ಸಪೋಟ ಫಸಲು ಹರಾಜು ಪ್ರಕಟಣೆ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.13.ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತೋಟಗಾರಿಕೆ ಕ್ಷೇತ್ರಗಳಲ್ಲಿನ ಜುಲೈ 1 ರಿಂದ ಡಿಸೆಂಬರ್ 31 ಅವಧಿಯ ಸಪೋಟ ಫಸಲನ್ನು ಟೆಂಡರು ಮೂಲಕ ವಿಲೇ ಮಾಡಲಾಗುವುದು.

ಹರಾಜು ವಿವರ ಇಂತಿವೆ : ತುಂಬೆ ತೋಟಗಾರಿಕೆ ಕ್ಷೇತ್ರ, ಬಂಟ್ವಾಳ ಸೆಪ್ಟಂಬರ್ 25 ರಂದು ಮಧ್ಯಾಹ್ನ 12 ಗಂಟೆ, ವಿಟ್ಲ ತೋಟಗಾರಿಕೆ ಕ್ಷೇತ್ರ ಬಂಟ್ವಾಳ, ಸೆಪ್ಟೆಂಬರ್ 25ರಂದು ಸಂಜೆ 4 ಗಂಟೆ, ಮದ್ದಡ್ಕ ತೋಟಗಾರಿಕೆ ಕ್ಷೇತ್ರ ಬೆಳ್ತಂಗಡಿ, ಸೆಪ್ಟೆಂಬರ್ 26 ಮಧ್ಯಾಹ್ನ 12 ಗಂಟೆಗೆ ನಡೆಯಲಿವೆ. ಆಸಕ್ತರು ವಿಲೇವಾರಿ ಷರತ್ತುಗಳು ಹಾಗೂ ವಿವರಗಳನ್ನು ಅಧಿಕಾರಿ ಕಚೇರಿ ಅಥವಾ ಕ್ಷೇತ್ರಗಳಿಂದ ಪಡೆದು ಹರಾಜಿನಲ್ಲಿ ಭಾಗವಹಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08255-234102(ಬಂಟ್ವಾಳ), 08256-232148,(ಬೆಳ್ತಂಗಡಿ) ಸಂಪರ್ಕಿಸಬೇಕೆಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ರಾಜ್ಯ ವಲಯ ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.

Also Read  ಮಂಗಳೂರು: ಕಾರ್ಯಕ್ರಮವೊಂದಕ್ಕೆ ನುಗ್ಗಿ ದಾಂಧಲೆ ಪ್ರಕರಣ ➤ ಆರು ಮಂದಿ ಭಜರಂಗದಳದ ಕಾರ್ಯಕರ್ತರ ಬಂಧನ..!

error: Content is protected !!
Scroll to Top