ಗೃಹರಕ್ಷಕರ ಪಶ್ವಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭ

(ನ್ಯೂಸ್ ಕಡಬ) newskadaba.com, ಮಂಗಳೂರು , ಡಿ.4  2019-20ನೇ ಸಾಲಿನ ಗೃಹರಕ್ಷಕರ ಪಶ್ವಿಮ ವಲಯ ಮಟ್ಟದ ವೃತ್ತಿಪರ ಕ್ರೀಡಾಕೂಟವು ಪೊಲೀಸ್ ಪೆರೇಡ್ ಮೈದಾನದಲ್ಲಿ ದಿನಾಂಕ 01-12-2019 ರಿಂದ 03-12-2019 ವರೆಗೆ ನಡೆದಿದ್ದು, ಕ್ರೀಡಾಕೂಟದ ಸಮಾರೋಪ ಸಮಾರಂಭವು ನಿನ್ನೆ ಸಂಜೆ 4.00 ಗಂಟೆಗೆ ಪೊಲೀಸ್ ಪೆರೇಡ್ ಮೈದಾನದಲ್ಲಿ ನಡೆಯಿತು. ತುಕಡಿ ನಾಯಕರಾದ ಶ್ರೀ ವಸಂತ್ ಕುಮಾರ್ ಇವರ ನೇತೃತ್ವದಲ್ಲಿ ಅತಿಥಿಗಳಿಗೆ ಗೌರವ ವಂದನೆಯನ್ನು ನೀಡಲಾಯಿತು. ಕ್ರೀಡಾಕೂಟದ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಸನ್ಮಾನ್ಯ ಡಾ|| ಹರ್ಷ ಪಿ.ಎಸ್., ಐ.ಪಿ.ಎಸ್., ಪೊಲೀಸ್ ಆಯುಕ್ತರು, ಮಂಗಳೂರು ನಗರ ಇವರು ಮಾತನಾಡಿ ನಮ್ಮ ದೇಶದಲ್ಲಿ ಗೃಹ ಇಲಾಖೆ ಮತ್ತು ಪೊಲೀಸ್ ಇಲಾಖೆಗೆ ಅವಿನಾಭಾವ ಸಂಬಂಧವಿದೆ. ಪೊಲೀಸ್ ಇಲಾಖೆ ಬೇರೆ ಅಲ್ಲ, ಗೃಹರಕ್ಷಕ ಇಲಾಖೆ ಬೇರೆ ಅಲ್ಲ ಎಂದರು. ಪೊಲೀಸ್ ಇಲಾಖೆಯಲ್ಲಿ ಸಾಕಷ್ಟು ಹುದ್ದೆ ಖಾಲಿ ಇದ್ದು, ಹುದ್ದೆ ಭರ್ತಿಯಾಗುವವರೆಗೆ ಅತ್ಯಂತ ಸಮಗ್ರವಾಗಿ ಹೆಗಲು ಕೊಟ್ಟು ಟ್ರಾಫಿಕ್‍ನಲ್ಲಿ ಮತ್ತು ಠಾಣೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಸರ್ಕಾರಿ ಸೇವೆ ಮಾಡುವ ಕಾಲ್‍ಸೆಂಟರ್ ಅವಕಾಶಗಳಿದ್ದು, ಗೃಹರಕ್ಷಕರು ಅದರ ಬೇರೆ ಬೇರೆ ಕೋರ್ಸ್‍ಗಳಲ್ಲಿ ತರಬೇತಿಯನ್ನು ಪಡೆದು ಸರ್ಕಾರಿ ಸೇವೆ ಸಲ್ಲಿಸಲು ಪೊಲೀಸ್ ಇಲಾಖೆಯಿಂದ ಎಲ್ಲಾ ರೀತಿಯ ಸಹಕಾರವನ್ನು ನಾವು ನೀಡುತ್ತೇವೆ ಎಂದರು ಹಾಗೂ ನಾಲ್ಕು ಜಿಲ್ಲೆಯ ಗೃಹರಕ್ಷಕ ದಳದ ಕ್ರೀಡಾ ಪಟುಗಳಿಗೆ ಅಭಿನಂದನೆಯನ್ನು ಸಲ್ಲಿಸಿದರು.

ಕ್ರೀಡಾಕೂಟದ ಅಧ್ಯಕ್ಷತೆಯನ್ನು ವಹಿಸಿದಂತಹ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಠರಾದ ಡಾ|| ಮುರಲೀ ಮೋಹನ ಚೂಂತಾರು ಇವರು ಮಾತನಾಡಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಗೃಹರಕ್ಷಕರು ಕ್ರೀಡಾಕೂಟದಲ್ಲಿ ಭಾಗವಹಿಸಿದಕ್ಕೆ ಅಭಿನಂದನೆಯನ್ನು ಸಲ್ಲಿಸಿದರು. ವೈಯಕ್ತಿಕ ಚಾಂಪಿಯನ್‍ಶಿಪ್ ಗೆದ್ದ ಉತ್ತರ ಕನ್ನಡ ಜಿಲ್ಲೆಯ ರಾಜೇಶ್ ಅಂಬಿಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ದೀಕ್ಷಾ ರವರಿಗೆ ಹಾಗೂ ಉತ್ತಮ ಟೀಮ್ ತಂಡ ಉತ್ತರ ಕನ್ನಡ ಜಿಲ್ಲೆಯವರಿಗೆ ಅಭಿನಂದನೆಯನ್ನು ಸಲ್ಲಿಸಿದರು. ಸೋತವರು ಮತ್ತೆ ಆಟ ಆಡಿ ಗೆದ್ದವರು ಕ್ರೀಡಾ ಸ್ಪೂರ್ತಿಯಿಂದ ಕ್ರೀಡಾಕೂಟದಲ್ಲಿ ಆಟ ಆಡಿ ಕ್ರೀಡಾ ಸ್ಪೂರ್ತಿಯನ್ನು ಗೆಲ್ಲಿಸಿ ಎಂದು ಮಗದೊಮ್ಮೆ ಹೇಳಿದರು. ಹೊಸತೊಂದು ಚಿಂತನೆಯನ್ನು ಹೊಸತನಕ್ಕೆ ಕೈಹಾಕಿದ ಪೊಲೀಸ್ ಆಯುಕ್ತರಾದ ಡಾ|| ಹರ್ಷ ಅವರಿಗೆ ನಾನು ಅಭಿನಂದಿಸುತ್ತೇನೆ ಎಂದರು. ನಿಷ್ಕಾಮ ಸೇವೆ ಸಲ್ಲಿಸುತ್ತಿರುವ ಗೃಹರಕ್ಷಕರ ಎಲ್ಲಾ ಆಸೆಗಳು ಮತ್ತು ನಿಮ್ಮ ಎಲ್ಲಾ ಬೇಡಿಕೆಗಳು ಸರ್ಕಾರದಿಂದ ಪೂರೈಸಲಿ ಎಂದು ಹಾರೈಸಿದರು. ಗೃಹರಕ್ಷಕರು ಎಲ್ಲದರಲ್ಲೂ ಭಾಗವಹಿಸಿ ಎಂದು ಮತ್ತೊಮ್ಮೆ ಅಭಿನಂದನೆಯನ್ನು ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಶ್ರೀ ರಮೇಶ್ ಡೆಪ್ಯೂಟಿ ಕಮಾಂಡೆಂಟ್, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಇವರು ಸ್ವಾಗತಿಸಿದರು. ಶ್ರೀ ಜಯಾನಂದ, ಬೆಳ್ತಂಗಡಿ ಪ್ರಭಾರ ಘಟಕಾಧಿಕಾರಿ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು. ಶ್ರೀ ಮಾರ್ಕ್‍ಶೇರ್, ಘಟಕಾಧಿಕಾರಿ, ಮಂಗಳೂರು ಘಟಕ ಇವರು ವಂದನಾರ್ಪಣೆ ಮಾಡಿದರು. ದಕ್ಷಿಣ ಕನ್ನಡ ಜಿಲ್ಲಾ ಕಛೇರಿ ಅಧೀಕ್ಷಕರಾದ ರತ್ನಾಕರ್, ಪ್ರಥಮ ದರ್ಜೆ ಸಹಾಯಕಿ ಶ್ರೀಮತಿ ಅನಿತಾ ಟಿ.ಎಸ್., ಮಾರ್ಕ್‍ಶೇರ್, ಘಟಕಾಧಿಕಾರಿ ಹಾಗೂ ನಾಲ್ಕು ಜಿಲ್ಲೆಯ ಗೃಹರಕ್ಷಕ ಮತ್ತು ಗೃಹರಕ್ಷಕಿಯರುಗಳು ಉಪಸ್ಥಿತರಿದ್ದರು.

error: Content is protected !!

Join the Group

Join WhatsApp Group