ತುಳು ಅಕಾಡೆಮಿ ವತಿಯಿಂದ ಮಾಸಾಶನಕ್ಕೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.3   ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಅನುಷ್ಠಾನಗೊಂಡು ಕಲಾವಿದರಿಗೆ ಮಾಸಾಶನ ಯೋಜನೆಗೆ ಅರ್ಜಿ ಆಹ್ವಾನಿಸಲಾಗಿದ್ದು, ತುಳು ಸಾಹಿತ್ಯ, ಜಾನಪದ, ದೈವಾರಾಧನೆ, ಪಾಡ್ದನ, ಮುಂತಾದ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ 60 ವರ್ಷ ವಯಸ್ಸು ದಾಟಿದ ಕಲಾವಿದರು ಮಾಸಾಶನ ಅರ್ಜಿ ಸಲ್ಲಿಸಬಹುದು.

ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ತಮ್ಮ ಕಲಾಸೇವೆಯ ವಿವರ, ಭಾವಚಿತ್ರ, ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಪ್ರತಿ, ಶಾಲಾ ವರ್ಗಾವಣೆ ಪ್ರತಿ, ಇವುಗಳ ದಾಖಲೆ ವಿವರಗಳನ್ನು ಅಧ್ಯಕ್ಷರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ತುಳುಭವನ, ಉರ್ವಸ್ಟೋರ್, ಮಂಗಳೂರು-575006 ಈ ವಿಳಾಸಕ್ಕೆ ಬಂದು ಅರ್ಜಿಯನ್ನು ಸ್ವೀಕರಿಸಬೇಕು ಎಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರ ಪ್ರಕಟಣೆ ತಿಳಿಸಿದೆ.

Also Read  ಸುರತ್ಕಲ್: ಮೊಬೈಲ್ ಬಳಸಬೇಡ ಎಂದಿದ್ದಕ್ಕೆ ಆತ್ಯಹತ್ಯೆಗೆ ಶರಣಾದ ಬಾಲಕಿ.!

error: Content is protected !!
Scroll to Top