ಕಲಾಶ್ರೀ ಆಯ್ಕೆ ಶಿಬಿರದ ಅರ್ಜಿ ಸಲ್ಲಿಕೆ ದಿನ ವಿಸ್ತರಣೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.25. ಬಾಲಭವನ ಸಂಸ್ಥೆಯು 2019 ನೇ ಸಾಲಿನ ತಾಲೂಕು ಮಟ್ಟದ ಮಕ್ಕಳ ಕಲಾ ಉತ್ಸವ ಹಾಗೂ ಕಲಾಶ್ರೀ ಪ್ರಶಸ್ತಿ ಶಿಬಿರ ಹಮ್ಮಿಕೊಂಡಿದ್ದು, ಅರ್ಜಿ ಸಲ್ಲಿಸುವ ದಿನವನ್ನು ಅಕ್ಟೋಬರ್ 16 ರವರೆಗೆ ಮುಂದೂಡಲಾಗಿದೆ.


ಸ್ಪರ್ಧೆ ಅಕ್ಟೋಬರ್ 19 ರಂದು ಮಂಗಳಜ್ಯೋತಿ ಸಮಗ್ರ ಶಾಲೆ, ವಾಮಂಜೂರು ಇಲ್ಲಿ ನಡೆಯಲಿದೆ. ಮಂಗಳೂರು ಗ್ರಾಮಾಂತರ ವ್ಯಾಪ್ತಿಗೆ ಒಳಪಟ್ಟ ಮಕ್ಕಳು ಮಾತ್ರ ಚಟುವಟಿಕೆಯಲ್ಲಿ ಭಾಗವಹಿಸಲು ಅವಕಾಶವಿದೆ ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0824-2263199 ಸಂಪರ್ಕಿಸಬೇಕು ಎಂದು ಮಂಗಳೂರು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಪ್ರಕಟಣೆ ತಿಳಿಸಿದೆ.

Also Read  ಪತಿಗೆ ಖಾರದ ಪುಡಿ ಮಿಶ್ರಿತ ಬಿಸಿ ನೀರು ಎರಚಿದ ಪತ್ನಿ - ಪ್ರಕರಣ ದಾಖಲು

error: Content is protected !!
Scroll to Top