ರೆಂಜಿಲಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ವತಿಯಿಂದ ಸಂಘದ ಸದಸ್ಯರಿಗೆ ಧನಸಹಾಯ ಹಸ್ತಾಂತರ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ,ಸಪ್ಟೆಂಬರ್.12.ರೆಂಜಿಲಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಒಕ್ಕೂಟದ ವತಿಯಿಂದ ಸಂಘದ ಸದಸ್ಯರಿಗೆ ಧನಸಹಾಯವನ್ನು ರವಿವಾರ ಹಸ್ತಾಂತರಿಸಲಾಯಿತು.


ರೆಂಜಿಲಾಡಿ ಒಕ್ಕೂಟದ ಮೀನಾಡಿ ಸಿರಿ ತಂಡದ ಸದಸ್ಯೆ ಗುಲಾಬಿರ ಅವರ ಪತಿ ಶಿವಾಜಿ ಶೆಟ್ಟಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಚಿಕಿತ್ಸೆ ಖರ್ಚಿಗಾಗಿ ರೆಂಜಿಲಾಡಿ ಒಕ್ಕೂಟದ ವತಿಯಿಂದ ಇತ್ತೀಚೆಗೆ ನಡೆದ ಪದಗ್ರಹಣ ಸಂಗ್ರಹದ ಉಳಿಕೆ ಹಣದಲ್ಲಿ ರೂ. 4 ಸಾವಿರವನ್ನು ರೆಂಜಿಲಾಡಿ ಒಕ್ಕೂಟದ ಅಧ್ಯಕ್ಷರಾದ ಸುಂದರ ಅವರು ಗುಲಾಬಿ ಅವರ ಪುತ್ರಿ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಸೇವಾಪ್ರತಿನಿಧಿ ಯಶವಂತ, ಒಕ್ಕೂಟದ ಉಸ್ತುವಾರಿ ಜನಾರ್ಧನ ಗೌಡ ಎಳುವಾಳೆ, ತಂಡದ ಸದಸ್ಯರು ಉಪಸ್ಥಿತರಿದ್ದರು.

Also Read  ಕಡಬ: ವಿಚಾರಣೆಗೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನಕ್ಕೆ ವಾರಂಟ್ ಜಾರಿ !!

error: Content is protected !!
Scroll to Top