(ನ್ಯೂಸ್ ಕಡಬ) newskadaba.com, ವಿಟ್ಲ, ಜ.20 ಆಲ್ಟೋ ಕಾರು ಹಾಗೂ ಝೈಲೋ ಕಾರಿನ ನಡುವೆ ಅಪಘಾತ ಸಂಭವಿಸಿ ಎರಡೂ ಕಾರಿನಲ್ಲಿದ್ದವರಿಗೆ ಗಾಯಗಳಾದ ಘಟನೆ ವಿಟ್ಲದಲ್ಲಿ ಸಂಭವಿಸಿದೆ.
ಅಪಘಾತವಾದ ಪರಿಣಾಮ ಝೈಲೋ ಕಾರು ಪಲ್ಟಿಯಾಗಿ ರಸ್ತೆ ಬದಿಯಲ್ಲಿ ನಿಂತಿತು, ಆಲ್ಟೋ ಕಾರು ರಸ್ತೆಯ ಎಡಬದಿಯಲ್ಲಿದ್ದ ಕಂಪೌಂಡ್ ಗೆ ಗುದ್ದಿ ಎರಡೂ ವಾಹನಗಳು ಜಖಂಗೊಂಡಿದ್ದಲ್ಲದೇ ಪ್ರಯಾಣಿಕರಿಗೆ ಗಾಯಗಳಾದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.