ಝೇನ್ ಹಾಗೂ ಇನ್ನೋವ ಕಾರುಗಳ ನಡುವೆ ಡಿಕ್ಕಿ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಸಪ್ಟೆಂಬರ್.23.ಶ್ರೀಕಾಂತ್  ಎಂಬವರು ತಮ್ಮ ಮನೆಯವರಾದ ಅಣ್ಣ ಶಶಿಕಾಂತ್ , ಅಜ್ಜಿ ಗೌರಮ್ಮ ರವರೊಂದಿಗೆ ಧರ್ಮಸ್ಥಳ ದೇವರ ದರ್ಶನಕ್ಕಾಗಿ ಹೊಗುತ್ತಿದ್ದವೇಳೆ ಈ ಘಟನೆ ನಡೆದಿದೆ.

ಶ್ರೀಕಾಂತ್  ಎಂಬವರು ತಮ್ಮ ಮನೆಯವರೊಂದಿಗೆ  ಝೇನ್ ಕಾರಿನಲ್ಲಿ  ಧರ್ಮಸ್ಥಳ ಕಡೆಗೆ ಬರುತ್ತಾ ಕಡಬ ತಾಲೂಕು ಶಿರಾಡಿ ಗ್ರಾಮದ ಶಿರಾಡಿ ನರ್ಸರಿ ಬಳಿ ತಲುಪಿದಾಗ ಎದುರಿನಿಂದ ಅಂದರೆ ಮಂಗಳೂರು ಕಡೆಯಿಂದ ಬೆಂಗಳೂರು ಕಡೆಗೆ ಬರುತ್ತಿದ್ದ ಇನ್ನೋವ ಕಾರನ್ನು ಅದರ ಚಾಲಕ ಅಜಾಗರೂಕತೆ ಹಾಗೂ ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲ ಬದಿಗೆ ಚಲಾಯಿಸಿ ಶ್ರೀಕಾಂತ್ ಚಲಾಯಿಸುತ್ತದ್ದ ಕಾರಿಗೆ ಢಿಕ್ಕಿ ಹೊಡೆಯಿತು .

Also Read  ಸುಳ್ಯ ವಿಧಾನಸಭಾ ಕ್ಷೇತ್ರ ➤ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಜಯಭೇರಿ

ಪರಿಣಾಮ ಕಾರು ಜಖಂ ಗೊಂಡು ಅದರಲ್ಲಿದ್ದ ಅಣ್ಣ ಶಶಿಕಾಂತ್ ,ಅಜ್ಜಿ ಗೌರಮ್ಮ ಗಾಯಗೊಂಡಿದ್ದಾರೆ. ಇನ್ನೋವಾ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿರುತ್ತದೆ. ನಂತರ ಗಾಯಾಳನ್ನು 108 ಅಂಬ್ಯುಲೆನ್ಸ್ ನಲ್ಲಿ ನೆಲ್ಯಾಡಿ ಆಶ್ವಿನಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು ನಂತರ ಹೆಚ್ಚಿನ ಚಿಕಿತ್ಸೆಗೆ ಗಾಯಾಳುಗಳನ್ನು ಹಾಸನ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

error: Content is protected !!
Scroll to Top