ಪೇಶ್ ಇಮಾಮ್ ಮತ್ತು ಮೌಝನ್ ➤ ವಕ್ಫ್ ಸಮಿತಿಗೆ ದಾಖಲೆ ಸಲ್ಲಿಸಿ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.21.ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಗೌರವಧನ ಪಡೆಯುವ ಮಸೀದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೇಶ್ ಇಮಾಮ್ ಮತ್ತು ಮೌಝನ್ (ಮುಕ್ರಿ)ರವರು ತಮ್ಮ ಮಸೀದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ವರದಿ ನೀಡಲಿದೆ.

ಆದೂದರಿಂದ ತಮ್ಮ ಜಮಾಅತಿನಲ್ಲಿ ಪೇಶ್ ಇಮಾಮ್ ಮತ್ತು ಮೌಝನ್ (ಮುಕ್ರಿ)ಯವರು ಸೆಪ್ಟೆಂಬರ್‍ನಲ್ಲಿ ಕಾರ್ಯನಿರ್ವಹಿಸುವ ಬಗ್ಗೆ ದೃಢೀಕರಣ ಪತ್ರ ಹಾಗೂ ಆಧಾರ್ ಕಾರ್ಡ್ ಝೆರಾಕ್ಸ್ ಪ್ರತಿ, ಬ್ಯಾಂಕ್ ಖಾತೆಯ ಝೆರಾಕ್ಸ್ ಪ್ರತಿ (ಇಂದಿನವರೆಗೆ ಅಪ್‍ಡೇಟ್) ಆಗಿರುವ ಬಗ್ಗೆ ಈ ಮೂರು ದಾಖಲೆಗಳನ್ನು ಜಿಲ್ಲಾ ವಕ್ಫ್ ಕಚೇರಿ, ಮಂಗಳೂರು ಇಲ್ಲಿಗೆ ಸೆಪ್ಟೆಂಬರ್ 25ರೊಳಗೆ ದ್ವಿಪ್ರತಿಯಲ್ಲಿ ಸಲ್ಲಿಸಬೇಕು ಎಂದು ಜಿಲ್ಲಾ ವಕ್ಫ್ ಅಧಿಕಾರಿ, ಜಿಲ್ಲಾ ವಕ್ಫ್ ಕಚೇರಿ, ದ.ಕ. ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ರಾಜ್ಯದಲ್ಲಿ ಮುಂದುವರೆದ ವರುಣನ ಅಬ್ಬರ ➤ ಹೈಅಲರ್ಟ್ ಘೋಷಣೆ..!!

error: Content is protected !!
Scroll to Top