ಕರ್ನಾಟಕ ಗಾಂಧೀ ಸೇವಾ ಪ್ರಶಸ್ತಿ ➤ಅರ್ಜಿ ಹಾಗೂ ನಾಮನಿರ್ದೇಶನಗಳ ಆಹ್ವಾನ

(ನ್ಯೂಸ್ ಕಡಬ) newskadaba.com ಕರ್ನಾಟಕ ,ಸಪ್ಟೆಂಬರ್.17. ಮಹಾತ್ಮ ಗಾಂಧಿ ಆಶಯಗಳನ್ನು ಎಲ್ಲೆಡೆ ಪಸರಿಸುತ್ತಿರುವ ಹಾಗೂ ಪಾಲಿಸುತ್ತಿರುವ ವ್ಯಕ್ತಿ ಹಾಗೂ ಸಂಸ್ಥೆಗಳಿಗೆ ಕೊಡಮಾಡುವ ಐದು ಲಕ್ಷ ನಗದು ಒಳಗೊಂಡ ರಾಜ್ಯ ಸರ್ಕಾರದ ಪ್ರತಿಷ್ಠಿತ ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿಗೆ ಅರ್ಹರು ಮತ್ತು ಆಸಕ್ತರಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಅರ್ಜಿಗಳು ಹಾಗೂ ನಾಮನಿರ್ದೇಶನಗಳನ್ನು ಆಹ್ವಾನಿಸಿದೆ.

ಕರ್ನಾಟಕ ಉಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಭೀಮನಗೌಡ ಸಂಗನಗೌಡ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಆಯ್ಕೆ ಸಮಿತಿಯ ಮೊದಲ ಸಭೆಯಲ್ಲಿ ಅಸ್ಪøಷ್ಯತಾ ನಿವಾರಣೆ, ಅಹಿಂಸೆ, ಮಕ್ಕಳ ಸಬಲೀಕರಣ, ಗ್ರಾಮೀಣ ನೈರ್ಮಲ್ಯ, ಪಾನ ನಿರೋಧ, ಖಾದಿ ಹಾಗೂ ಸ್ವದೇಶಿ ವಸ್ತುಗಳ ಬಳಕೆ ಮತ್ತು ಪ್ರೋತ್ಸಾಹ, ಅನುಸೂಚಿತ ಜಾತಿ ಮತ್ತು ಅನುಸೂಚಿತ ವರ್ಗಗಳಿಗೆ ಸೇರಿದ ಜನರ ಶ್ರೇಯೋಭಿವೃದ್ಧಿ ಕಾರ್ಯ ಚಟುವಟಿಕೆಗಳಲ್ಲಿ ಸ್ವ-ಪ್ರೇರಣೆಯಿಂದ ತೊಡಗಿರುವ 60 ವರ್ಷ ವಯೋಮಾನ ಪೂರ್ಣಗೊಳಿಸಿರುವ ವ್ಯಕ್ತಿಗಳನ್ನು ಹಾಗೂ ಸೇವೆಯಲ್ಲಿ 25 ವರ್ಷ ಪೂರ್ಣಗೊಳಿಸಿರುವ ಸಂಸ್ಥೆಗಳನ್ನು ಈ ಪ್ರಶಸ್ತಿಗೆ ಪರಿಗಣಿಸಲು ತೀರ್ಮಾನಿಸಲಾಗಿದೆ.

Also Read  ಸುಬ್ರಹ್ಮಣ್ಯ: ಹೊಡೆದಾಟ ಪ್ರಕರಣದಲ್ಲಿ ಗುರುಪ್ರಸಾದ್ ಪಂಜ ಅವರಿಗೆ ಜಾಮೀನು ► ನ್ಯಾಯಾಲಯಕ್ಕೆ ಹಾಜರಾಗದ ಚೈತ್ರಾ ವಿರುದ್ಧ ಗರಂ ಆದ‌ ನ್ಯಾಯಾಧೀಶರು ► ನ.05 ರಂದು ಆಂಬ್ಯುಲೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲು ಆದೇಶ


ಈ ಹಿನ್ನೆಲೆಯಲ್ಲಿ ಇಂತಹ ಕಾರ್ಯ ಚಟುವಟಕೆಗಳಲ್ಲಿ ತೊಡಗಿರುವ ವ್ಯಕ್ತಿ ಅಥವಾ ಸಂಸ್ಥೆಗಳು ಅರ್ಜಿಗಳನ್ನು ಹಾಗೂ ಇಂತಹ ವ್ಯಕ್ತಿ ಅಥವಾ ಸಂಸ್ಥೆಗಳ ಬಗ್ಗೆ ಸಂಪೂರ್ಣ ಮಾಹಿತಿ ಇರುವವರು ನಾಮ ನಿರ್ದೇಶನಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರ ಕಚೇರಿಯ ಇ-ಮೇಲ್ : pressandnewsbangalore@gmail.com  ವಿಳಾಸಕ್ಕೆ ಸೆಪ್ಟೆಂಬರ್ 18 ರಂದು ರಾತ್ರಿ 9 ಗಂಟೆಯೊಳಗೆ ಕಳುಹಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

error: Content is protected !!
Scroll to Top