ಮಂಗಳೂರು: ಶಾಸ್ತ್ರೀಯ ಮತ್ತು ಜನಪದ ನೃತ್ಯ ತರಗತಿ ಉದ್ಘಾಟನೆ

(ನ್ಯೂಸ್ ಕಡಬ) newskadaba.com, ಮಂಗಳೂರು, ಜ.8    ಚೂಂತಾರೂ ಸರೋಜಿನಿ ಭಟ್ ಪ್ರತಿಷ್ಠಾನ (ರಿ.) ಮಂಗಳೂರು ಹಾಗೂ ವೈಷ್ಣವಿ ನಾಟ್ಯಲಯ ಪೂತ್ತೂರು ಇದರ ಜಂಟಿ ಆಶ್ರಯದಲ್ಲಿ ವಿದುಷಿ ಶ್ರೀಮತಿ ಯೋಗೀಶ್ವರಿ ಜಯಪ್ರಕಾಶ್ ಇವರ ನೃತ್ಯ ನಿರ್ದೇಶನದಲ್ಲಿ ಬೆಳೆದ ಕುಮಾರಿ ಸ್ನೇಹ ಭಟ್ ಚೂಂತಾರು ಇವರ ಶಾಸ್ತ್ರೀಯ ಮತ್ತು ಜನಪದ ನೃತ್ಯ ತರಗತಿ ಯನ್ನು ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಅಧ್ಯಕ್ಷರಾದ ಶ್ರೀ ದಯನಂದ ಕತ್ತಲ್ ಸಾರ್ ದೀಪ ಬೆಳಗಿಸಿ ಉದ್ಘಾಟಿಸಿ ಕುಮಾರಿ ಸ್ನೇಹಳಿಗೆ ಸರಿಯಾದ ಗುರು ಸಿಕ್ಕಿದ್ದಾರೆ ಹಾಗೂ ಒಳ್ಳೆಯ ಗುರಿಯೂ ಇದೆ, ತಾನೂ ಕಲಿತ ಕಲೆಯನ್ನು ಇನ್ನೊಬ್ಬರಿಗೆ ಕಲಿಸುವ ಮನಸ್ಸು ಮಾಡಿರುವುದು ಹಾಗೂ ಇದಕ್ಕೆ ತನ್ನ ಮನೆಯವರ ಬೆಂಬಲ ಇರುವುದರಿಂದ ನೃತ್ಯ ತರಗತಿಯಲ್ಲಿ ಸಾಧನೆಯನ್ನು ಮಾಡಿ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಯಾಗಿ ಬೆಳೆಯಲಿ ಎಂದು ಶುಭ ಹಾರೈಸಿದರು.


ಕಾರ್ಯಕ್ರಮದಲ್ಲಿ ಕುಮಾರಿ ಸ್ನೇಹ ಭಟ್ ಚೂಂತಾರು ಇವರು ತಮ್ಮ ಗುರುಗಳಾದ ವಿದುಷಿ ಶ್ರೀಮತಿ ಯೋಗೀಶ್ವರಿ ಜಯಪ್ರಕಾಶ್ ಇವರಿಗೆ ಗುರುವಂದನೆಯನ್ನು ಸಲ್ಲಿಸಲಿಸಿದರು, ಚೂಂತಾರೂ ಸರೋಜಿನಿ ಭಟ್ ಪ್ರತಿಷ್ಠಾನ (ರಿ.) ಮಂಗಳೂರು ಇದರ ಗೌರವ ಅಧ್ಯಕ್ಷರಾದ ಶ್ರೀ ಚೂಂತಾರು ಲಕ್ಷ್ಮೀ ನಾರಾಯಣ ಭಟ್ ಗೌರವ ಉಪಸ್ಥಿತರಾಗಿದ್ದರು, ಚೂಂತಾರೂ ಸರೋಜಿನಿ ಭಟ್ ಪ್ರತಿಷ್ಠಾನ (ರಿ.) ಮಂಗಳೂರು ಇದರ ಟ್ರಸ್ಟಿಯಾದ ಶ್ರೀ ಮಹೇಶ್ ಭಟ್ ಚೂಂತಾರು ಸ್ವಾಗತಿಸಿದರು, ಕುಮಾರಿ ಸ್ನೇಹ ಭಟ್ ಧನ್ಯವಾದ ಸಲ್ಲಿಸಿದರು, ಚೂಂತಾರೂ ಸರೋಜಿನಿ ಭಟ್ ಪ್ರತಿಷ್ಠಾನ (ರಿ.) ಮಂಗಳೂರು ಇದರ ಕಾರ್ಯದರ್ಶಿಯಾದ ಶ್ರೀ ಮುರಳಿ ಮೋಹನ್ ಚೂಂತಾರು ಕಾರ್ಯಕ್ರಮ ನಿರೂಪಿಸಿದರು.

error: Content is protected !!

Join the Group

Join WhatsApp Group