಿ.ಪಂ.ಕಿ ಪ್ರಾಥಮಿಕ ಶಾಲೆ ಇದರ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ 3 ಲಕ್ಷ, ಬೆಳ್ತಂಗಡಿ ತಾಲೂಕು ನೆರಿಯ ಗ್ರಾಮದ ಬಯಲು ಮುಚ್ಚಿ ರಾಲಿಯ ವಿವಿದೆಡೆಗಳಲ್ಲಿ ಮಳೆಯಿಂದಾಗಿ ಹಾನಿಗೊಳಗಾದ ಭಾಗಗಳಿಗೆ ತಡೆಗೋಡೆ ರಚನೆ ಕಾಮಗಾರಿಗೆ 2 ಲಕ್ಷ, ಬೆಳ್ತಂಗಡಿ ತಾಲೂಕು ಶಿಶಿಲ ಗ್ರಾಮದ ಶಿಶಿಲ-ಓಟ್ಲ ಬ್ರಹ್ಮ ಬೈದರ್ಕಳ ಗರೋಡಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ.2 ಲಕ್ಷ, ಬೆಳ್ತಂಗಡಿ ತಾಲೂಕು ಬಳೆಂಜ ಗ್ರಾಮದ ಕುಕ್ಕುದಕಟ್ಟೆ-ಕೆಂಪುರ್ಜ ರಸ್ತೆ ಅಭಿವೃದ್ಧಿ ಕಾಮಗಾರಿಗೆ ರೂ.1 ಲಕ್ಷ 25 ಸಾವಿರ, ಸವಣಾಲು ಗ್ರಾಮದ ಮಿಯಾ ಕುಕ್ಕುಜೆ ಪರಿಶಿಷ್ಟ ಪಂಗಡ ಕಾಲೋನಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ರೂ.2 ಲಕ್ಷ, ಬೆಳ್ತಂಗಡಿ ತಾಲೂಕು ಉಜಿರೆ ಗ್ರಾಮದ ಸರಕಾರಿ ಪ್ರೌಢಶಾಲೆ ಹಳೇಪೇಟೆ ಇಲ್ಲಿ ಸಭಾಭವನ ರಚನೆ ಕಾಮಗಾರಿಗೆ ರೂ.2 ಲಕ್ಷ, ಕಾಣಿಯೂರು ಗ್ರಾಮದ ಕೆದಿಲ-ಮೂರ್ಜಾಲು ರಸ್ತೆ ಕಾಂಕ್ರೀಟಿಕರಣ ಕಾಮಗಾರಿಗೆ ರೂ. 5 ಲಕ್ಷ ಮಂಜೂರು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.