ಸರಕಾರಿ ಉ.ಹಿ.ಪ್ರಾ.ಶಾಲೆ ನೂಜಿಬಾಳ್ತಿಲ ➤ ವಿದ್ಯಾರ್ಥಿಗಳೀರ್ವರು ಖೋ ಖೋ ಪಂದ್ಯಾವಳಿಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಸಪ್ಟೆಂಬರ್.5.ನೂಜಿಬಾಳ್ತಿಲ ಸರಕಾರಿ ಉ.ಹಿ.ಪ್ರಾ.ಶಾಲಾ ವಿದ್ಯಾರ್ಥಿಗಳೀರ್ವರು ಖೋ ಖೋ ಪಂದ್ಯಾವಳಿಯಲ್ಲಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.


ಕಡಬ ಸರಕಾರಿ ಮಾದರಿ ಹಿ.ಪಾ. ಶಾಲೆಯಲ್ಲಿ ನಡೆದ ಪ್ರಾಥಮಿಕ ಶಾಲಾ ವಿಭಾಗದ ತಾಲೂಕು ಮಟ್ಟದ ಖೋ ಖೋ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ನೂಜಿಬಾಳ್ತಿಲ ಶಾಲೆಯ ವಿದ್ಯಾರ್ಥಿಗಳಾದ ವಿನೀತ್ ಹಾಗೂ ದೀಕ್ಷಿತಾ ಸೆ. 11ರಂದು ಬಂಟ್ವಾಳದಲ್ಲಿ ನಡೆಯುವ ದ.ಕ. ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಇವರಿಗೆ ನೂಜಿಬಾಳ್ತಿಲ ಶಾಲಾ ದೈಹಿಕ ಶಿಕ್ಷಣ ಶಿಕ್ಷಕ ಬಾಲಕೃಷ್ಣ ಎಂ. ತರಭೇತಿ ನೀಡಿದ್ದಾರೆ.

Also Read  ಕನ್ನಡ ಹೋರಾಟಗಾರರ ಮೇಲೆ ರೌಡಿಶೀಟ್ ಹಾಕಿದ ಪೊಲೀಸ್ ➤‌ ಕನ್ನಡಿಗರ ಆಕ್ರೋಶ

error: Content is protected !!
Scroll to Top