ಚಿನ್ನ ಮರಳಿಸಿ ಪ್ರಮಾಣಿಕತೆ ಮೆರೆದ ರತ್ನಾಕರ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.14   13-01-2020 ಸೋಮವಾರದಂದು ಜಿಲ್ಲಾ ಗೃಹರಕ್ಷಕ ದಳದ ಮೇರಿಹಿಲ್ ಕಛೇರಿಯಲ್ಲಿ ಬೆಳ್ತಂಗಡಿ ಘಟಕದ ಗೃಹರಕ್ಷಕರಾದ ಶ್ರೀ ರತ್ನಾಕರ್, ಇವರು ದಿನಾಂಕ: 01-01-2020ರಂದು ಗುರುವಾಯನಕೆರೆ ಪಿಲಿಚಂಡಿಕಲ್ಲು ನಿವಾಸಿ ರಹಮತ್ ರವರು ಮಧ್ಯಾಹ್ನ ಎಟಿಎಂನಲ್ಲಿ ಬ್ಯಾಗನ್ನು ಮರೆತಿದ್ದರು. ಅದೇ ಎಟಿಎಂಗೆ ತೆರಳಿದ ಬೆಳ್ತಂಗಡಿ ಅಗ್ನಿಶಾಮಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಗೃಹರಕ್ಷಕರಾದ ರತ್ನಾಕರ ಮೆಟಲ್ ಸಂಖ್ಯೆ 891 ಇವರು ಚಿನ್ನಾಭರಣದ ಬ್ಯಾಗನ್ನು ಗಮನಿಸಿ ಅದನ್ನು ಸ್ಥಳೀಯ ನವಶಕ್ತಿ ಮಾಲಿಕರ ಮೂಲಕ ವಾರಿಸುದಾರರಿಗೆ ಹಿಂದಿರುಗಿಸಿರುತ್ತಾರೆ.

ಅವರನ್ನು ಆ ಕುಟುಂಬದ ವತಿಯಿಂದ ವಿಶೇಷ ಸ್ಮರಣಿಕೆಯೊಂದಿಗೆ ಸನ್ಮಾನಿಸಿ ಗೌರವಿಸಿರುತ್ತಾರೆ. ಇವರ ಪ್ರಾಮಾಣಿಕತೆಯನ್ನು ಗುರುತಿಸಿ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಡಾ|| ಮುರಲೀ ಮೋಹನ್ ಚೂಂತಾರು ಇವರ ಅಧ್ಯಕ್ಷತೆಯಲ್ಲಿ ಸನ್ಮಾನಿಸಲಾಯಿತು. ಇವರು ಮಾತನಾಡಿ ಇಂತಹ ಗೃಹರಕ್ಷಕರಿಂದ ಇಲಾಖೆಯ ಗೌರವ ಹೆಚ್ಚುತ್ತದೆ ಮತ್ತು ಸಿಕ್ಕಿದ ಬೆಲೆಬಾಳುವ ಚಿನ್ನಾಭರಣಗಳನ್ನು ತನ್ನದ್ದಲ್ಲವೆಂದು ಅರಿತು ವಾರಿಸುದಾರರಿಗೆ ಒಪ್ಪಿಸಿದ ರತ್ನಾಕರ ರವರ ಪ್ರಾಮಾಣಿಕತನ ಇತರ ಗೃಹರಕ್ಷಕರಿಗೆ ಮಾದರಿಯಾಗಿದ್ದು, ಅವರ ಸಮಯ ಪ್ರಜ್ಞೆ ಮತ್ತು ಕರ್ತವ್ಯ ನಿಷ್ಠೆಯನ್ನು ಶ್ಲಾಘಿಸಿದರು. ಇಂತಹ ಗೃಹರಕ್ಷಕರು ಸಮಾಜದ ಆಸ್ತಿ ಎಂದು ನುಡಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಪರಿಸರವಾದಿ ಶ್ರೀ ಮಾಧವ ಉಳ್ಳಾಲ ಇವರು ಮಾತನಾಡಿ ಬೆಳ್ತಂಗಡಿ ಅಗ್ನಿಶಾಮಕ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರತ್ನಾಕರರವರ ಸಾಧನೆಯನ್ನು ಶ್ಲಾಘಿಸಿದರು. ಇನ್ನೋರ್ವ ಅತಿಥಿ ಜೆಸಿಐ ಮಂಗಳೂರು ಪ್ರಾಂತ್ಯದ ಶ್ರೀ ದೀಪಕ್ ರವರು ಮಾತನಾಡಿ ತಾನೂ ಒಬ್ಬ ಹಳೆಯ ಗೃಹರಕ್ಷಕನಾಗಿದ್ದು, ಇವರ ಪ್ರಾಮಾಣಿಕತೆ, ಒಳ್ಳೆಯ ಮನಸ್ಸು, ಕರ್ತವ್ಯ ನಿಷ್ಠೆ ಗೃಹರಕ್ಷಕರಿಗೆಲ್ಲ ಮಾದರಿಯಾಗಿದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ನನಗೆ ತುಂಬಾ ಸಂತಸವನ್ನು ತಂದಿದೆ. ಸನ್ಮಾನ ಸ್ವೀಕರಿಸಿದ ರತ್ನಾಕರರವರು ಮಾತನಾಡಿ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದೇನೆ ಎಂಬ ಆತ್ಮವಿಶ್ವಾಸ ನನಗಿದೆ. ನನ್ನ ಕರ್ತವ್ಯವನ್ನು ಗುರುತಿಸಿ ಸನ್ಮಾನಿಸಿದ ಸಮಾದೇಷ್ಠರಿಗೆ ಹಾಗೂ ಉಪ ಸಮಾದೇಷ್ಠರಿಗೆ ಧನ್ಯವಾದ ತಿಳಿಸಿದರು. ಜಿಲ್ಲಾ ಗೃಹರಕ್ಷಕ ದಳದ ಉಪಸಮಾದೇಷ್ಟರಾದ ಶ್ರೀ ರಮೇಶ್ ಸ್ವಾಗತ ಭಾಷಣ ಮಾಡಿ ರತ್ನಾಕರ ರವರ ಉತ್ತಮ ಕಾರ್ಯದಿಂದ ಇಲಾಖೆಯ ಗೌರವವನ್ನು ಹೆಚ್ಚಿಸಿದ್ದಾರೆ. ಇದೇ ರೀತಿ ಎಲ್ಲಾ ಗೃಹರಕ್ಷಕರು ಉತ್ತಮ ಕರ್ತವ್ಯ ನಿರ್ವಹಿಸಬೇಕೆಂದು ನುಡಿದರು. ಮಂಗಳೂರು ಘಟಕದ ಹಿರಿಯ ಗೃಹರಕ್ಷಕರಾದ ಶ್ರೀ ರಮೇಶ್ ಭಂಡಾರಿ ಇವರು ವಂದನಾರ್ಪಣೆ ಮಾಡಿದರು. ಈ ಕಾರ್ಯಕ್ರಮದಲ್ಲಿ ಕಛೇರಿಯ ಅಧೀಕ್ಷಕರಾದ ಶ್ರೀ ಎಂ. ರತ್ನಾಕರ, ಪ್ರಥಮ ದರ್ಜೆ ಸಹಾಯಕರಾದ ಶ್ರೀಮತಿ ಅನಿತಾ ಟಿ. ಎಸ್. ಹಾಗೂ ಗೃಹರಕ್ಷಕ, ಗೃಹರಕ್ಷಕಿಯರು ಉಪಸ್ಥಿತರಿದ್ದರು.

Also Read  ಪ್ರಚೋದನೆಯನ್ನು ಪ್ರಬುದ್ದತೆಯಿಂದ ಎದುರಿಸೋಣ ➤ ಇಕ್ಬಾಲ್ ಬಾಳಿಲ

error: Content is protected !!
Scroll to Top