ಅಮ್ಮ ನಿನ್ನ ಕಿರುಬೆರಳಿನಲ್ಲಿ ನಾನು…… ✍ ಆಶಿತಾ ಎಸ್ ಗೌಡ, ಬಿಳಿನೆಲೆ

(ನ್ಯೂಸ್ ಕಡಬ) newskadaba.com, ವಿಶೇಷ ಲೇಖನ, ಡಿ.9  ಪ್ರಕೃತಿಯ ಮಡಿಲಿನಲ್ಲಿ ಅದೆಷ್ಟೊ ವಿಚಿತ್ರ ವಿಭಿನ್ನ ಮನುಷ್ಯರು ಹುಟ್ಟಿಕೊಳ್ತಾರೆ ಅಲ್ವಾ?
ಒಮ್ಮೆ ನಮ್ಮ ಸುತ್ತ ಮುತ್ತ ಗಮನಿಸಿದ್ರೆ ಸಾಕು ಒಬ್ಬರ ಹಿಂದೆ ಒಂದೊಂದು ಕಥೆಗಳ ಬಣ್ಣಗಳಿಂದ ತುಂಬಿ ಕೊಂಡಿರುತ್ತವೆ. ಯಾರಿಗೂ ಯಾವ ಬಣ್ಣಗಳ ದರ್ಶನವೂ ಸಿಗುವುದಿಲ್ಲ. ಒಂದು ಮಾತಿದೆ ಜೀವನದಲ್ಲಿ ಹೆಚ್ಚು ನೋವು ಅನುಭವಿಸಿದವರು ಯಾವಗ್ಲೂ ಹಸನ್ಮುಖಿಯಾಗಿರುತ್ತಾರೆ. ಯಾರೊಬ್ಬರೂ ಹುಟ್ಟಾನೇ ತನಗೆ ಅಂಥದೆ ಜೀವನ ಬೇಕು ಇಂತದೆ ಜೀವನ ಬೇಕು ಎಂದು ಕೇಳಿಕೊಂಡು ಹುಟ್ಟುವುದಿಲ್ಲ. ಇದನ್ನ ಕೆಲವರು ಹಣೆಬಹರದ ಜೀವನ ಅಂತಲೂ ಹೇಳುವುದುಂಟು. ಅಮ್ಮನ ಈ ಕಿರು ಬೆರಳಿಗೆ ತನ್ನ ಕಿರುಬೆರಳನ್ನ ಬಿಗಿಯಾಗಿ ಹಿಡಿದಿದ್ದ ಆ ಮಗುವಿನ ಹಣೆಬರಹವೇನಾಗಿತ್ತೋ ಏನೋ..

ಅದೊಂದು ದಿನಾ ನಾನು ಎಕ್ಸಾಮ್ ರಜೆ ಮುಗಿಸಿಕೊಂಡು ಮನೆಯಿಂದ ಮತ್ತೇ ಪಿಜಿ ಕಡೆ ಹೊರಟ್ಟಿದೆ. ಬೆಳ್ಳಿಗೆ ಸುಮಾರು 8:45 ರ ಬಸ್ಸಿನಲ್ಲಿ ಮಂಗಳೂರ ಕಡೆ ನನ್ನ ಪಯಣ ಶುರುವಾಯ್ತು. ನಂಗೆ ಬಸ್ಸಲ್ಲಿ ಕಿಟಕಿ ಪಕ್ಕ ಕುಳಿತುಕೊಳ್ಳೊದು ಅಂದ್ರೆ ತೊಂಬಾನೇ ಇಷ್ಟ. ಹಾಗಾಗಿ ಬಸ್ಸ್ ಏರಿದವಳೇ ಹೋಗಿ ಕಿಟಕಿ ಪಕ್ಕ ಕುಳಿತು ಬಿಟ್ಟೆ. ಮಳೆ ಹನಿಯ ಸ್ಪರ್ಶಕ್ಕೆ ಸೂರ್ಯನ ಕಿರಣಗಳಿಗೆ ಚುಂಬಿಸುವ ಆ ಹನಿಗಳು. ಸ್ವಚ್ಚವಾದ ಕಾನನಗಳು, ಅದ್ಬುತವಾದ ಹಚ್ಚ ಹಸಿರಿನ ನೋಟವನ್ನು ಸವಿಯಲು ಕಿಟಕಿ ಪಕ್ಕ ಕುಲಿತರೆ ಗಮನ ಬೇರೆ ಯಾವ ಕಡೆಯು ಹೆಜ್ಜೆ ಹಾಕದು ಅಷ್ಟೆ. ಈ ಸುಂದರವಾದ ಪರಿಸರದ ಮದ್ಯೆ ಇನ್ನು ನಮ್ಮ ಸರ್ಕಾರಿ ಬಸ್ಸ್ ಗಳ ಕಥೆ ಕೆಳ್ ಬೇಕೆ??!! ಅಲ್ಲಾಲ್ಲಿ ಸಿಗೋ ಪ್ರಯಾಣಿಕರನ್ನ ಹತ್ತಿಸಿಕೊಂಡು ಹೋಗ್‍ಬೇಕಾದದ್ದು ಅದ್ರದ್ದು ಕೆಲಸನೇ ಅಲ್ವೇ. ಇನ್ನು ಪ್ರಯಾಣಿಕರು ಅಲ್ಲಲ್ಲಿ ಹತ್ತು ನಿಮಿಷಕೊಂದು ಸ್ಟಾಪ್ ನಲ್ಲಿ ಹತುತ್ತಿದ್ರು, ಇಳಿತಿದ್ದ್ರು.. ಹೀಗೆ ಸಕಾರಿ ಬಸ್ಸ್ ನಲ್ಲಿ ಪ್ರಯಾಣ ಗಮ್ಮತ್ತಲ್ಲಿ ಸಾಗುತ್ತಿತ್ತು. ಹೀಗೆ ಸಾಗುತ್ತಿದ್ದ ವೇಳೆ ಅದೊಂದು ಮಾರ್ಗ ಮದ್ಯೆ ತಾಯಿಯೊಬ್ಬಳು ತನ್ನ ಇಪ್ಪತ್ತೆರಡರ ಆಸು ಪಾಸಿನ ಮಗಳ ಜೊತೆ ಬಸ್ಸಿಗೆ ಕೈ ಹಿಡಿದು ನಿಲ್ಲಿಸಿದಳು. ಕಂಡೆಕ್ಟರ್ ಅವರನ್ನ ಹತ್ತಿಕೊಂಡರು. ಅದೇಕೊ ತಟ್ಟನೆ ನನ್ನ ಕಣ್ಣು ಆ ತಾಯಿ ಮಗಳ ಮೇಲೆ ಹಾರತೊಡಗಿತ್ತು.ಅದೇಕೊ ಗೊತ್ತಿಲ್ಲ ಆ ತಾಯಿಯ ಜೊತೆ ಇದ್ದ ಮಗಳನ್ನ ನೋಡಲು ಎರಡು ಕಣ್ಣು ಸಾಲದು ಎಂದು ಅನ್ನಿಸೋಕೆ ಶುರುವಾಯ್ತು. ಹೌದು ಆಕೆಯ ಸೌಂದರ್ಯ ಅಂತದ್ದು ಅಷ್ಟೊಂದು ಅದ್ಬುತ. ಭಾವನೆಗಳನ್ನು ವ್ಯಕ್ತಪಡಿಸುವ ಆ ಕಣ್ಣಂಗಳ ನೋಟ , ಕಾಮನಬಿಲ್ಲನೆ ನಾಚಿಸುವಂತಹ ಆಕೆಯ ಆ ಹುಬ್ಬುಗಳು, ಆ ತುಸು ಮುಗುಳು ನಗು, ನವಿಲಿನಗರಿಯಂತೆ ತೋರುವ ಆ ಉದ್ದನೆಯ ಕೇಶ, ಅದಕೊಂದಿಷ್ಟು ಶೃಂಗಾರಮಯವಾದ ಹೂವಿನ ಅಲಂಕಾರ.ಕೈ ತುಂಬಾ ಬಳೆಗಳು, ಹೆಜ್ಜೆಯ ಸಪ್ಪಲಕ್ಕೆ ಧನಿಗೂಡಿಸುವ ಕಾಲ್ಗೆಜೆಗಳು ಇವೆಲ್ಲವುದಕ್ಕೆ ದೃಷ್ಟಿಯಾಗದಂತೆ ಕೆನ್ನೆಯ ಮೇಲೆ ದೇವರು ಸೃಷ್ಟಿಸಿರುವ ಒಂದು ಪುಟ್ಟಮಚ್ಚೆ. ಅಬ್ಬ ಅಲ್ಲ ಕಣ್ಣಿಗೆ ಹಬ್ಬ ಅನುಸ್ತು.. ಕೆಲವು ಹೆಣ್ಮಕ್ಕಳು ಹುಟ್ಟ್ ತ್ತಾನೆ ಸೌದಂರ್ಯ ತುಂಬಿಕೊಂಡು ಹುಟ್ಟಿರ್ತಾರೆ. ಇನ್ನ್ ಕೆಲವರು ಸುಣ್ಣ ಬಣ್ಣ ಬಡಿದು ತಮ್ಮ ಸೌದಂರ್ಯ ಹೆಚ್ಚಿಸಿಕೊಳ್ತಾರೆ. ಎನ್ ಮಾಡೊದು ಹೇಳಿ ಪಾಲಿಗೆ ಬಂದದ್ದು ಪಂಚಾಮೃತ ಅಂಥ ಸ್ವೀಕರಿಸೋರು ತುಂಬಾ ಕಡಿಮೆ. ಇರ್ಲಿ ಬಿಡಿ.

ಆದ್ರೆ ಆ ತಾಯಿ ಮಗಳ ಒಡನಾಟದಲ್ಲಿ ಅದೆಕೋ ನನಗೆ ಸ್ವಲ್ಪ ವಿಭಿನ್ನತೆ ಎದ್ದು ಕಾಣಿಸಿತ್ತು !! ಆ ಮುದ್ದಾದ ಮಗಳು ತನ್ನ ತಾಯಿಯ ಕಿರು ಬೆರಳನ್ನೇ ಬಿಗಿಯಾಗಿ ಹಿಡಿದು ನಿಂತಿದ್ದಳು. ಜೊತೆಗೆ ಕಸಿ ವಿಸಿಯಲ್ಲಿ ಮೆಲ್ಲನೆ ಹೆಜ್ಜೆಯಿಡುತ್ತಿದ್ದಳು.. ಹೌದು ಆ ಭಿನ್ನತೆಯ ಬಗ್ಗೆ ಏನಂತ ಹೇಳಲಿ ತನ್ನ ಕಣ್ಣು ತಾನೇ ನಂಬಲು ಸಾಧ್ಯವಾಗಲಿಲ್ಲ. ಈಗಿನ ಕಾಲದಲ್ಲಿ ಯಾವ ಮಕ್ಕಳು ತಾನೇ ತಮ್ಮ ತಂದೆ ತಾಯಿಯ ಜೊತೆ ಹೊರಗಡೆ ಹೋಗುತ್ತಾರೆ ಹೇಳಿ.. ಏನೇ ಇದ್ರು ಫ್ರೆಂಡ್ಸ್ ಜೊತೆ ಹೋಗೊದೆ ಹೆಚ್ಚು. ಇನ್ನು ಈ ತಾಯಿ ಮಗಳ ಅನ್ಯೋನ್ಯತೆ ನೋಡಿ ಒಮ್ಮೆ ಗಮ್ಮತ್ ಅನ್ಸಿತ್ತು. ಆದ್ರೆ ದೇವರು ಎಲ್ಲವನ್ನೂ ಕೊಟ್ಟು ಬಾಳಿಗೆ ಬೆಳಕಿನ ದಾರಿ ತೋರಿಸುವ ಪ್ರಪಂಚದ ದೀಪ ಬೆಳಗಿಸುವ ಬೆಳಕನ್ನೆ ಆಕೆಯಿಂದ ಕಸಿದುಕೊಂಡಿದ್ದಾನೆ. ಎಂತ ವಿಪರ್ಯಸವೆನಿಸಿತ್ತು. ದೇವರು ಆಕೆಯನ್ನ ಅಂಧಾಕರದೆಡೆಗೆ ನೂಕಿದನೇ(ಆಕೆಗೆ ಅದುವೆ ಆ ದೇವರ ವರವೇ) ಎಂದು. ಈ ಕ್ಷಣದಲ್ಲೂ ಆಕೆಯ ತಾಯಿ ಕೈ ಬಿಡದೆ ಆಕೆಗೆ ಶ್ರೀರಕ್ಷೆಯಾಗಿ ನಿಂತಿದ್ದಾರೆ. ಹೆತ್ತ ತಾಯಿಗೆ ಯಾವಗ್ಲೂ ಹೆಗ್ಗಣ ಮುದ್ದು ಅನ್ನೋ ಮಾತು ಅಕ್ಷರಸಹ ನಿಜವೆನಿಸಿತ್ತು. ತನಗೆ ಹುಟ್ಟಿದ ಮಗು ಹೆಣ್ಣಾಗ್ಲಿ, ಗಂಡಾಗ್ಲಿ, ಕುರೂಪಿಯಾಗ್ಲಿ, ರೂಪವಂತನೆ ಆಗ್ಲಿ ಹೇಗಿದ್ದರು ಸರಿ.. ತಾಯಿಯಾದವಳು ಮಕ್ಕಳನ್ನ ಕಣಲ್ಲಿ ಕಣ್ಣಿಟ್ಟು ಕಾಯುತ್ತಾಳೆ.. ಎಂಬುವುದು ಮತ್ತೋಮ್ಮೆ ಕಣ್ಣಿಗೆ ಭಾಸವಾಯಿತ್ತು.

‘ಇಂದು ಕಣ್ಣಿದ್ದರು ಕಾಣಿಸದಂತೆ,ಕಣ್ಣು ಮುಚ್ಚಿಕೊಂಡು ಬದುಕುವ ಪರಿಸ್ಥಿತಿ ಪ್ರಪಂಚದಲ್ಲಿ ನಿರ್ಮಾಣವಾಗಿ ಬಿಟ್ಟಿದೆ.’

“ಅಂಧಕಾರವೆಂದರೆ ಅದು ದೇಹಕ್ಕೆ ಮಾತ್ರ, ಮನಸಿಗಲ್ಲ ಕತ್ತಲುವೆಂಬುವುದು ಒಂದು ಅಂಧವಾದ ಬಣ್ಣ. ಅದರಲ್ಲು ಸ್ವಚ್ಚಂದವಾದ ಸ್ವಪ್ನಗಳಿರುತ್ತವೆ,ರಾಶಿ ರಾಶಿ ಕನಸುಗಳಿಗೆ ಬಣ್ಣಗಳಿರುತ್ತವೆ”

• ಆಶಿತಾ ಎಸ್ ಗೌಡ
   ಬಿಳಿನೆಲೆ

 

error: Content is protected !!

Join the Group

Join WhatsApp Group