ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.16   ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶಿಕ್ಷಕ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯು ನಗರದ ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್ ನಲ್ಲಿ ನಡೆಯಿತು.

ಸಭೆಯನ್ನು ಶಕ್ತಿ ರೆಸಿಡೆನ್ಶಿಯಲ್ ಸ್ಕೂಲ್‍ನ ಅಧ್ಯಕ್ಷರಾದ ಶ್ರೀ ಕೆ.ಸಿ ನಾೈಕ್‍ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಸಂಘದ ರಾಜ್ಯ ಗೌರವ ಅಧ್ಯಕ್ಷರಾದ ಅರುಣ್ ಶಾಹಪುರ್ ಪಾಲ್ಗೊಂಡಿದ್ದರು. ಸಭೆಯ ಅಧ್ಯಕ್ಷತೆಯನ್ನುರಾಜ್ಯಾಧ್ಯಕ್ಷರಾದ ಡಾ. ರಘು ಅಕ್ಮಂಚಿ ವಹಿಸಿದ್ದರು. ಡಾ. ಮಾಧವ ಎಂ.ಕೆ ಯವರು ಸ್ವಾಗತಿಸಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಸಗುಣ ಕೆ.ಸಿ ನಾೈಕ್, ಕೆ. ಆರ್ ಎಂ.ಎಸ್ ನ ಪ್ರಧಾನ ಕಾರ್ಯದರ್ಶಿ ಡಾ. ರಾಜಣ್ಣ, ಮಂಗಳೂರು ವಿವಿಯ ಸಿಂಡಿಕೇಟ್ ಸದಸ್ಯರಾದ ಶ್ರೀ ರಮೇಶ ಕೆ, ನ್ಯಾಯವಾದಿಗಳಾದ ಶ್ರೀ ರವಿಚಂದ್ರ ಮೊದಲಾದವರು ಉಪಸ್ಥಿತರಿದ್ದರು.
ಇಡೀ ದಿವಸ ನಡೆದ ಸಭೆಯಲ್ಲಿ ಸಂಘದ ವಿವಿಧ ರೀತಿಯ ಚಟುವಟಿಕೆಗಳು, ಶಿಕ್ಷಕರ ಗುಣಮಟ್ಟ ಹೆಚ್ಚಿಸಲು ಬೇಕಾದ ಉಪಕ್ರಮಗಳು, ಶಿಕ್ಷಕರ ಸಮಸ್ಯೆಗಳು ಅನೇಕ ವಿಷಯಗಳು ಚರ್ಚಿಸಲ್ಪಟ್ಟವು. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಪದಾಧಿಕಾರಿಗಳು ತಮ್ಮ ಜಿಲ್ಲೆಯ ಕಾರ್ಯ ಚಟುವಟಿಕಗಳ ವರದಿ ನೀಡಿದರು. ಕೊನೆಯಲ್ಲಿ ರಾಜ್ಯ ಪದಾಧಿಕಾರಿಗಳ ಆಯ್ಕೆ ನಡೆಯಿತು. ರಾಜ್ಯ ಅಧ್ಯಕ್ಷರಾಗಿ ಡಾ. ರಘು ಅಕ್ಮಂಚಿ, ಪ್ರಧಾನ ಕಾರ್ಯದರ್ಶಿಗಳಾಗಿ ಡಾ. ರಾಜಣ್ಣ ರವರು ಆಯ್ಕೆಯಾದರು.

Also Read  ➤ *ಜೀಪು ನಿಲ್ಲಿಸುವ ವೇಳೆ ಹೃದಯಾಘಾತ- ಚಾಲಕ ಸಾವು*

error: Content is protected !!
Scroll to Top