ಅಮೇರಿಕಾದಲ್ಲಿ ನಡೆದ 24ನೇ ಅಂತರಾಷ್ಟ್ರೀಯ ಮಟ್ಟದ ಜಾಂಬೂರಿಯಲ್ಲಿ ಪಾಲ್ಗೊಂಡ ಜ್ಞಾನೋದಯ ಬೆಥನಿ ವಿದ್ಯಾರ್ಥಿಗಳಿಗೆ ಸ್ವಾಗತ ‍‍‍‍

(ನ್ಯೂಸ್ ಕಡಬ) newskadaba.com ನೆಲ್ಯಾಡಿ,ಸಪ್ಟೆಂಬರ್.9.ಬೆಥನಿ ವಿದ್ಯಾ ಸಂಸ್ಥೆಗಳ ಆತಿಥ್ಯದಲ್ಲಿ ನೆಲ್ಯಾಡಿ ಗ್ರಾಮ ಪಂಚಾಯತ್, ಪುತ್ತೂರು ತಾಲೂಕು ಪಂಚಾಯತ್ ಮತ್ತು ದ.ಕ.ಜಿಲ್ಲಾ ಪಂಚಾಯತ್ ಇದರ ಸ್ಥಳೀಯ ಜನಪ್ರತಿನಿಧಿಗಳ ಸಹಯೋಗದೊಂದಿಗೆ  ಸ್ಕೌಟ್ ಮತ್ತು ಗೈಡ್ಸ್‍ನ ಅಮೇರಿಕಾದಲ್ಲಿ ನಡೆದ 24ನೇ ಅಂತರಾಷ್ಟ್ರೀಯ ಮಟ್ಟದ ಜಾಂಬೂರಿಯಲ್ಲಿ ಪಾಲ್ಗೊಂಡು ವಾಪಸ್ ಆಗಮಿಸಿದ ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜು ನೆಲ್ಯಾಡಿಯ ಇಲ್ಲಿಯ ವಿದ್ಯಾರ್ಥಿಗಳಿಗೆ ಸ್ವಾಗತ ‍‍‍‍ಕಾರ್ಯಕ್ರಮ ನಡೆಸಲಾಯಿತು.

ಅಬ್ದುಲ್ ನಾಸಿರ್ ಮತ್ತು ತಾಹಿರಾರವರ ಪುತ್ರಿ ಅನುಷ್ಕ ಖತೀಜ , ವಸಂತ ಬಡೇಕರ್ ಮತ್ತು ಮಮತಾರವರ ಪುತ್ರಿ ಹಿಶಾ, ಶಾಜಿ ಯು.ವಿ.ಮತ್ತು ಜೈನಿ ಶಾಜಿಯವರ ಪುತ್ರ ಶರ್ವಿನ್ ಶಾಜಿ ಹಾಗೂ ಶಿಬು ವರ್ಗೀಸ್ ಮತ್ತಿ ರಿನ್ಸಿ ಶಿಬು ಅವರ ಪುತ್ರ ಎಡ್ವಿನ್ ವರ್ಗೀಸ್ ಸಂಸ್ಥೆಯ ಹೆಮ್ಮೆಯ ಈ ವಿದ್ಯಾರ್ಥಿಗಳನ್ನು ಹಾಗೂ ಅವರಿಗೆ ಪೂರ್ವ ತಯಾರಿ ನೀಡಿದ ಲೇಡಿ ಸ್ಕೌಟ್ ಮಾಸ್ಟರ್ ಪ್ರಿಯಾ ಗೈಡ್ಸ್ ಕ್ಯಾಪ್ಟನ್ ರೇಷ್ಮಾ ಯು ಇವರನ್ನು ಅಭಿನಂದಿಸಲಾಯಿತು.

ಅಧ್ಯಕ್ಷೀಯ ಸ್ಥಾನದಿಂದ ರೆ| ಡಾ| ಫಾ| ವರ್ಗೀಸ್ ಕೈಪನಡುಕ್ಕ ಅವರು ಮಾತನಾಡಿ ಈ ಅಭಿನಂದನಾ ಕಾರ್ಯಕ್ರಮವು ಎಲ್ಲಾ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ದೇಶದ ಪ್ರತಿನಿಧಿಗಳಾಗಿ ಪ್ರವಾಸಗೈದು ಬಂದ ನಮ್ಮ ವಿದ್ಯಾರ್ಥಿಗಳು ಜೀವನದಲ್ಲಿ ಎಲ್ಲಿ ಹೋದರೂ ತಮ್ಮ ಸ್ವಂತಕಾಲ ಮೇಲೆ ನಿಲ್ಲ ಬಲ್ಲರು ಎಂದು ಹೇಳಿ ಶುಭ ಹಾರೈಸಿದರು.ವೇದಿಕೆಯಲ್ಲಿ ಉಪಸ್ಥಿತರಿದ್ದ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸ್ಥಳೀಯ ಸಂಸ್ಥೆ ಉಪ್ಪಿನಂಗಡಿ ಮತ್ತು ಎ.ಡಿ.ಸಿ. ಸ್ಕೌಟ್ ಇದರ ಅಧ್ಯಕ್ಷರಾದ ಅಬ್ರಹಾಂ ವರ್ಗೀಸ್ ಮಾತನಾಡಿ ಇಂತಹಾ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ದೇಶಾಭಿಮಾನ, ಸಹೋದರತೆ, ಪ್ರೀತಿ ವಿಶ್ವಾಸ, ದೇವರಲ್ಲಿ ಭಕ್ತಿಯನ್ನು ಮೂಡಿಸುತ್ತದೆ ಎಂದು ಹೇಳಿ ಎಲ್ಲಾ ವಿದ್ಯಾರ್ಥಿಗಳನ್ನು ಅಭಿನಂದಿಸಿ ಮಾತನಾಡಿದರು.

Also Read  ದ.ಕ. ಜಿಲ್ಲೆಯಲ್ಲಿ ಇಳಿಮುಖದತ್ತ ಕೋವಿಡ್ -19 ಕೇಸ್

ನೆಲ್ಯಾಡಿ ಗ್ರಾ.ಪಂ. ಅಧ್ಯಕ್ಷರಾದ ಗಂಗಾಧರ ಶೆಟ್ಟಿ ತಮ್ಮ ಗ್ರಾ.ಪಂ. ಗೆ ಸೇರಿದ ಈ ವಿದ್ಯಾರ್ಥಿಗಳು ಅಂತರರಾಷ್ಟ್ರ ಮಟ್ಟದಲ್ಲಿ ಸಾಧನೆಗೈದಿರುವುದು ಎಲ್ಲರಿಗೂ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.ಎಲೈಟ್ ರಬ್ಬರ್ ಇಂಡಸ್ಟ್ರೀಸ್ ಮಾಲ್ಹಕರಾದ ಯು.ಪಿ.ವರ್ಗೀಸ್ ಸಂಸ್ಥೆಗೆ ಸಹಾಯ ಧನ ನೀಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಗೈಡ್ಸ್ ಕ್ಯಾಪ್ಟನ್ ರೇಷ್ಮಾ ಯು ಮತ್ತು ವಿದ್ಯಾರ್ಥಿನಿ ಅನುಷ್ಕಾ ಖತೀಜಾ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿ ಶ್ರೀ ಸಂಪತ್ ಕಾರ್ಯಕ್ರಮ ನಿರೂಪಿಸಿದರು. ಸಂಸ್ಥೆಯ ಪ್ರಾಂಶುಪಾಲರಾದ ರೆ| ಫಾ|ಮ್ಯಾಥ್ಯು ಪ್ರಫುಲ್ ಸ್ವಾಗತಿಸಿ, ಮುಖ್ಯೋಪಾಧ್ಯಾಯರಾದ ಜಾರ್ಜ್ ಕೆ ತೋಮಸ್ ವಂದಿಸಿದರು. ಈ ಸಂದರ್ಭದಲ್ಲಿ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ಖಾದರ್, ರೆ| ಫಾ| ಐಸಕ್ ಸ್ಯಾಮ್ ಒಐಸಿ ಹಾಗೂ ವಿದ್ಯಾರ್ಥಿಗಳ ಪೋಷಕರು, ಅದ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಪೋಷಕರು ಅದ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Also Read  ಬಾಳು ಬಂಗಾರ ➤ ಅಳವಡಿಸಬೇಕಾದ ಸೂತ್ರಗಳು

error: Content is protected !!
Scroll to Top