ಕಡಬ: ದೈಹಿಕ ಶಿಕ್ಷಕಿ ಪ್ರಪುಲ್ಲಾ ರೈ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆ



(ನ್ಯೂಸ್ ಕಡಬ) newskadaba.com,  ಕಡಬ, ಜ.14    ಕೇರಳ ರಾಜ್ಯದ ಕ್ಯಾಲಿಕಟ್  ಕೊಯಿಕೋಡ್ ಒಲಿಪಿಂಯನ್ ರಹ್‍ಮಾನ್ ಸ್ಟೇಡಿಯಂನಲ್ಲಿ  ನಡೆದ ರಾಜ್ಯ ಮಟ್ಟದ 40 ನೇ ಮಾಸ್ಟರ್  ಅಥ್ಲೆಟಿಕ್  ಚಾಂಪಿಯನ್ ಶಿಪ್‍ನಲ್ಲಿ ಭಾಗವಹಿಸಿದ ಕಡಬ ತಾಲೂಕು ಶ್ರೀ ರಾಮಕುಂಜೇಶ್ವರ ಪ್ರೌಢಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಪುಲ್ಲಾ ರೈ ಭಾಗವಹಿಸಿ 100 ಮೀಟರ್ ಹರ್ಡಲ್ಸ್ ಪ್ರಥಮ, ತ್ರಿವಿಧ ಜಿಗಿತ ಪ್ರಥಮ, ಎತ್ತರ ಜಿಗಿತ ದ್ವಿತೀಯ, ಉದ್ದ ಜಿಗಿತ ತೃತೀಯ ಸ್ಥಾನ ಪಡೆದಿದ್ದಾರೆ.





Nk Kukke

4*100 ರಿಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದ ಕರ್ನಾಟಕ ತಂಡದಲ್ಲಿ ಭಾಗವಹಿಸಿದ್ದರು. ಒಟ್ಟು 3 ಚಿನ್ನ, 1 ಬೆಳ್ಳಿ, ಹಾಗೂ 1 ಕಂಚನ್ನು ಪಡೆದು ಮುಂದಿನ ಫೆಬ್ರವರಿಯಲ್ಲಿ ಥೈಲಾಂಡಿನಲ್ಲಿ ನಡೆಯಲಿರುವ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಅಲಂಕಾರು ಸಿ ಎ ಬ್ಯಾಂಕ್ ಸಿಬ್ಬಂದಿ ಲೋಕನಾಥ ರೈ ಅವರ ಪತ್ನಿ.






error: Content is protected !!
Scroll to Top