ಇಂದು ವಿಜಯ್ ಹಜಾರೆ ಫೈನಲ್ ಟ್ರೋಫಿ ➤ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಸೆಣಸಾಟ

(ನ್ಯೂಸ್ ಕಡಬ) newskadaba.com ಬೆಂಗಳೂರು , .25. ದಕ್ಷಿಣ ಭಾರತದ ಬಲಿಷ್ಠ ಕ್ರಿಕೆಟ್ ತಂಡಗಳಾದ ಕರ್ನಾಟಕ ಹಾಗೂ ತಮಿಳುನಾಡು ದೇಶೀಯ ಏಕದಿನ ಟೂರ್ನಿ ವಿಜಯ್ ಹಜಾರೆ ಟ್ರೋಫಿಯ ಫೈನಲ್ ಪಂದ್ಯದಲ್ಲಿ ಇಂದು ಎದುರಾಗಲಿವೆ. . ಎರಡೂ ತಂಡಗಳಲ್ಲೂ ಸ್ಟಾರ್ ಆಟಗಾರರಿರುವುದರಿಂದ ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿರುವ ‘ಸೌತ್ ಇಂಡಿಯನ್ ಡರ್ಬಿ’ ಕುತೂಹಲ ಮೂಡಿಸಿದೆ. . ಮೇಲ್ನೋಟಕ್ಕೆ ಎರಡೂ ತಂಡಗಳು ಸಮತೋಲನದಿಂದ ಕೂಡಿವೆ. ಜತೆಗೆ ಸ್ಟಾರ್ ಆಟಗಾರರೇ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದ ಅಭಿಮಾನಿಗಳ ಕುತೂಹಲ ಇಮ್ಮಡಿಯಾಗಿದೆ.


ಸಂಘಟಿತ ಹೋರಾಟವೇ ರಾಜ್ಯದ ಬಲ, ಟೂರ್ನಿಯುದ್ದಕ್ಕೂ ಆಲ್ರೌಂಡ್ ನಿರ್ವಹಣೆಯೊಂದಿಗೆ ಪ್ರಶಸ್ತಿ ಸುತ್ತಿಗೇರಿರುವ ಆತಿಥೇಯ ಕರ್ನಾಟಕ ತಂಡಕ್ಕೆ ಆತ್ಮವಿಶ್ವಾಸಕ್ಕಂತೂ ಕೊರತೆಯಿಲ್ಲ. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಭರ್ಜರಿ ನಿರ್ವಹಣೆ ತೋರಿದ್ದ ಮಯಾಂಕ್ ಅಗರ್ವಾಲ್, ಟೂರ್ನಿಯಲ್ಲಿ ರನ್ಹೊಳೆಯನ್ನೇ ಹರಿಸುತ್ತಿರುವ ದೇವದತ್ ಪಡಿಕಲ್, ಮನೀಷ್ ಪಾಂಡೆ, ಕೆಎಲ್ ರಾಹುಲ್, ಹಾಗೂ ಕರುಣ್ ನಾಯರ್ರಂಥ ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿದೆ. ಬೌಲಿಂಗ್ ವಿಭಾಗ ಕೂಡ ಸಮರ್ಥ ನಿರ್ವಹಣೆಯೊಂದಿಗೆ ಬ್ಯಾಟ್ಸ್ಮನ್ಗಳಿಗೆ ಅಗತ್ಯ ಸಾಥ್ ನೀಡುತ್ತಿರುವುದು ತಂಡದ ಪ್ಲಸ್ ಪಾಯಿಂಟ್. ವೇಗಿ ಪ್ರಸಿದ್ಧ ಕೃಷ್ಣ ಅನುಪಸ್ಥಿತಿಯಲ್ಲಿ ವಿ.ಕೌಶಿಕ್ ಮಿಂಚಿನ ನಿರ್ವಹಣೆ ತೋರುತ್ತಿದ್ದಾರೆ. ಇವರಿಗೆ ಅನುಭವಿ ಮಿಥುನ್ ಉತ್ತಮ ಸಾಥ್ ನೀಡುತ್ತಿದ್ದಾರೆ. ಸ್ಪಿನ್ನರ್ಗಳಾದ ಕೆ.ಗೌತಮ್ ಪ್ರವೀಣ್ ದುಬೆ ಸಿಕ್ಕ ಅವಕಾಶಗಳನ್ನು ಸೂಕ್ತವಾಗಿ ಬಳಸಿಕೊಳ್ಳುತ್ತಿದ್ದಾರೆ.

Also Read  ಆತೂರು: ಲೋ ವೋಲ್ಟೇಜ್ ಸಮಸ್ಯೆ ಬಗೆಹರಿಸುವಂತೆ ಎಸ್‌.ಡಿಪಿಐ ಆತೂರು ವಲಯದ ವತಿಯಿಂದ ಮೆಸ್ಕಾಂ ಗೆ ಮನವಿ


ಉಭಯ ತಂಡಗಳು ಇದುವರೆಗೆ ಒಮ್ಮೆಯೂ ಟೂರ್ನಿಯ ಫೈನಲ್ ಪಂದ್ಯ ಸೋತಿಲ್ಲ. ಕರ್ನಾಟಕ 3 ಮತ್ತು ತಮಿಳುನಾಡು 5 ಬಾರಿ ಫೈನಲ್ಗೇರಿದಾಗಲೂ ಪ್ರಶಸ್ತಿ ಜಯಿಸಿದೆ. ಆದರೆ ಈ ಬಾರಿ ಒಂದು ತಂಡದ ಅಜೇಯ ಓಟಕ್ಕೆ ತಡೆ ಬೀಳಲಿದೆ.

error: Content is protected !!
Scroll to Top