ರೆಂಜಿಲಾಡಿ 23ನೇ ವರ್ಷದ ಶ್ರೀ ಗಣೇಶೋತ್ಸವ

(ನ್ಯೂಸ್ ಕಡಬ) newskadaba.com ಕಡಬ, ಸಪ್ಟೆಂಬರ್.4.ರೆಂಜಿಲಾಡಿ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ಗೋಳಿಯಡ್ಕ ಶ್ರೀ ಅಯ್ಯಪ್ಪ ಧರ್ಮಶಿಖರದಲ್ಲಿ ಸೆ. 2ರಂದು 23ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ನಡೆಯಿತು.


ಅಜೇಯ ಹೆಬ್ಬಾರ್ ಸುಲ್ಕೇರಿಯವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಪ್ರಭಾತ, ಗಣಹೋಮ ನಡೆದು ಶ್ರೀ ಮಹಾಗಣಪತಿ ವಿಗ್ರಹದ ಪ್ರತಿಷ್ಠೆ, ನಡೆಯಿತು. ಬಳಿಕ ಅಪ್ಪೆಜಕ್ಕೆಲ್ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ಹಾಗೂ ನೂಜಿಬೈಲ್ ಶ್ರೀ ಧರ್ಮಛಾವಡಿ ಭಜನಾ ಕೂಟದಿಂದ ಭಜನಾ ಕಾರ್ಯಕ್ರಮ ನಡೆಯಿತು. ಮದ್ಯಾಹ್ನ ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.

ಅಪರಾಹ್ನ ಓಕುಳಿ ಏಲಂ ನಡೆದು ಗೋಳಿಯಡ್ಕ ಧರ್ಮಶಿಖರದಿಂದ ಶ್ರೀ ಮಹಾಗಣಪತಿ ದೇವರ ವಿಗ್ರಹದ ಭವ್ಯ ಶೋಭಾಯಾತ್ರೆ ನಡೆದು ಗೋಳಿಯಡ್ಕ ಅಶ್ವತ ಕಟ್ಟೆಯಲ್ಲಿ ಪೂಜೆ ನಡೆದು, ಗರ್ಗಸ್‍ಪಾಲ್, ಪೇರಡ್ಕ ಮಾರ್ಗವಾಗಿ ರಸ್ತೆಯುದ್ದಕ್ಕೂ ಭಕ್ತಾಧಿಗಳಿಂದ ಶ್ರೀ ದೇವರಿಗೆ ಹಣ್ಣುಕಾಯಿ, ಪೂಜೆ , ಸಲ್ಲಿಸುವುದರೊಂದಿಗೆ ಶೋಭಾಯಾತ್ರೆಯು ಕೇಪುಸಾರ್‍ಗೆ ತೆರಳಿ ಶ್ರೀ ಮಹಾಗಣಪತಿ ದೇವರ ವಿಗ್ರಹದ ಜಲಸ್ಥಂಭನ ನಡೆಯಿತು.

Also Read  ಮೂರು ವರುಷದ ಪ್ರೀತಿಗೆ ಮನೆಯವರಿಂದ ಸಮ್ಮತಿ ➤ ಆದರೆ ಬಾವಿಗೆ ಹಾರಿ ಆತ್ಮಹತ್ಯೆಗೆ ಶರಣಾದ ಯುವತಿ.?!!

ಸಾರ್ವಜನಿಕ ಭಕ್ತಾಧಿಗಳು ಶೋಭಾಯಾತ್ರೆಯುದಕ್ಕೂ ಶ್ರೀ ದೇವರಿಗೆ ಓಂಕಾರ ಹಾಕುತ್ತಾ ಸಾಗಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಉಮೇಶ್ ಶೆಟ್ಟಿ ಸಾಯಿರಾಂ , ಗೋಳಿಯಡ್ಕ ಧರ್ಮಶಿಖರದ ಗುರುಸ್ವಾಮಿ ರವೀಂದ್ರನ್, ಗೋಳಿಯಡ್ಕ ರಾಜನ್ ದೈವಸ್ಥಾನದ ಆಡಳಿತ ಸಮಿತಿ ಕಾರ್ಯದರ್ಶಿ ರಾಜೇಂದ್ರ ಪಲಯನಡ್ಕ, ಗೋಳಿತಡ್ಕ ಧರ್ಮಶಿಖರದ ಆಡಳಿತ ಮಂಡಳಿ ಅಧ್ಯಕ್ಷ ಪ್ರಭಾಕರ ಪದಕ, ಸೇರಿದಂತೆ ಭಕ್ತಾಧಿಗಳು ಉಪಸ್ಥಿತರಿದ್ದರು.

Also Read  ಬಾಲಶಕ್ತಿ ಪುರಸ್ಕಾರ ಮತ್ತು ಬಾಲ ಕಲ್ಯಾಣ ಪುರಸ್ಕಾರಕ್ಕೆ ➤ ಆನ್ ಲೈನ್ ಮೂಲಕ ಅರ್ಜಿ ಆಹ್ವಾನ

error: Content is protected !!
Scroll to Top