ಧಕ್ಕೆ ಉಗ್ರಾಣ : ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.10.ಮಂಗಳೂರು ಬಂದರು – ಉತ್ತರ ದಕ್ಕೆ ಯಲ್ಲಿರುವ ಬಂದರು ಇಲಾಖೆಗೆ ಸೇರಿದ ‘ಬಿ’ ಉಗ್ರಾಣದ ಉತ್ತರ ಭಾಗದ 63 ಚ.ಮೀ ವಿಸ್ತೀರ್ಣದ ಕಟ್ಟಡವನ್ನು ಸಾಗರೋತ್ಪನ್ನ ಹಾಗೂ ಇನ್ನಿತರ ದಾಸ್ತಾನು ಬಳಸಲು  ಟೆಂಡರ್ ಆಹ್ವಾನಿಸಲಾಗಿದೆ.

ಆದ್ದರಿಂದ 1 ವರ್ಷ ಅವಧಿಗೆ ರೂ 6500+18% ಜಿಎಸ್‍ಟಿ ತಿಂಗಳ ದರ ನಿಗಧಿ ಪಡಿಸಿ ಒಂದು ವರ್ಷದ ಅವಧಿಗೆ ಕರಾರಿನ ಮೇಲೆ ಗುತ್ತಿಗೆ ಆಧಾರದಲ್ಲಿ ಮೊಹರಾದ ಟೆಂಡರನ್ನು ಕರೆಯಲಾಗಿದೆ.ಮೊಹರು ಮಾಡಿದ ಟೆಂಡರ್ ಲಕೋಟೆಯ ಮೇಲೆ ‘ಮಂಗಳೂರು ಬಂದರು ಉತ್ತರ ದಕ್ಕೆ ಯಲ್ಲಿರುವ ಬಂದರು ಇಲಾಖೆಗೆ ಸೇರಿದ ‘ಬಿ’ ಉಗ್ರಾಣದ ಉತ್ತರ ಭಾಗದ 63 ಚ.ಮೀ ವಿಸ್ತೀರ್ಣಕ್ಕೆ ಟೆಂಡರು’ ಎಂದು ನಮೂದಿಸಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ, ಬಂದರು ಅಧಿಕಾರಿಯವರ ಕಚೇರಿ, ಹಳೇ ಬಂದರು, ಮಂಗಳೂರು- 575001 ಈ ವಿಳಾಸಕ್ಕೆ ಬರೆದು ಸಲ್ಲಿಸಬೇಕು. ಟೆಂಡರು ಸ್ವೀಕರಿಸುವ ಕೊನೆಯ ದಿನ ಅಕ್ಟೋಬರ್ 14 ರಂದು ಸಂಜೆ 4 ಗಂಟೆ. ಸ್ವೀಕೃತವಾದ ಟೆಂಡರನ್ನು ಅದೇ ದಿನ ಉಪಸ್ಥಿತರಿದ್ದ ಟೆಂಡರುದಾರರ ಸಮ್ಮುಖದಲ್ಲಿ ಸಂಜೆ 4.30 ಗಂಟೆಗೆ ತೆರೆಯಲಾಗುವುದು ಎಂದು ಬಂದರು ಅಧಿಕಾರಿ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಜಾಲ್ಸೂರು ಪಯನೀರ್ ಪಬ್ಲಿಕ್ ಸ್ಕೂಲ್‌ನಲ್ಲಿ 'ವಿಶ್ವ ಪರಿಸರ ದಿನಾಚರಣೆ'

error: Content is protected !!
Scroll to Top