ಒರುಂಬಾಳು: ಪ್ರತಿಷ್ಠಾ ವಾರ್ಷಿಕೋತ್ಸವ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ

(ನ್ಯೂಸ್ ಕಡಬ) newskadaba.com, ಕಡಬ, ಜ.13    ನೂಜಿಬಾಳ್ತಿಲ ಗ್ರಾಮದ ಒರುಂಬಾಳು ಶ್ರೀ ಉಮಾಮಹೇಶ್ವರ ದೇವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ಸಾಮೂಹಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ ಹಾಗೂ ಗಣಹೋಮ ಕಾರ್ಯಗಳು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶನಿವಾರ ನಡೆಯಿತು.


ಶುಕ್ರವಾರ ಭಕ್ತಾಧಿಗಳಿಂದ ಕ್ಷೇತ್ರಕ್ಕೆ ಹಸಿರುವಾಣಿ ಸಮರ್ಪಣೆ ನಡೆಯಿತು. ಶನಿವಾರ ಪೂರ್ವಾಹ್ನ ದೇವತಾ ಪ್ರಾರ್ಥನೆ, ಆಚಾರ್ಯವರಣ, ಮಹಾಗಣಪತಿ ಹೋಮ, ಪಂಚವಿಂಶತಿ ಕಲಶಪೂಜೆ ಬಳಿಕ ಸಾರ್ವಜನಿಕ ಶ್ರೀ ಸತ್ಯನಾರಾಯಣ ದೇವರ ಪೂಜೆ, ಶ್ರೀ ದೇವರಿಗೆ ಕಲಶಾಭಿಷೇಕ, ನಾಗದೇವರಿಗೆ ತಂಬಿಲ ಸೇವೆ, ಪರಿವಾರ ದೈವಗಳಿಗೆ ತಂಬಿಲ ಸೇವೆ ನಡೆದು ಮದ್ಯಾಹ್ನ ಮಹಾಪೂಜೆ, ಪ್ರಸಾದ ವಿತರಿಸಲಾಯಿತು. ಬಳಿಕ ಹಸಿರುವಾಣಿ ಏಲಂ ನಡೆಸಲಾಯಿತು. ಬೆಳಿಗ್ಗೆ ನೂತನವಾಗಿ ನಿರ್ಮಾಣಗೊಂಡ ರೂ. 3 ಲಕ್ಷ ವೆಚ್ಚದ ಶಾಶ್ವತ ಚಪ್ಪರ ಹಾಗೂ ಶಾಶ್ವತ ನೀರಿನ ತಡೆಗೋಡೆಯನ್ನು ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಅನುವಂಶೀಯ ಮೊಕ್ತೇಸರರಾದ ಪುಟ್ಟಣ್ಣ ಗೌಡ ಮಿತ್ತಂಡೇಲು, ಆಡಳಿತ ಸಮಿತಿ ಅಧ್ಯಕ್ಷ ಬಾಲಕೃಷ್ಣ ಬಳ್ಳೇರಿ, ಗ್ರಾ.ಪಂ. ಅಧ್ಯಕ್ಷ ಸದಾನಂದ ಗೌಡ ಸಾಂತ್ಯಡ್ಕ, ರೆಂಜಿಲಾಡಿ ಬೀಡಿನ ಯಶೋಧರ ಯಾನೆ ತಮ್ಮಯ್ಯ ಬಳ್ಳಾಲ್, ಪ್ರಮುಖರಾದ ಪ್ರಸಾದ್ ಎನ್., ಶ್ರೀಧರ ಕಂಪ, ಸುಧೀಶ್ ಕುಮಾರ್, ಮಹಾವೀರ ಕೆ., ಯೋಗೀಶ್ ಮಿತ್ತಂಡೇಲು, ಯಶೋಧರ ಬದಿಬಾಗಿಲು, ಗಂಗಾಧರ ನಡುವಾಲು, ಶಕುಂತಲ ಪಲಯಮಜಲು, ಜಯಂತಿ ನಡುವಾಲು, ಪೂವಪ್ಪ ಗೌಡ ಮಿತ್ತಂಡೇಲು, ವಿಶ್ವನಾಥ ಮಿತ್ತೋಡಿ, ಪುರುಷೋತ್ತಮ ಮಿತ್ತಂಡೇಲು, ವಸಂತ ಪೂಜಾರಿ, ಉಮೇಶ್ ಮಿತ್ತಂಡೇಲು, ರದಿಶ್ ಪಲಯಮಜಲು ಸೇರಿದಂತೆ ಭಕ್ತರು ಉಪಸ್ಥಿತರಿದ್ದರು.

Also Read  ತಾಲೂಕು ಪಂಚಾಯತ್ ಕಚೇರಿ ಬಂಟ್ವಾಳ➤ಟೆಂಡರ್ ಆಹ್ವಾನ

error: Content is protected !!
Scroll to Top