ನೀರು ತುಂಬಿದ್ದ ಬಕೆಟ್‍ನಲ್ಲಿ ಮುಳುಗಿ ► 1 ವರ್ಷದ ಮಗು ಮೃತ್ಯು

 (ನ್ಯೂಸ್ ಕಡಬ) newskadaba.com ಕೊಪ್ಪಳ, ಆ .22, ನೀರು ತುಂಬಿದ್ದ ಬಕೆಟ್‍ನಲ್ಲಿ ಮಗು ಬಿದ್ದು ಮೃತಪಟ್ಟಿರೋ ಹೃದಯವಿದ್ರಾವಕ ಘಟನೆ ಗಂಗಾವತಿ ತಾಲೂಕಿನ ಶರಣಬಸವೇಶ್ವರ ಕ್ಯಾಂಪ್ ನಲ್ಲಿ ನಡೆದಿದೆ.

ನಗರದ ಶರಣಬಸವೇಶ್ವರ ಕ್ಯಾಂಪಿನ ನಿವಾಸಿಗಳಾದ ಹಸೀನಾ ಹಾಗೂ ಆಟೋ ಚಾಲಕ ಮೌಲಹುಸೇನ್ ಎಂಬುವರ ಒಂದು ವರ್ಷದ ರೀಯಾನ್ ಮೃತ ಮಗು. ಮನೆಯವರೆಲ್ಲಾ ಹೊರಗೆ ಕುಳಿತ ಸಂದರ್ಭದಲ್ಲಿ ಮಗು ಆಟವಾಡುತ್ತಾ ಮನೆಯೊಳಗೆ ಹೋಗಿತ್ತು. ಆಟ ಆಡುತ್ತಿರಬಹುದು ಎಂದು ಪಾಲಕರು ಸುಮ್ಮನಿದ್ದಾರೆ. ಆದರೆ ತುಂಬ ಹೊತ್ತಾದರೂ ಮಗು ಬಾರದ್ದರಿಂದ ಅನುಮಾನಗೊಂಡ ತಾಯಿ ಮನೆಯೊಳಗೆ ಹೋಗಿ ನೋಡಿದಾಗ ಮಗು ಬಕೆಟ್‌ನಲ್ಲಿ ತಲೆ ಕೆಳಗೆ ಮಾಡಿ ಬಿದ್ದಿರುವುದು ಕಂಡು ಬಂದಿದೆ. ತಕ್ಷಣ ಮಗುವನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದ್ರೆ ಅಷ್ಟೊತ್ತಿಗೆ ಮಗು ಮೃತಪಟ್ಟಿದೆ. ಮಗುವಿನ ಸಾವಿನಿಂದ ಮನೆಯವರ ಆಕ್ರಂದನ ಮುಗಿಲುಮುಟ್ಟಿದೆ. ಈ ಸಂಬಂಧ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಡಿಕೆಶಿ ಬಂಧನ ಖಂಡಿಸಿ ಕಡಬ ತಾಲೂಕು ಒಕ್ಕಲಿಗ ಸಮುದಾಯ ಮತ್ತು ಜಾತ್ಯಾತೀತ ಅಭಿಮಾನಿ ಬಳಗದಿಂದ ಪ್ರತಿಭಟನೆ

 

error: Content is protected !!
Scroll to Top