ರೈತರಿಗೆ ಪಶುವೈದ್ಯರಿಂದ ಉಪನ್ಯಾಸ

(ನ್ಯೂಸ್ ಕಡಬ) newskadaba.com ಮಂಗಳೂರು,ಸಪ್ಟೆಂಬರ್.9.ಭಾರತ ಸರ್ಕಾರದ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯ, ವತಿಯಿಂದ ರೈತರಿಗೆ ಉಪನ್ಯಾಸನ ನಡೆಯಲಿದೆ.

ರಾಷ್ಟ್ರೀಯ ಗೋಕುಲ ಮಿಷನ್ ಕಾರ್ಯಕ್ರಮದಡಿ ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಹೈನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಅನುಕೂಲವಾಗುವಂತಹ NADCP National Animal Disease control Programme for FMD & Brucellosis and National Artificial Insemination Programme ನ್ನು ಪ್ರಧಾನ ಮಂತ್ರಿಗಳು ಸೆಪ್ಟಂಬರ್ 11 ರಂದು ಮಥುರಾದಲ್ಲಿ ಉದ್ಘಾಟನೆ ಮಾಡಲಿದ್ದಾರೆ.

ಈ ಕಾರ್ಯಕ್ರಮದ ನೇರ ಪ್ರಸಾರವನ್ನು ಕೃಷಿ ವಿಜ್ಞಾನ ಕೇಂದ್ರ, ಮಂಗಳೂರು ಇಲ್ಲಿ ಏರ್ಪಡಿಸಲಾಗಿದೆ ಹಾಗೂ ರೈತರಿಗೆ ಪ್ರಾಣಿ ಜನ್ಯ ರೋಗದ ಕುರಿತು ತಜ್ಞ ಪಶುವೈದ್ಯರಿಂದ ಉಪನ್ಯಾಸವನ್ನು ಏರ್ಪಡಿಸಲಾಗಿದೆ ಮತ್ತು ಸಾಂಕೇತಿಕವಾಗಿ ಜಾನುವಾರುಗಳಿಗೆ ಲಸಿಕೆಯನ್ನು ಸಹ ಹಾಕಲಾಗುವುದು. ಈ ಕಾರ್ಯಕ್ರಮದ ಸದುಪಯೋಗ ಪಡಿಸಿಕೊಳ್ಳಲು ಹೆಚ್ಚಿನ ಸಂಖ್ಯೆಯಲ್ಲಿ ರೈತರು ಮತ್ತು ಸಾರ್ವಜನಿಕರು ಭಾಗವಹಿಸಲು ಉಪನಿರ್ದೇಶಕರು(ಆಡಳಿತ), ಪಶುಪಾಲನಾ ಇಲಾಖೆ, ದ.ಕ ಜಿಲ್ಲೆ ಇವರ ಪ್ರಕಟನೆ ತಿಳಿಸಿದೆ.

Also Read  ಮಹಿಳೆ ಮೇಲೆ ಅತ್ಯಾಚಾರ‌ ಆರೋಪ:  ಅವಳಿ ಸಹೋದರರ ತಲೆ ಬೋಳಿಸಿ ಮೆರವಣಿಗೆ ಮಾಡಿದ ಪ್ರಕರಣ ➤‌ 7 ಜನ ಆರೋಪಿಗಳ ಬಂಧನ

error: Content is protected !!
Scroll to Top