“ಮೂಲವಿಜ್ಞಾನಕ್ಕೆ ಹೆಚ್ಚು ಗಮನ ಇಂದಿನ ಅಗತ್ಯ” ➤ ಡಾ| ರೊನಾಲ್ಡ್ ನಜ್ರತ್

(ನ್ಯೂಸ್ ಕಡಬ) newskadaba.com ಮಂಗಳೂರು, ಆಗಸ್ಟ್.30.ಆಧುನಿಕ ಯುಗವು ವಿಜ್ಞಾನ ತಂತ್ರಜ್ಞಾನದ ಯುಗವಾಗಿದೆ. ಮುಂದುವರಿಯುತ್ತಿರುವ ನಮ್ಮ ದೇಶವು ಹೊಸ ಹೊಸ ವೈಜ್ಞಾನಿಕ ಸಂಶೋಧನೆ ಮಾಡುವುದರೊಂದಿಗೆ ಮೂಲ ವಿಜ್ಞಾನದ ವಿಷಯಗಳ ಕುರಿತು ಹೆಚ್ಚು ಗಮನ ನೀಡುವುದು ಅತೀ ಅಗತ್ಯ. ವಿಜ್ಞಾನದ ವಿದ್ಯಾರ್ಥಿಗಳು ಈ ಕುರಿತು ಹೆಚ್ಚು ಗಮನ ನೀಡಬೇಕು.

ಕೇಂದ್ರ ಸರಕಾರದ ಸ್ಟಾರ್ ಕಾಲೇಜು ಸ್ಕೀಮ್ ಇದಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತದೆ ಎಂದು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ| ರೊನಾಲ್ಡ್ ನಜ್ರತ್ ಹೇಳಿದರು.ಅವರು ಭಾರತ ಸರಕಾರದ ಬಯೋಟೆಕ್ನಾಲಜಿ ಇಲಾಖೆಯಿಂದ ಸ್ಟಾರ್ ಕಾಲೇಜು ಮಾನ್ಯತೆ ಪಡೆದ ಬಂಟ್ವಾಳದ ಶ್ರೀ ವೆಂಕಟರಮಣ ಸ್ವಾವಿೂ ಕಾಲೇಜಿನಲ್ಲಿ ನಡೆದ ‘ಸ್ಟಾರ್ ಕಾಲೇಜು ಸ್ಕೀಮ್‍ನ ಉದ್ಘಾಟನೆ ಹಾಗೂ ಸರಣಿ ಉಪನ್ಯಾಸ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

Also Read  ಕಡಬ: 2019-20ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ತಾಲೂಕಿನ ಕುಟ್ರುಪಾಡಿ ಗ್ರಾ.ಪಂ. ಆಯ್ಕೆ

ಸರಕಾರದ ವಿವಿಧ ಯೋಜನೆಗಳು ಇಂದು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಅದರಲ್ಲೂ ಸ್ಟಾರ್ ಕಾಲೇಜು ಯೋಜನೆ ಅತೀ ಮಹತ್ವದ್ದು. ಈ ಮಾನ್ಯತೆಯನ್ನು ಪಡೆದು ಕೊಂಡ ಕೆಲವೇ ಕಾಲೇಜುಗಳಲ್ಲಿ ಈ ಕಾಲೇಜು ಒಂದು. ಕರ್ನಾಟಕ ರಾಜ್ಯದಲ್ಲಿ ಸ್ಟಾರ್ ಮಾನ್ಯತೆ ಪಡೆದ ಕಾಲೇಜುಗಳು ಒಟ್ಟು 11, ಅದರಲ್ಲಿ ಈ ಕಾಲೇಜು ಒಂದು ಎಂದವರು ಹೇಳಿದರು.ಕಾಲೇಜಿನ ಪ್ರಾಂಶುಪಾಲರಾದ ಡಾ| ಪಾಂಡುರಂಗ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ಉಪಪ್ರಾಂಶುಪಾಲರಾದ ಡಾ| ಹೆಚ್ ಆರ್ ಸುಜಾತ ಸ್ವಾಗತಿಸಿದರು. ಸಂಯೋಜಕಿ ಶ್ರುತಿ ವಂದಿಸಿದರು. ವಿದ್ಯಾರ್ಥಿನಿ ಕಾವ್ಯಾ ಪ್ರಭು ನಿರೂಪಿಸಿದರು.

Also Read  ಪುತ್ತೂರು, ಕಡಬ ತಾಲೂಕಿನಲ್ಲಿ ಇಂದು 30 ಮಂದಿಯಲ್ಲಿ ಕೊರೋನಾ ಸೋಂಕು ಪತ್ತೆ

error: Content is protected !!
Scroll to Top