ಬೆಳ್ಳಾರೆ :ಚೊಕ್ಕಾಡಿ ದಾರಿಗೆ ಹಾದು ಹೋಗುವ ಗೌರಿ ಹೊಳೆ ಸಂಕ ಮುರಿದು ಬೀಳುವ ಸ್ಥಿತಿಯಲ್ಲಿದೆ , ಅಪಾಯದ ಮುಂಚೆ ಎಚ್ಚೆತ್ತು ಕೊಳ್ಳಬೇಕಿದೆ ;ಶೀಘ್ರ ದುರಸ್ಥಿ ಗೆ ಸಾರ್ವಜನಿಕ ರ ಆಗ್ರಹ

ಬೆಳ್ಳಾರೆ ( ನ್ಯೂಸ್ ಕಡಬ ನ:05) : ಬೆಳ್ಳಾರೆ ಗ್ರಾಮ ಕ್ಕೆ ಒಳಪಟ್ಟ ಗೌರಿಹೊಳೆ ಸಂಕ.ಇಲ್ಲಿ ಸಮಸ್ಯೆ ಯೊಂದು ಎದ್ದು ಕಾಣುತ್ತಿದೆ .ಖಾಸಗಿ ಶಾಲೆಯೊಂದರ ಸಮೀಪದಿಂದ ಹಾದು ಹೋದ ದಾರಿ ಸಮೀಪದಲ್ಲಿ ಗೌರಿಹೊಳೆ ಸಂಕವು ಅಲ್ಪಸ್ವಲ್ಪ ಮುರಿದು ಬಿದ್ದಿದ್ದು ,ದೊಡ್ಡ ಅಪಾಯ ಸಂಭವಿಸುವುದಕ್ಕಿಂತ ಮುಂಚೆ ಎಚ್ಚೆತ್ತು ಕೊಳ್ಳಬೇಕಾಗಿದೆ .
ಈ ರಸ್ತೆಯು ಶೇಣಿ ,ಚೊಕ್ಕಾಡಿಗೆ ಸೇರುತ್ತದೆ ,ಈ ರಸ್ತೆಯಿಂದ ದಿನ ನಿತ್ಯ ಸುಮಾರು ನೂರಕ್ಕಿಂತಲೂ  ಸಾರ್ವಜನಿಕ ರು ಅಲ್ಲದೆ ಶಾಲಾ -ಕಾಲೇಜುಗಳಿಗೆ ಸಂಚರಿಸುವ ವಿದ್ಯಾರ್ಥಿಗಳು ಈ ದಾರಿಯಿಂದ ಸಾಗಿ ಬರಬೇಕಾಗಿದೆ ಅಲ್ಲದೆ ಇದೇ ರಸ್ತೆಯ ಮೂಲಕ ಲಘು ವಾಹನ ಘನ ವಾಹನವು ಕೂಡ ಸಂಚರಿಸುತ್ತವೆ.
ಬಿರುಕು ಈಗಾಗಲೇ ಬಿಟ್ಟಿದ್ದು ಸಾರ್ವಜನಿಕ ರು ಸಮಸ್ಯೆ ಎದುರಿಸಬೇಕಾದ ಪರಿಸ್ಥಿತಿ ಗೆ ಬಂದು ನಿಂತು ಬಿಟ್ಟಿದೆ.ವಾಹನಗಳು ಓಡಾಟ ನಡೆಸುವಾಗ ಸಮಸ್ಯೆ ಎದುರಿಸಬೇಕಾಗದ ಸಂದಿಗ್ನ ಪರಿಸ್ಥಿತಿ ಎದುರು ಕಾಣುತ್ತಿದೆ,ಏಕೆಂದರೆ ಬಿರುಕು ಬಿಟ್ಟಿದ್ದರಿಂದ ಸಮಸ್ಯೆ ಗೆ ಸ್ವಾಗತಿಸಿ ಕರೆಯುತ್ತಿದೆ.
ಈ ಸಂಕವು ಪೂರ್ತಿಯಾಗಿ ಬಿರುಕು ಬಿಟ್ಟರೆ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆಯಿದ್ದು ಜನರು ಸಂಕಷ್ಟ ಕ್ಕೆ ಒಳಗಾಗುವ ಸಾಧ್ಯತೆಯೂ ಇದೆ.
ಆದುದರಿಂದ ಈ ಸಮಸ್ಯೆ ಗೆ ಸಂಬಂಧ ಪಟ್ಟ ಅಧಿಕಾರಿ ವರ್ಗದವರು ಶೀಘ್ರ ವಾಗಿ ಸ್ಪಂದನೆ ನೀಡಿ ,ಅನಾಹುತ ಸಂಭವಿಸುವುದಕ್ಕಿಂತ ಮೊದಲು ಶೀಘ್ರವಾಗಿ ದುರಸ್ಥಿ ಕಾರ್ಯ ನಡೆಸಲಿ ಎಂದು ಸ್ಥಳೀಯರ ಆಗ್ರಹವಾಗಿದೆ .
error: Content is protected !!
Scroll to Top