ನೂಜಿಬಾಳ್ತಿಲ: ಪುತ್ತೂರು ಧರ್ಮಪ್ರಾಂತ್ಯದ 11ನೇ ವಾರ್ಷಿಕೋತ್ಸವ

(ನ್ಯೂಸ್ ಕಡಬ) newskadaba.com, ಕಡಬ, ಜ.20    ಪುತ್ತೂರು ಧರ್ಮಪ್ರಾಂತ್ಯದ 11ನೇ ಸ್ಥಾಪನಾ ವಾರ್ಷಿಕೋತ್ಸವ ಹಾಗೂ ಧರ್ಮಗುರುಗಳ ಪುಣ್ಯಸ್ಮರಣಾ ಕಾರ್ಯಕ್ರಮ ನೂಜಿಬಾಳ್ತಿಲ ಸಂತ ಮೇರೀಸ್ ಕಥೇಡ್ರಲ್ ಚರ್ಚ್‍ನಲ್ಲಿ ರವಿವಾರ ನಡೆಯಿತು.


ಸಭಾ ಕಾರ್ಯಕ್ರಮವನ್ನು ವಂ.ಡಾ.ಗೀವರ್ಗೀಸ್ ಮಕಾರಿಯೋಸ್ ಉದ್ಘಾಟಿಸಿದರು. ವೇದಿಕೆಯಲ್ಲಿ ವಂ.ಡಾ. ಎಲ್ದೋಪುತ್ತನ್ ಕಂಡತ್ತಿಲ್, ವಂ.ಪೀಟರ್ ಜಾನ್ ಒಐಸಿ, ವಂ.ಫಾ.ಜಾನ್ ನೆಲ್ಲಿವಿಳ, ಸಿಸ್ಟರ್ ಸಿಲ್ವಿಯಾ ಎಸ್‍ಐಸಿ, ಯೋಹನ್ನಾನ್ ಓ.ಎಂ., ರಾಬರ್ಟ್ ಉಪಸ್ಥಿತರಿದ್ದರು. ಮಲಂಕರ ಕ್ಯಾಥೋಲಿಕ್ ಧರ್ಮಸಭೆಯ ದಿವಂಗತರಾದ ಮೇಜರ್ ಆರ್ಚ್ ಬಿಷಪ್ ವಂ. ಸಿರಿಲ್ ಮಾರ್ ಬಸೇಲಿಯೋಸ್ ಕಾಥೋಲಿಕೊಸ್, ಬಿಷಪ್ ರೆ.ಡಾ.ಜೋಸೇಫ್ ಮಾರ್ ಸೇವೇರಿಯೋಸ್, ಪುತ್ತೂರು ಧರ್ಮಪ್ರಾಂತ್ಯದ ಸ್ಥಾಪಕರಾದ ಬಿಷಪ್ ವಂ. ಡಾ. ಗೀವರ್ಗೀಸ್ ಮಾರ್ ದಿವನ್ನಾಸಿಯೋಸ್, ಹಾಗೂ ಅಕಾಲಿಕವಾಗಿ ಮೃತರಾದ ವಂ.ಫಾ. ಅಬ್ರಹಾಂ ಕಳಪ್ಪಾಟ್ ಧರ್ಮಗುರುಗಳ ಪುಣ್ಯಸ್ಮರಣೆಯನ್ನು ನೆರವೇರಿಸಲಾಯಿತು. ಪ್ರಸ್ತುತ ಪುತ್ತೂರು ಧರ್ಮಾಧ್ಯಕ್ಷರಾಗಿರುವ ವಂ.ಡಾ.ಗೀವರ್ಗೀಸ್ ಮಾರ್ ಮಕಾರಿಯೋಸ್ ಅವರ ನಾಮಧಾರಿ ಹಬ್ಬದ ಆಚರಣೆಯನ್ನು ಕೇಕ್ ಕತ್ತರಿಸಿ, ಹಾರೈಸುವ ಮೂಲಕ ಆಚರಿಸಿ, ಅವರ ನೇತೃತ್ವದಲ್ಲಿ ಪುತ್ತೂರು ಧರ್ಮಾಧ್ಯಕ್ಷರು, ಚರ್ಚ್‍ಗಳ ಧರ್ಮಗುರುಗಳು ಬಲಿಪೂಜೆಯಲ್ಲಿ ಪಾಲ್ಗೊಂಡಿದ್ದರು.
ಎಂ.ಸಿ.ವೈ.ಎಂ.ನ ವರ್ಷದ ಕಾರ್ಯ ಚಟುವಟಿಕೆಗಳ ಅನಾವರಣ, ಕಿಡ್ಸ್ ಕರ್ನಾಟಕ ಹಾಗೂ ಕಾರಿತಾಸ್ ಇಂಡಿಯಾ ಸಹಯೋಗದ “ಸ್ಪರ್ಶ” ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಇದೇ ಸಂದರ್ಭದಲ್ಲಿ ಸಾಧಕರನ್ನು ಸಮ್ಮಾನಿಸಲಾಯಿತು. ಪುತ್ತೂರು ಧರ್ಮಪ್ರಾಂತ್ಯದ ಚಾನ್ಸೆಲರ್ ವಂ.ಫಾ.ಜಾನ್ ಕುನ್ನತೇತ್ ಸ್ವಾಗತಿಸಿ, ವಂ.ಫಾ.ತೋಮಸ್ ಕುಯಿನಾಪುರತ್ತ್ ವಂದಿಸಿದರು. ಧನ್ಯಾ ಲಿಜೋ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Also Read  ಕಾರ್ಕಳ: ಕಡವೆ ಹತ್ಯೆ ಪ್ರಕರಣ; 10 ಜನರ ತಂಡ ಭಾಗಿ ಶಂಕೆ

error: Content is protected !!
Scroll to Top