ಹೊಂಡಗುಂಡಿಗಳಿಂದ ದುಸ್ತರಗೊಂಡಿರುವ ಕಡಬ-ಪೇರಡ್ಕ ಸಂಪರ್ಕ ರಸ್ತೆ!

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.12.ಕಲ್ಲುಗುಡ್ಡೆ, ಸೆ. 11: ಕಡಬ-ಪೇರಡ್ಕ ಸಂಪರ್ಕ ರಸ್ತೆಯಲ್ಲಿ ಅಪಾರ ಕಡೆಗಳಲ್ಲಿ ಡಾಮರು ಕಿತ್ತುಹೋಗಿ ಹೊಂಡ ಗುಂಡಿಗಳು ನಿರ್ಮಾಣಗೊಂಡಿದ್ದು, ವಾಹನ ಸವಾರರು ತೀವ್ರ ಸಂಕಷ್ಟಕೀಡಾಗಿದ್ದು, ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಕಡಬ ಹಳೆಸ್ಟೇಷನ್ ತಿರುವಿನಿಂದ ಕುಟ್ರುಪಾಡಿ ಚರ್ಚ್ ಬಳಿ ವರೆಗೆ ರಸ್ತೆ ತೀವ್ರ ದುಸ್ತರಗೊಂಡಿದ್ದು, ರಸ್ತೆಯ ಮಧ್ಯದಲ್ಲಿ ಅಲ್ಲಲ್ಲಿ ಹೊಂಡಗುಂಡಿಗಳು ಬೃಹದಾಕಾರದಲ್ಲಿ ನಿರ್ಮಾಣಗೊಂಡು ವಾಹನ ಸವಾರರು ನರಕಯಾತನೆ ಅನುಭವಿಸುತ್ತಿದ್ದಾರೆ. ಇದೀಗ ಹೊಂಡಗುಂಡಿಗಳಲ್ಲಿ ನೀರು ತುಂಬಿಕೊಂಡು ಸವಾರರಿಗೆ ಅಪಾಯವನ್ನು ತಂದೊಡ್ಡುವ ಭೀತಿ ಉಂಟಾಗಿದ್ದು, ಇನ್ನೊಂದು ವಾಹನಕ್ಕೆ ಜಾಗ ಬಿಟ್ಟು ಕೊಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣಗೊಂಡಿದೆ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕೂಡಲೇ ರಸ್ತೆಯಲ್ಲಿ ನಿರ್ಮಾಣಗೊಂಡಿರುವ ಹೊಂಡಗುಂಡಿಗಳಿಗೆ ಮುಕ್ತಿ ನೀಡಿ ನೀರು ನಿಲ್ಲದಂತೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Also Read  ಕರ್ನಾಟಕಕ್ಕೆ ನಿರಾಸೆ, ಫೈನಲ್‌ಗೆ ಸೌರಾಷ್ಟ್ರ!

error: Content is protected !!