ಆಲಂಕಾರು: ಗೇರು ಮರ ಮುರಿದು ಬಿದ್ದು ಮನೆ ಜಖಂಗೊಂಡ ಘಟನೆ



(ನ್ಯೂಸ್ ಕಡಬ) newskadaba.com, ಕಡಬ, ಡಿ.30  ಕಡಬ ತಾಲೂಕು ರಾಮಕುಂಜ ಗ್ರಾಮದ ಸಂಪ್ಯಾಡಿ ಕುಂಞರವರ ಮನೆಗೆ ಬೃಹತ್ ಗಾತ್ರದ ಗೇರು ಮರ ಮನೆಗೆ ಮುರಿದು ಬಿದ್ದು ಮನೆ ಜಖಂಗೊಂಡ ಘಟನೆ ಶನಿವಾರ ಬೆಳಿಗ್ಗೆ ಸಂಭವಿಸಿದೆ.








ಮನೆಯಲ್ಲಿ ತಮ್ಮ ಇಬ್ಬರು ಪುತ್ರರೊಂದಿಗೆ ಮಲಗಿದ್ದ ಸಂಧರ್ಭದಲ್ಲಿ ಮನೆಯ ಎದುರಿನಲಿದ್ದ ಮರ ಮನೆಯ ಛಾವಣಿಗೆ ಮುರಿದು ಬಿದ್ದಿದೆ. ಮರ ಬಿದ್ದ ಪರಿಣಾಮ ಮೂವರು ಸಣ್ಣ ಪುಟ್ಟ ಗಾಯಗೊಳಗಾಗಿದ್ದಾರೆ.
ಮನೆ ಸಂಪೂರ್ಣ ಜಖಂಗೊಂಡಿದ್ದು ವಿದ್ಯುತ್ ಉಪಕರಣಗಳು ಹಾಳಾಗಿದ್ದು ಮನೆಯ ಛಾವಣಿ ಕುಸಿದಿದೆ. ಘಟನಾ ಸ್ಥಳಕ್ಕೆ ರಾಮಕುಂಜ ಗ್ರಾಮಕರಣಿಕರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.






error: Content is protected !!
Scroll to Top