ಆತೂರು ದಿಕ್ರ್ ಹಲ್ಕಾ ಇದರ 19 ನೇ ವಾರ್ಷಿಕೋತ್ಸವದ ಉದ್ಘಾಟನಾ ಸಮಾರಂಭ



(ನ್ಯೂಸ್ ಕಡಬ) newskadaba.com, ಕಡಬ, ಡಿ.30      ಬದ್ರಿಯಾ ಜುಮ್ಮಾ ಮಸೀದಿ ಆತೂರು ಚರಿತ್ರ ಪ್ರಸಿದ್ದ ಆತೂರು ದಿಕ್ರ್ ಹಲ್ಕಾ ಇದರ 19 ನೇ ವಾರ್ಷಿಕೋತ್ಸವ ದ ಉದ್ಘಾಟನೆ ಸಮಾರಂಭ  ಸುಲ್ತಾನುಲ್ ಹಿಂದ್ ವೇದಿಕೆ ಆತೂರುನಲ್ಲಿ ನಡೆಯಿತು.








ಆತೂರು ಬದ್ರಿಯಾ ಜುಮಾ ಮಸೀದಿ ಮುದರ್ರಿಸ್ ಸಯ್ಯಿದ್ ಮುಹಮ್ಮದ್ ಜುನೈದ್ ಜಿಫ್ರೀ ತಂಙಳ್ ಆತೂರು, ಕಾರ್ಯಕ್ರಮವನ್ನು ಉದ್ಘಾಟಿಸಿದರು. ಅಬ್ದುಲ್ ರಝಾಕ್ ಬಿ. ಕೆ ಆತೂರು ಅಧ್ಯಕ್ಷತೆ ವಹಿಸಿದರು. ಇರ್ಷಾದ್ ದಾರಿಮಿ  ಪ್ರಾರ್ಥನೆಗೆ  ಚಾಲನೆ ನಿಡಿದರು. ಎತ್ತ ಕಡೆ ಸಾಗುತ್ತಿದೆ ಯುವ ಸಮೂಹವೆಂಬ ವಿಷಯದ ಕುರಿತು ಹಮೀದ್ ಫೈಝಿ ಕಿಲ್ಲೂರ್ ಮುಖ್ಯ ಫ್ರಭಾಷಣ ಮಾಡಿದರು. ಶಾಹುಲ್ ಹಮೀದ್ ಫೈಝಿ, ಬಶೀರ್ ಮುಸ್ಲಿಯಾರ್ ಉಪಸ್ಥಿತರಿದ್ದರು. ಸಿರಾಜ್ ಬಡ್ಡಮೆ ಸ್ವಾಗತಿಸಿದರು.  ರಫೀಕ್ ಜಿ ಕಾರ್ಯಕ್ರಮವನ್ನು  ನಿರೂಪಿಸಿ ವಂದಿಸಿದರು.






error: Content is protected !!
Scroll to Top