ಯುವಜನ ಸಂಬಂಧಿ ತೊಂದರೆಗೆ ಯುವಸ್ಪಂದನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.19  ಯುವ ಜನರಿಗೆ ಭಾವನಾತ್ಮಕ ಮಾನಸಿಕ ಹಾಗೂ ಮನೋಸಾಮಾಜಿಕ ಬೆಂಬಲ ಸೇವೆಗಳನ್ನು ನೀಡುವುದು ಯುವ ಸ್ಪಂದನದ ಉದ್ದೇಶ ಎಂದು ಬೆಂಗಳೂರು ನಿಮಾನ್ಸ್ ಇದರ ಮಾನಿಟರ್ ಹಾಗೂ ಇವಾಲ್ಯೂಷನ್ ವಿಭಾಗದ ಗಿರೀಶ್ ಹೇಳಿದರು.


ಅವರು ಕರ್ನಾಟಕ ಸರಕಾರದ ಯುವ ಸಬಲೀಕರಣ, ಕ್ರೀಡಾ ಇಲಾಖೆ, ಯುವಸ್ಪಂದನ ಕೇಂದ್ರ, ನಿಮಾನ್ಸ್ ಬೆಂಗಳೂರು ಸಹಯೋಗದಲ್ಲಿ ಪದುವಾ  ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅರಿವು ಕಾರ್ಯಕ್ರಮದಲ್ಲಿ ಅತಿಥಿ ಯಾಗಿ ಮಾತನಾಡಿದರು. ಯುವಸ್ಪಂದನ ಕೇಂದ್ರ ಯುವ ಜನ ಸಂಬಂಧಿ ವಿಷಯಗಳಿಗಾಗಿ ಇರುವ ಮಾರ್ಗದರ್ಶನ ಕೇಂದ್ರ. ಯಾವುದೇ ವಯೋಮಾನದವರು ಯುವ ಜನ ಸಂಬಂಧಿ ತೊಂದರೆಗಳಿಗಾಗಿ ಕೇಂದ್ರವನ್ನು ಸಂಪರ್ಕಿಸಬಹುದು ಎಂದರು. ಭಾರತ್ ಸ್ಕೌಟ್ಸ್ ಗೈಡ್ಸ್ ರಾಷ್ಟ್ರೀಯ ತರಬೇತುದಾರ ಡಾ. ಪ್ರತಿಮ್ ಕುಮಾರ್ ಮಾತನಾಡಿ, ಯುವಕರು ದೇಶದ ಆಸ್ತಿ. ತಾವು ಯಾರೆಂದು ಮನವರಿಕೆ ಮಾಡಿ ನಮ್ಮ ಕರ್ತವ್ಯ ನಿರ್ವಹಿಸಿದಾಗ ನಮ್ಮ ಜಾಗೃತ ಸಮಾಜ ಸಾಧ್ಯ. ಮದ್ಯಪಾನ, ಡ್ರಗ್ಸ್ ಹಾಗೂ ಇತರ ಅನೈತಿಕ ಕೆಲಸಗಳಿಂದ ದೂರ ಇರುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ನಿಮಾನ್ಸ್ ಬೆಂಗಳೂರು ಇದರ ಕ್ಷೇತ್ರ ಸಂಪರ್ಕ ಅಧಿಕಾರಿ ಪ್ರೇಮಾ,   ಪಾದುವಾ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಆಲ್ವಿನ್ ಸೆರಾವೊ,  ಯುವಸ್ಪಂದನ ಕೇಂದ್ರದ ಸಂಯೋಜಕ ಡೊಂಬಯ್ಯ ಇಡ್ಕಿದು, ಯುವಸಮಾಲೋಚಕ ಆದರ್ಶ್ ಶೆಟ್ಟಿ, ಶ್ರೀಕಾಂತ್ ಪೂಜಾರಿ ಬಿರಾವು, ಶಾಂತಪ್ಪ ಮುಂಡಾಜೆ , ಪಾದುವ ಕಾಲೇಜಿನ ಇಕೋ ಕ್ಲಬ್ ಇದರ ಸಂಯೋಜಕ  ಶ್ರೀಧರ್ ಉಪಸ್ಥಿತರಿದ್ದರು.

Also Read  ರಾಜ್ಯಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್- ಕಡಬದ ಬ್ಯೂಲಾ ಪಿ.ಟಿ ಅವರಿಗೆ ಬೆಳ್ಳಿ ಪದಕ

Nk Kukke

error: Content is protected !!
Scroll to Top