“ಅನಾಥ ಮಕ್ಕಳ ರಹಿತ ಭಾರತ ನಮ್ಮದಾಗಬೇಕು”

(ನ್ಯೂಸ್ ಕಡಬ) newskadaba.com, ಮಂಗಳೂರು, ಡಿ.2  ಇತ್ತೀಚೆಗೆ ಸೌಜನ್ಯ ಮಹಿಳಾ ಮಂಡಲ(ರಿ) ಹೊೈಗೆಬೈಲ್ ಇವರು “ಇನ್ನರ್ ವೀಲ್ ಕ್ಲಬ್ ಮಂಗಳೂರು ಉತ್ತರ” ಇವರೊಂದಿಗೆ ಜಂಟಿಯಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಇನ್ನರ್ ವೀಲ್ ಕ್ಲಬ್‍ನ ಮಾಜಿ ಅಧ್ಯಕ್ಷೆ ಹಾಗೂ ಮಿಶನ್ ಮಮತಾದ ಸಂಯೋಜಕಿ ರಮಾಮಣಿ ಭಟ್ ಇವರು ಸೌಜನ್ಯದ ಸದಸ್ಯೆಯರನ್ನು ಉದ್ದೇಶಿಸಿ ಮಾತನಾಡುತ್ತಾ “ಅನಾಥ ಮಕ್ಕಳ ರಹಿತ ಭಾರತ ನಮ್ಮದಾಗಬೇಕು.” ಮಿಶನ್ ಮಮತಾ ಯೋಜನೆಯ ಮೂಲಕ ಸರಕಾರದ ಸಹಕಾರದೊಂದಿಗೆ ಈ ಕೆಲಸವನ್ನು ಆರಂಭಿಸಲಿದ್ದೇವೆ, ಈಗಾಗಲೇ ಅದಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಂಡು ನಾವು ಮುಂದುವರಿಯುತ್ತಿದ್ದೇವೆ ಹಾಗೂ ಎಲ್ಲರ ಸಹಯೋಗದೊಂದಿಗೆ ಇದನ್ನು ಯಶಸ್ವಿಗೊಳಿಸಬೇಕು” ಎಂದರು.

Also Read  ಹಿಜಾಬ್ ಪ್ರಕರಣದ ತೀರ್ಪಿನ ಹಿನ್ನೆಲೆ ➤ ದ.ಕ, ಉಡುಪಿ ಜಿಲ್ಲಾದ್ಯಂತ ನಾಳೆ ಶಾಲಾ-ಕಾಲೇಜುಗಳಿಗೆ ರಜೆ...!!


ನೂತನವಾಗಿ ನಗರ ಪಾಲಿಕಾ ಸದಸ್ಯರಾಗಿ ಆಯ್ಕೆಯಾದ ಶ್ರೀ ಗಣೇಶ್ ಕುಲಾಲ್ ಹಾಗೂ ಶ್ರೀಮತಿ ಜಯಲಕ್ಷ್ಮಿ ವಿ ಶೆಟ್ಟಿ ಉಪಸ್ಥಿತರಿದ್ದರು. “ಇನ್ನರ್ ವೀಲ್ ಕ್ಲಬ್ ಉತ್ತರ ಇದರ ಅಧ್ಯಕ್ಷೆಯಾದ ಆಶಾ ನಾಯಕ್ ಇವರು ದೀಪ ಬೆಳಗಿ ಕಾರ್ಯಕ್ರಮವನ್ನು ಉದ್ಘಾಟಿಸಿ, ಸೌಜನ್ಯ ಮಹಿಳಾ ಮಂಡಲದ ಅಧ್ಯಕ್ಷೆಯಾದ ಶ್ರೀಮತಿ ಹೇಮಲತಾ ಸ್ವಾಗತಿಸಿದರು. ಸೌಜನ್ಯದ ಗೌರವಾಧ್ಯಕ್ಷೆ ರೋಹಿಣಿ ಕೆ.ಎ ಪ್ರಾಸ್ತಾವಿಕ ಮಾತುಗಳನ್ನು ಆಡಿ, ಕೋಶಾಧಿಕಾರಿ ಪ್ರತಿಭಾ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ರಾಜೇಶ್ವರಿ ವಂದಿಸಿ, ಸಾಂಸ್ಕೃತಿಕ ಕಾರ್ಯದರ್ಶಿ ರತ್ನಾವತಿ ಜೆ. ಬೈಕಾಡಿ ನಿರೂಪಿಸಿದರು.

error: Content is protected !!
Scroll to Top