ಸಮಾಲೋಚಕರ ಹುದ್ದೆಗೆ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು,ಅಕ್ಟೋಬರ್.10.ಸ್ವಚ್ಛ ಭಾರತ್ ಮಿಷನ್(ಗ್ರಾ) ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸಲು ಸಮಾಲೋಚಕರ ಹುದ್ದೆಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.


ಖಾಲಿ ಇರುವ ಹುದ್ದೆ: ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣೆ(SLWM) ಜಿಲ್ಲಾ ಸಮಾಲೋಚಕರು, ವಿದ್ಯಾರ್ಹತೆ – ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿಇ-ಎನ್ವಿರಾನ್‍ಮೆಂಟಲ್ ಇಂಜಿನಿಯರಿಂಗ್ ವಿಥ್ ಸ್ಪೆಷಲೈಸೇಷನ್ ಇನ್ ಎನ್ವಿರಾನ್‍ಮೆಂಟಲ್ ಸೈನ್ಸ್, ಕನಿಷ್ಠ 3 ವರ್ಷಗಳ ಅನುಭವ ಇರಬೇಕು. ನೀರು ಮತ್ತು ನೈರ್ಮಲ್ಯ/ ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದವರಿಗೆ ಮೊದಲ ಆದ್ಯತೆ (ವಯೋಮಿತಿ ಗರಿಷ್ಠ 38 ವರ್ಷ) ನೀಡಲಾಗುತ್ತದೆ. ಮಾಸಿಕ ಸಮಾಲೋಚನಾ ಶುಲ್ಕ 22,000/-.

Also Read  ಪೆರುವಾಜೆ - ಬೆಳಂದೂರು ರಸ್ತೆಗೆ ಸಂಸದ ನಳಿನ್ ಕುಮಾರ್ ರಿಂದ ಗುದ್ದಲಿಪೂಜೆ


ಈ ನೇಮಕಾತಿಯನ್ನು ರದ್ದುಗೊಳಿಸುವ/ತಡೆಹಿಡಿಯುವ/ಸೀಮಿತ ನೇಮಕಾತಿಯನ್ನು ಮಾಡಿಕೊಳ್ಳುವ ಅಧಿಕಾರವನ್ನು ಜಿಲ್ಲಾ ಪಂಚಾಯತಿಯ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯವರು ಹೊಂದಿರುತ್ತಾರೆ. ಸದರಿ ಹುದ್ದೆಯ ಅರ್ಜಿಯು ಜಿಲ್ಲಾ ಪಂಚಾಯತ್‍ನ ವೆಬ್ ಸೈಟ್ ( http://zpdk.kar.nic.in ) ನಲ್ಲಿ ಅಪ್‍ಲೋಡ್ ಮಾಡಿಲಾಗಿದೆ.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2451222 ಸಂಪರ್ಕಿಸಬಹುದು. ಅರ್ಜಿಯನ್ನು ಸಂಬಂಧಪಟ್ಟ ದಾಖಲೆಗಳೊಂದಿಗೆ ಸ್ವಯಂ ದೃಢೀಕರಿಸಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಜಿಲ್ಲಾ ನೆರವು ಘಟಕ ಇಲ್ಲಿಗೆ ಅಕ್ಟೋಬರ್ 30 ರೊಳಗೆ ಸಲ್ಲಿಸಬೇಕೆಂದು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದ.ಕ ಜಿಲ್ಲಾ ಪಂಚಾಯತ್ ಮಂಗಳೂರು ಪ್ರಕಟಣೆ ತಿಳಿಸಿದೆ.

error: Content is protected !!
Scroll to Top