ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಸರಕಾರಿ, ಸರಕಾರೇತರ ನೌಕರರ ಸ್ನೇಹಕೂಟ-ಸಮಿತಿ ರಚನೆ

(ನ್ಯೂಸ್ ಕಡಬ) newskadaba.com, ಕಡಬ, ಡಿ.9  ಕಡಬ ಒಕ್ಕಲಿಗ ಗೌಡ ಸೇವಾ ಇದರ ವತಿಯಿಂದ ಗೌಡ ಸಮುದಾಯದ ಸರಕಾರಿ ಮತ್ತು ಸರಕಾರೇತರ ನೌಕರರ ಸ್ನೇಹಕೂಟ ಕಾರ್ಯಕ್ರಮ ಡಿ.8ರಂದು ಕಡಬ ಒಕ್ಕಲಿಗ ಗೌಡ ಸಮುದಾಯ ಭವನದಲ್ಲಿ ನಡೆಯಿತು.


ಕಡಬ ವಲಯ ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ತಮ್ಮಯ್ಯ ಗೌಡ ಸುಳ್ಯ ಇವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಅವರು ಸಂಘಟನೆ ಬಲಗೊಳಿಸುವ ನಿಟ್ಟಿನಲ್ಲಿ ಮಾತನಾಡಿದರು. ವೇದಿಕೆಯಲ್ಲಿ ಗೌಡ ಸಂಘದ ಕಾರ್ಯದರ್ಶಿ ಮಂಜುನಾಥ ಗೌಡ ಕೊಲಂತ್ತಾಡಿ, ಕಾರ್ಯಕ್ರಮದ ಸಂಚಾಲಕ ಜಯರಾಮ ಗೌಡ ಆರ್ತಿಲ, ಮಹಿಳಾ ಘಟಕದ ಅಧ್ಯಕ್ಷೆ ನೀಲಾವತಿ ಶಿವರಾಮ, ಕಾರ್ಯದರ್ಶಿ ರುಕ್ಮುಣಿ ಸಾಂತಪ್ಪ ಗೌಡ ಪಿಜಕಳ, ಒಕ್ಕಲಿಗ ಉದ್ಯಮಿಗಳ ಸಮಿತಿಯ ಅಧ್ಯಕ್ಷ ರಾಧಾಕೃಷ್ಣ ಗೌಡ ಕೋಲ್ಪೆ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಮಂಜುನಾಥ ಕೊಳಂತ್ತಾಡಿ ವಂದಿಸಿದರು, ಸೀತಾರಾಮ ಗೌಡ ಪೊಸವಳಿಕೆ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸರಕಾರಿ ಹಾಗೂ ಸರಕಾರೇತರ ನೌಕರರಿಗೆ ಶಾಲು ಹೊದಿಸಿ ಸನ್ಮಾನಿಸಲಾಯಿತು.

Also Read  ಬರ ಪೀಡಿತ ತಾಲ್ಲೂಕುಗಳಲ್ಲಿ ಗೋಶಾಲೆ ಆರಂಭ

ಈ ಸಂದರ್ಭದಲ್ಲಿ ಒಕ್ಕಲಿಗ ನೌಕರರ ಸಮಿತಿಯನ್ನು ರಚಿಸಲಾಗಿದ್ದು ಅಧ್ಯಕ್ಷರಾಗಿ ನೂಜಿಬಾಳ್ತಿಲ ಪಂಚಾಯತ್ ಅಭಿವೃದ್ದಿ ಅಧಿಕಾರಿ ಆನಂದ ಗೌಡ, ಕಾರ್ಯದರ್ಶಿಯಾಗಿ ದೈಹಿಕ ಶಿಕ್ಷಕ ರಾಮಚಂದ್ರ ಆಯ್ಕೆಯಾಗಿದ್ದಾರೆ, ಉಪಾಧ್ಯಕ್ಷರಾಗಿ ನಿವೃತ್ತ ಎ.ಎಸ್.ಐ. ಕುಶಲಪ್ಪ ಗೌಡ, ಪಿಡಿಒ ಲಲಿತಾ ಜಿ.ಡಿ, ನಿವೃತ್ತ ಬ್ಯಾಂಕ್ ಮ್ಯಾನೆಜರ್ ಕೇಶವ ಗೌಡ ಪುತ್ತಿಲ, ಶಿಕ್ಷಕಿ ವೀರಮ್ಮ, ಜತೆ ಕಾರ್ಯದರ್ಶಿಯಾಗಿ ಸಿತಾರಾಮ ಗೌಡ ದೇರಾಜೆ ಆಯ್ಕೆಯಾಗಿದ್ದಾರೆ. ಸದಸ್ಯರಾಗಿ ದೇವಣ್ಣ ಗೌಡ ನೆಲ್ಲ ಬಲ್ಯ, ಪುನಿತ್ ಸುಳ್ಯ ಐತ್ತೂರು, ಯಶೋಧರ ಬಲ್ಯ, ಜಯರಾಮ ಗೌಡ ಗಟ್ಟಿಗಾರು ಆಯ್ಕೆಯಾಗಿದ್ದಾರೆ.

error: Content is protected !!
Scroll to Top