ಕಳವಾದ ಗೂಡ್ಸ್ ವಾಹನ

 (ನ್ಯೂಸ್ ಕಡಬ) newskadaba.com ಪುತ್ತೂರು, ನ.21  ಖಾಸಗಿ ಬಸ್ ನಿಲ್ದಾಣದ ಎದುರು ರಸ್ತೆಯ ಬದಿ ಗೂಡ್ಸ್ ವಾಹನ ನಿಲ್ಲಿಸಿ ಊಟ ಮುಗಿಸಿ ವಾಪಾಸು ವಾಹನ ನಿಲ್ಲಿಸಿದ್ದ ಜಾಗಕ್ಕೆ ಬಂದು ನೋಡುವಾಗ ವಾಹನವು ಆ ಜಾಗದಲ್ಲಿ ಇರಲಿಲ್ಲ, ಬಳಿಕ ಆಸುಪಾಸಿನಲ್ಲಿ ಹುಡುಕಾಡಿದರೂ ವಾಹನವು ಪತ್ತೆಯಾಗದ ಘಟನೆ ಬುಧವಾರದಂದು ಪುತ್ತೂರು ತಾಲೂಕು ಕಸ್ಬಾ ಗ್ರಾಮದ ನೆಲ್ಲಿಕಟ್ಟೆಯಲ್ಲಿ ನಡೆದಿದೆ.

ಹಾಲಯ್ಯ ಕೆ.ಟಿ ಅವರು ಮಂಜುನಾಥ ರೋಡ್ ಲೈನ್ಸ್ ಸಂಸ್ಥೆಯ ಗೂಡ್ಸ್ ಸಾಮಾಗ್ರಿಗಳನ್ನು ಪುತ್ತೂರಿನಲ್ಲಿ ಡೋರ್ ಡೆಲಿವರಿ ಮಾಡುವ ವ್ಯವಹಾರ ನಡೆಸುತ್ತಿದ್ದು, ಸಾಮಾಗ್ರಿಗಳನ್ನು ಸಾಗಾಟ ಮಾಡಲು ಅಶೋಕ ಲೈಲ್ಯಾಂಡ್ ದೋಸ್ತ್ ಗೂಡ್ಸ್ ವಾಹನವನ್ನು ಹೊಂದಿರುತ್ತಾರೆ. ದಿನಾಂಕ 20-11-2019 ರಂದು ವಾಹನ ನಿಲ್ಲಿಸಿ, ಊಟ ಮುಗಿಸಿ ವಾಪಾಸು ಬಂದು ನೋಡಿದಾಗ ವಾಹನವು ಪತ್ತೆಯಾಗದ್ದು ತಿಳಿದು ಬಂದಿದೆ. ಕಳವಾದ ಗೂಡ್ಸ್ ವಾಹನದ ಅಂದಾಜು ಮೌಲ್ಯ ರೂಪಾಯಿ 4,30,,000/ ಆಗಬಹುದು ಎಂದು ಪುತ್ತೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Also Read  ಸುಬ್ರಹ್ಮಣ್ಯ ಉಪವಲಯಾಧಿಕಾರಿಯಾಗಿ ರವಿಚಂದ್ರ ಪಡುಬೆಟ್ಟು ಭಡ್ತಿ

error: Content is protected !!
Scroll to Top