(ನ್ಯೂಸ್ ಕಡಬ) newskadaba.com ಕಡಬ,ಸಪ್ಟೆಂಬರ್.24.ಕೋಡಿಂಬಾಳ ಗ್ರಾಮದ ಪನ್ಯ ಗುರಿಯಡ್ಕ ರಸ್ತೆ ಕಾಂಕ್ರಿಟೀಕರಣಕ್ಕೆ ಎಸ್‍ಸಿ/ಎಸ್‍ಟಿ ಯಲ್ಲಿ 10ಲಕ್ಷ ಅನುದಾನ ನೀಡಲಾಗಿದ್ದು ಸೆ.23 ರಂದು ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನಡೆಸಿ ಚಾಲನೆ ನೀಡಲಾಯಿತು.
ಸ್ಥಳೀಯ ಗ್ರಾ.ಪಂ ಸದಸ್ಯ ಆದಂ ಕುಂಡೋಳಿಯವರು ತೆಂಗಿನ ಕಾಯಿ ಹೊಡೆಯುವ ಮೂಲಕ ಹಾಗೂ ಸ್ಥಳೀಯ ಗ್ರಾ.ಪಂ ಸದಸ್ಸಯೆ ಜಯಲಕ್ಷ್ಮೀ ಗುದ್ದಲಿ ಪೂಜೆ ನೆರವೇರಿಸಿದರು. ಕಡಬ ಜಿ.ಪಂ ಮಾಜಿ ಸದಸ್ಯ ಕೃಷ್ಣ ಶೆಟ್ಟಿಯವರು ಮಾತನಾಡಿ ಈ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿರುವ ಈ ರಸ್ತೆಯು ಹಂತ ಹಂತವಾಗಿ ಕಾಂಕ್ರಿಟೀಕರಣ ಮಾಡಲಾಗಿದ್ದು ಈಗ ಕೆ.ಐ.ಆರ್.ಡಿ.ಸಿ.ಎಲ್‍ನ 10ಲಕ್ಷ ಅನುದಾನದಲ್ಲಿ ಸುಮಾರು 172 ಮೀಟರ್ ಕಾಂಕ್ರಿಟೀಕರಣಗೊಳಿಸಲಾಗುತ್ತಿದ್ದು ಉಳಿದ ರಸ್ತೆಯನ್ನು ಕೂಡಾ ಅತೀ ಶೀಘ್ರದಲ್ಲಿ ಕಾಂಕ್ರಿಟೀಕರಣಕ್ಕೆ ಶಾಸಕರಲ್ಲಿ ವಿನಂತಿಸಿಕೊಳ್ಳಲಾಗುವುದು ಎಂದರಲ್ಲದೆ ಸುಸಜ್ಜಿತವಾಗಿ ರಸ್ತೆ ನಿರ್ಮಿಸುವಲ್ಲಿ ಗುತ್ತಿಗೆದಾರರು ಪ್ರಾಮಾಣಿಕವಾಗಿ ಶ್ರಮಿಸಬೇಕೆಂದು ಸಲಹೆ ನೀಡಿದರು.
ಕಡಬ ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ಸತೀಶ್ ನಾಯಕ್, ಶಕ್ತಿ ಕೇಂದ್ರದ ಮಾಜಿ ಅಧ್ಯಕ್ಷ ವಾಡ್ಯಪ್ಪ ಗೌಡ ಎರ್ಮಾಯಿಲ್, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಎನ್.ಕೆ, ಕೋಡಿಂಬಾಳ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್.ಪಿ, ಮಾಲೇಶ್ವರ ಶ್ರೀ ಮಹಾಬಲೇಶ್ವರ ಸ್ವಾಮಿ ಮತ್ತು ಶ್ರೀ ವೀರಭದ್ರ ಸ್ವಾಮಿ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ವಿಶ್ವೇಶ್ವರ ಭಟ್ ಎಳೆಯೂರು, ಕೆ.ಐ.ಆರ್.ಡಿ.ಸಿ.ಎಲ್ ನ ಗುತ್ತಿಗೆದಾರ ಅಬ್ದುಲ್ ಬಶೀರ್, ಪ್ರಮುಖರಾದ ಈಸುಬು ಪನ್ಯ, ಪದ್ಮಯ ಪೂಜಾರಿ, ಪನ್ಯ ಅಂಗನವಾಗಿ ಕಾರ್ಯಕರ್ತೆ ಜೈನಾಬಿ, ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.