ಅಂತಾರಾಷ್ಟ್ರೀಯ ಮಟ್ಟದ  ಕೌಶಲ್ಯ ಸ್ಪರ್ಧೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.11    ಚೀನಾದ ಶಾಂಘೈ ನಗರದಲ್ಲಿ ಸೆಪ್ಟೆಂಬರ್-2021 ಕ್ಕೆ ವಿಶ್ವ ಕೌಶಲ್ಯ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು, ಈ ಸ್ಪರ್ಧೆಯನ್ನು ವಲಯ, ರಾಜ್ಯ, ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ನಡೆಯಲಿದೆ.

ಕರ್ನಾಟಕ ರಾಜ್ಯದಿಂದ 38 ವಿವಿಧ ರೀತಿಯ ಕೌಶಲ್ಯ ಗಳನ್ನು ಸ್ಪರ್ಧೆಗೆ ಗುರುತಿಸಲಾಗಿದೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಯಾವುದೇ ಕನಿಷ್ಟ ವಿದ್ಯಾರ್ಹತೆಯನ್ನು ನಿಗದಿಪಡಿಸಿರುವುದಿಲ್ಲ. 38 ಕೌಶಲ್ಯ ಸ್ಪರ್ಧೆಗೆ ಭಾಗವಹಿಸಲು ಅಭ್ಯರ್ಥಿಗಳು 1ನೇ ಜನವರಿ 1999 ನಂತರ ಜನಿಸಿದವರಾಗಿರಬೇಕು. ಮೊಬೈಲ್ ರೋಬೋಟಿಕ್ಸ್, ಸೈಬರ್ ಸೆಕ್ಯೂರಿಟಿ, ಲ್ಯಾಂಡ್ ಸ್ಕೇಪ್ & ಗಾರ್ಡನಿಂಗ್, ಕಾಂಕ್ರೀಟ್ ವರ್ಕ್ ಮತ್ತು ಮೆಕಾಟ್ರಾನಿಕ್ಸ್ ವಿಭಾಗದಲ್ಲಿ ಭಾಗವಹಿಸಲು 1ನೇ ಜನವರಿ 1996 ರ ನಂತರ ಜನಿಸಿದವರಾಗಿರಬೇಕು. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಆಸಕ್ತಿಯುಳ್ಳ ಅಭ್ಯರ್ಥಿಗಳು ಉಚಿತವಾಗಿ ಅಂತರ್ಜಾಲ ತಾಣದಲ್ಲಿ  ನೋಂದಾಯಿಸಿಕೊಳ್ಳಬಹುದು. ಮೊದಲ ಹಂತದ ಸ್ಪರ್ಧೆಯ ನಂತರ ಚೀನಾದ ಶಾಂಘೈ ನಗರದಲ್ಲಿ ನಡೆಯುವ ಸ್ಪರ್ಧೆಯಲ್ಲಿ ಭಾಗವಹಿಸುವರೆಗಿನ ಸಂಪೂರ್ಣ ಖರ್ಚು ವೆಚ್ಚಗಳನ್ನು ರಾಜ್ಯ ಸರಕಾರವೇ ಭರಿಸುತ್ತದೆ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ, ದ.ಕ., ಜಿಲ್ಲೆ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

error: Content is protected !!

Join the Group

Join WhatsApp Group