(ನ್ಯೂಸ್ ಕಡಬ) newskadaba.com ನೆಲ್ಯಾಡಿ, ನ.14 ಸಾರ್ವಜನಿಕ ಶಿಕ್ಷಣ ಇಲಾಖೆ ಕರ್ನಾಟಕ ಸರಕಾರ ವತಿಯಿಂದ ಮಂಡ್ಯ ಜಿಲ್ಲೆಯ ನಾಗಮಂಡಲ ತಾಲೂಕಿನ ಆದಿಚುಂಚನಗಿರಿ ಕ್ರೀಡಾಂಗಣದಲ್ಲಿ ನವಂಬರ್ 11ರಿಂದ 14ರವರೆಗೆ ಜರುಗಿದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಕ್ರಿಡಾ ಕೂಟದಲ್ಲಿ, ಪ್ರಾಥಮಿಕ ಶಾಲಾ 14 ರ ವಯೋಮಿತಿಯ ಬಾಲಕರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಜ್ಞಾನೋದಯ ಬೆಥನಿ ಪದವಿ ಪೂರ್ವ ಕಾಲೇಜಿನ 8ನೇ ತರಗತಿ ವಿದ್ಯಾರ್ಥಿ ಆದರ್ಶ್ ಶೆಟ್ಟಿ ಇವರು ಪ್ರಥಮ ಸ್ಥಾನ ಪಡೆದು ಡಿಸಂಬರ್ 4ರಿಂದ 10ರವರೆಗೆ ಪಂಜಾಬಿನ ಸಂಗರೂರಿನಲ್ಲ್ಲಿ ನಡೆಯುವ 65ನೇಯ ರಾಷ್ಟ್ರ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುತ್ತಾರೆ.
ಈ ಸಂದರ್ಭದಲ್ಲಿ 17 ರ ವಯೋಮಾನದ ಬಾಲಕಿಯರ ವಿಭಾಗದ ಚಕ್ರ ಎಸೆತ ಸ್ಪರ್ಧೆಯಲ್ಲಿ ಇದೇ ಸಂಸ್ಥೆಯ ಮೇಘ ಮತ್ತಾಯಿ ಸಹ ಭಾಗವಹಿಸಿರುತ್ತಾರೆ. ಇವರಿಗೆ ಸಂಸ್ಥೆಯ ಸಂಚಾಲಕರಾದ ರೆ| ಫಾ| ಡಾ| ವರ್ಗೀಸ್ ಕೈಪನಡುಕ್ಕ ಒಐಸಿ, ಪ್ರಾಂಶುಪಾಲರಾದ ರೆ|ಫಾ| ಮ್ಯಾಥ್ಯೂ ಪ್ರಫುಲ್ ಒ.ಐ.ಸಿ, ಖಜಾಂಜಿ ರೆ|ಫಾ ಐಸಕ್ ಸಾಮ್ ಒಐಸಿ,ಯವರು ಅಭಿನಂದನೆಗಳನ್ನು ತಿಳಿಸಿರುತ್ತಾರೆ. ದೈಹಿಕ ಶಿಕ್ಷಕರಾದ ಮನೋಜ್ , ಸುದರ್ಶನ್, ಮತ್ತು ಶ್ರೀಮತಿ ಅಲ್ಪೋನ್ಸಾರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.